ಪಾಕ್ ನಗರಗಳಲ್ಲಿ ಕ್ರೈಸ್ತರಿಂದ ಮಾಡಿಸಲಾಗುತ್ತದೆ ಚರಂಡಿ ಸ್ವಚ್ಚತೆ !

ಭಾರತದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯವಾಗುತ್ತದೆ ಎಂದು ಆರೋಪ ಕೇಳಿಬಂದಾಗ ಅದರ ಬಗ್ಗೆ ಮಾತನಾಡುವ ಭಾರತದ ಕ್ರೈಸ್ತರು ಅಥವಾ ವ್ಯಾಟಿಕನ್ ಸಿಟಿಯವರು ಪಾಕಿಸ್ತಾನದಲ್ಲಿ ಕ್ರೈಸ್ತರ ಸ್ಥಿತಿಯ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ ?

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕ್‌ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಅಲ್ಲಿಯ ಕ್ರೈಸ್ತರಿಗೆ ಬಲವಂತವಾಗಿ ಚರಂಡಿ ಸ್ವಚ್ಚತೆಯ ಕೆಲಸಕ್ಕೆ ಹಾಕುತ್ತಾರೆ. ಅಲ್ಲಿಯ ಅನೇಕ ಹಿಂದುಳಿದ ವರ್ಗದವರು ಕ್ರೈಸ್ತಧರ್ಮವನ್ನು ಸ್ವೀಕಾರ ಮಾಡಿದ್ದಾರೆ; ಆದರೂ ಅವರಿಂದ ಚರಂಡಿ ಸ್ವಚ್ಚತೆಯನ್ನು ಮಾಡಿಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಅವರಿಗೆ ಮಾಸ್ಕ್ ಅಥವಾ ಕೈಗವಸುಗಳನ್ನು ಕೊಡುತ್ತಿಲ್ಲ. ಇದರಿಂದ ಅನೇಕ ಜನರು ಮೃತಪಟ್ಟಿದ್ದಾರೆ, ಎಂಬ ಮಾಹಿತಿಯನ್ನು ‘ದ ನ್ಯೂಯಾರ್ಕ್ ಟೈಮ್ಸ್’ವು ಪ್ರಕಾಶಿಸಿದೆ. ಪಾಕಿಸ್ತಾನದ ಕರಾಚಿಯಂತಹ ದೊಡ್ಡ ನಗರಗಳಲ್ಲಿ ಪುರಸಭೆಯಲ್ಲಿ ಚರಂಡಿ ಸ್ವಚ್ಚತೆಯ ಕೆಲಸವನ್ನು ಕ್ರೈಸ್ತರೇ ಮಾಡುತ್ತಿದ್ದಾರೆ. ೩ ಚರಂಡಿಗಳನ್ನು ಸ್ವಚ್ಚ ಮಾಡಿದ ನಂತರ ಅವರಿಗೆ ಕೇವಲ ೫೦೦ ರೂಪಾಯಿ ನೀಡಲಾಗುತ್ತದೆ. ಜುಲೈ ೨೦೧೯ ರಲ್ಲಿ ಪಾಕ್‌ನ ದೈನಿಕದಲ್ಲಿ ಪಾಕ್ ಸೈನ್ಯವು ಜಾಹೀರಾತನ್ನು ನೀಡಿತ್ತು. ಅದರಲ್ಲಿ ‘ಚರಂಡಿ ಸ್ವಚ್ಚತೆಗಾಗಿ ಕೇವಲ ಕ್ರೈಸ್ತರು ಅರ್ಜಿಯನ್ನು ಸಲ್ಲಿಸಬೇಕು’, ಎಂದು ಹೇಳಲಾಗಿತ್ತು. ನಂತರ ಕೆಲವು ಸಂಘಟನೆಗಳು ಇದಕ್ಕೆ ವಿರೋಧಿಸಿದಾಗ ಈ ಷರತ್ತನ್ನು ಹಿಂಪಡೆಯಲಾಗಿತ್ತು.