ಗುಜರಾತ ಪೊಲೀಸರಿಂದ ೨ ಭೂತಗಳ ವಿರುದ್ಧ ದೂರು ದಾಖಲು !

ರಾಜ್ಯದ ಪಂಚಮಹಾಲದಲ್ಲಿ ವರಸಂಗ ಬಾರಿಯಾ ಎಂಬ ವ್ಯಕ್ತಿಯು ೨ ಭೂತಗಳ ವಿರುದ್ಧ ಜಾಂಭೂಘೋದಾ ಪೊಲೀಸು ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಭೂತಗಳ ಗುಂಪೊಂದು ಅವರ ಬಳಿ ಬಂದಿತ್ತು ಮತ್ತು ಅವುಗಳಲ್ಲಿ ೨ ಭೂತಗಳು ನನ್ನನ್ನು ಕೊಲ್ಲುವುದಾಗಿ ಬೆದರಿಕೆಯನ್ನು ನೀಡಿದವು, ಎಂದು ಬಾರಿಯಾ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದಕ್ಕೆ ಟ್ವಿಟರ್ ವಿರುದ್ಧ ಅಪರಾಧ ದಾಖಲು !

ದೇಶದಾದ್ಯಂತ ಟ್ವಿಟರ್ ವಿರುದ್ಧ ಒಟ್ಟು ೪ ಅಪರಾಧಗಳನ್ನು ನೊಂದಾಯಿಸಲಾಗಿದೆ. ಅದರಲ್ಲಿ ತಪ್ಪಾದ ಭೂಪಟ ತೋರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ, ಸಾಮಾಜಿಕ ಸೌಹಾರ್ದ ಕೆಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಹಾಗೂ ಸಣ್ಣ ಮಕ್ಕಳ ಸಂಬಂಧಿಸಿದಂತೆ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿರುವ ಪ್ರಕರಣದಲ್ಲಿ ದೆಹಲಿಯ ಪೊಲೀಸರ ಸೈಬರ್ ಶಾಖೆಯಲ್ಲಿ ಅಪರಾಧ ದಾಖಲಾಗಿದೆ.

ದೇವಾಲಯದ ಮೂರ್ತಿಯು ಸಣ್ಣ ಮಗುವಿನಂತೆ ಇರುವುದರಿಂದ ನ್ಯಾಯಾಲಯವೇ ಅದರ ಸಂಪತ್ತಿನ ರಕ್ಷಣೆಯನ್ನು ಮಾಡಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ನ್ಯಾಯಾಲಯವು ಯಾವ ಸಂಪತ್ತಿನ ಬಗ್ಗೆ ನಿರ್ಐಯ ನೀಡಿತೋ, ಆ ಸಂಪತ್ತನ್ನು ಬ್ರಿಟಿಷರು ೧೮೬೩ ರಲ್ಲಿ ಬಳುವಳಿ ಎಂದು ಕೆಲವು ಜನರಿಗೆ ನೀಡಿತ್ತು. ‘ಈ ಭೂಮಿಯ ಮೇಲೆ ನಮ್ಮ ಅನೇಕ ಪೀಳಿಗೆಯಿಂದ ಅಧಿಕಾರವಿದೆ’, ಎಂದು ಕುಟುಂಬದವರು ನ್ಯಾಯಾಲಯದಲ್ಲಿ ಹೇಳಿದ್ದರು. ಅದೇರೀತಿ ಈ ಭೂಮಿಯ ಬಾಡಿಗೆಯನ್ನೂ ಕೂಡಾ ದೇವಸ್ಥಾನಕ್ಕೆ ನೀಡುತ್ತಿದ್ದೆವು ಎಂದು ಹೇಳಿದ್ದರು.

ಆರೋಪಿಯ ವಿರೋಧದ ‘ಕೊಕಾ’ವನ್ನು ರದ್ದು ಪಡಿಸಿದ ಉಚ್ಚ ನ್ಯಾಯಾಲಯದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು !

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ೬ ನೇ ಆರೋಪಿ ಮೊಹನ ನಾಯಕ್ ಇವರ ಮೇಲಿನ ‘ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜ್ಡ್ ಕ್ರೈಮ್ ಆಕ್ಟ'(ಕೊಕಾ) ಅಡಿಯಲ್ಲಿನ ಅಪರಾಧವನ್ನು ರದ್ದುಪಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು.

