ಮುಂದಿನ ೬ ತಿಂಗಳಲ್ಲಿ ಪ್ರತಿದಿನ ೬,೦೦೦ ಕ್ಕೂ ಹೆಚ್ಚು ಮಕ್ಕಳು ಸಾಯುವ ಸಾಧ್ಯತೆಯಿದೆ! – ಯುನಿಸೆಫ್

ಆರೋಗ್ಯ ಸೇವೆಯ ಮೇಲೆ ಕರೋನಾದ ಪ್ರಭಾವದಿಂದಾದ ಒತ್ತಡದ ಪರಿಣಾಮ !

ನವ ದೆಹಲಿ : ಕರೋನಾ ಬಿಕ್ಕಟ್ಟು ಮಕ್ಕಳ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ತಕ್ಷಣದ ಕ್ರಮ ತೆಗೆದುಕೊಳ್ಳಲು ವಿಫಲವಾದರೆ ೫ ವರ್ಷದೊಳಗಿನ ಮಕ್ಕಳ ಸಾವಿನ ಅಪಾಯ ಹೆಚ್ಚಾಗಬಹುದು. ಮುಂದಿನ ಆರು ತಿಂಗಳಲ್ಲಿ ಪ್ರತಿದಿನ ೬,೦೦೦ ಕ್ಕೂ ಹೆಚ್ಚು ಮಕ್ಕಳು ಸಾಯುವ ಸಾಧ್ಯತೆಯಿದೆ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದ್ದಾರೆ. ಈ ಮಕ್ಕಳಿಗೆ ಆರೋಗ್ಯ ಸೇವೆ ಒದಗಿಸಲು ೧೬೦ ಕೋಟಿ ಡಾಲರ್‌ನ ಅಗತ್ಯವಿದೆ ಎಂದೂ ಹೇಳಿದ್ದಾರೆ.