ಭಾರತೀಯ ನಕಾಶೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖಅನ್ನು ಬೇರ್ಪಡಿಸಿದ ಟ್ವಿಟರ್‌ ವಿರುದ್ಧ ದೂರು ದಾಖಲು

ಭಾರತದ ನಕಾಶೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖನ್ನು ಬೇರ್ಪಡಿಸಿದ ಟ್ವಿಟರ್‌ ವಿರುದ್ಧ ಸ್ಥಳೀಯ ಬಜರಂಗ ದಳದ ನಾಯಕರು ಪೊಲೀಸರಲ್ಲಿ ದೂರನ್ನು ನೀಡಿದ ನಂತರ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಷ ಮಾಹೇಶ್ವರಿಯವರ ಮೇಲೆ ದೂರು ದಾಖಲಿಸಲಾಗಿದೆ.

ಮಹಾರಾಷ್ಟ್ರದ ರಾಯಗಡನ ಖ್ಯಾತ ವೈದ್ಯ ಮತ್ತು ಸನಾತನದ ೩೫ ನೇ ಸಂತರಾದ ಆಯುರ್ವೇದ ಪ್ರವೀಣ ಪೂ. ವೈದ್ಯ ವಿನಯ ಭಾವೆ (೬೯ ವರ್ಷ) ಇವರ ದೇಹತ್ಯಾಗ !

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ವರಸಯಿ ಮೂಲದ ಖ್ಯಾತ ವೈದ್ಯ ಮತ್ತು ಸನಾತನದ ೩೫ ನೇ ಸಂತ ಆಯುರ್ವೇದ ಪ್ರವೀಣ ಪೂ. ವೈದ್ಯ ವಿನಯ ನೀಳಕಂಠ ಭಾವೆ (೬೯ ವರ್ಷಗಳು) ಇವರು ಜೂನ್ ೨೫ ರಂದು ರಾತ್ರಿ ೧೦ ಗಂಟೆಗೆ ರತ್ನಾಗಿರಿಯಲ್ಲಿ ದೇಹತ್ಯಾಗ ಮಾಡಿದರು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶೌರ್ಯಜಾಗೃತಿ ವ್ಯಾಖ್ಯಾನ ಸಂಪನ್ನ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಶೌರ್ಯ ಜಾಗೃತಿ ವ್ಯಾಖ್ಯಾನದ ಆಯೋಜನೆ ಮಾಡಲಾಗಿತ್ತು. ಮುಂಬರುವ ಅಪತ್ಕಾಲದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಇದರ ಕುರಿತು ವ್ಯಾಖ್ಯಾನದ ಅಯೋಜನೆಯನ್ನು ಮಾಡಲಾಯಿತು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ’ ಶಿಬಿರ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ‘ಆನ್‌ಲೈನ್ ಮೂಲಕ ಧರ್ಮಪ್ರೇಮಿಗಳಿಗೆ ಮತ್ತು ಹಿಂದುತ್ವನಿಷ್ಠರಿಗೆ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಕು. ಶಿಲ್ಪಾ ಗೌಡರ ಶಿಬಿರದ ಸೂತ್ರ ಸಂಚಲನೆಯನ್ನು ಮಾಡಿದರು.

೩೧ ಜುಲೈ ತನಕ ಎಲ್ಲಾ ರಾಜ್ಯಗಳಲ್ಲಿ ‘ವನ್ ನೇಶನ್, ವನ್ ರೇಶನ್ ಕಾರ್ಡ್’ ಯೋಜನೆಯನ್ನು ಜಾರಿಗೆ ತನ್ನಿ ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯವು ದೇಶದ ಎಲ್ಲ ರಾಜ್ಯಗಳಲ್ಲಿ ಜುಲೈ ೩೧ ರ ಒಳಗೆ ‘ವನ್ ನೇಶನ್, ವನ್ ರೇಶನ್ ಕಾರ್ಡ್’ ಯೋಜನೆಯನ್ನು ಜಾರಿಗೆ ತರುವಂತೆ ಆದೇಶ ನೀಡಿದೆ. ನ್ಯಾಯಾಲಯವು ಈ ಆಯೋಜನೆಯನ್ನು ರೂಪಿಸುವ ಬಗ್ಗೆ ಕೆಲವು ಸೂಚನೆಗಳನ್ನೂ ನೀಡಿದೆ.

ಮೆರಠ(ಉತ್ತರಪ್ರದೇಶ)ನಲ್ಲಿ ಓರ್ವ ಸಾಧುವನ್ನು ಕಲ್ಲಿನಿಂದ ಜಜ್ಜಿ ಹತ್ಯೆ

ಉತ್ತರಪ್ರದೇಶದಲ್ಲಿ ನಿರಂತರವಾಗಿ ಸಾಧು, ಮಹಂತ ಮುಂತಾದವರ ಹತ್ಯೆಯಾಗುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !