ಗೋಲಪಾರಾದಲ್ಲಿನ ಮದರಸಾವನ್ನು ಸ್ಥಳೀಯರು ನೆಲೆಸಮ ಮಾಡಿದ ನಂತರ ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರ ಹೇಳಿಕೆ

ಅಸ್ಸಾಂನ ಗೋಲುಪಾರಾದಲ್ಲಿ ಸ್ಥಳೀಯ ಜನರು ಸಂಘಟತರಾಗಿ ಒಂದು ಮದರಸಾವನ್ನು ನೆಲಸಮ ಮಾಡಿದ್ದಾರೆ. ಈ ವಿಷಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು, ನಾವು ನೆಲಸಮ ಮಾಡಿದ ಮದರಸಾವು ಮದರಸಾ ಆಗಿದಲಿಲ್ಲ, ಬದಲಾಗಿ ಅದು ಅಲ್ ಕಾಯ್ದಾದ ತಾಣಗಳಾಗಿದ್ದವು.

ಯತಿ ನರಸಿಂಹಾನಂದರಿಂದ ಡಿಸೆಂಬರ ತಿಂಗಳಲ್ಲಿ ಧರ್ಮಸಂಸತ್ತಿನ ಆಯೋಜನೆ

ಇದರಲ್ಲಿ ಸಾಧು-ಸಂತರು ಭಾಗವಹಿಸುವರು. ಇದೇ ವರ್ಷ ಹರಿದ್ವಾರದಲ್ಲಿ ಅವರು ಆಯೋಜಿಸಿದ ಧರ್ಮಸಂಸತ್ತಿನಲ್ಲಿ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರೆಂದು ಅಪರಾಧವನ್ನು ದಾಖಲಿಸಲಾಗಿತ್ತು.

ಅಲೀಗಡ (ಉತ್ತರಪ್ರದೇಶ)ದಲ್ಲಿನ ಒಂದು ಹಳ್ಳಿಯಲ್ಲಿ ಮುಸಲ್ಮಾನರು ಹಿಂದೂ ಹುಡುಗಿಗೆ ಪೀಡಿಸುತ್ತಿದ್ದ ಕಾರಣ ಅವರು ಪಲಾಯನ ಗೈಯ್ಯುವ ಸಿದ್ಧತೆಯಲ್ಲಿ

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆ ನಡೆಯಲೇ ಬಾರದೆಂದು ಹಿಂದೂಗಳಿಗನಿಸುತ್ತದೆ ! ಹಿಂದೂಗಳಿಗೆ ಸಹಕರಿಸದಿರುವ ಪೊಲೀಸರ ವಿರುದ್ಧ ಸರಕಾರ ಕ್ರಮತೆಗೆದುಕೊಳ್ಳಬೇಕು !

ಶ್ರೀ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ರೂಬಿ ಖಾನರಿಂದ ಉತ್ಸಾಹದಿಂದ ಮೂರ್ತಿಯ ವಿಸರ್ಜನೆ !

ಇಲ್ಲಿಯ ಮುಸಲ್ಮಾನ ಮಹಿಳೆ ರೂಬಿ ಖಾನ ತಮ್ಮ ಮನೆಯಲ್ಲಿ ಶ್ರೀ ಗಣೇಶ ಚತುರ್ಥಿಯಂದು ಸ್ಥಾಪನೆ ಮಾಡಿದ್ದ ಶ್ರೀ ಗಣೇಶಮೂರ್ತಿಯನ್ನು ವಿಧಿವತ್ತಾಗಿ ವಿಸರ್ಜಿಸಿದರು. ಮೂರ್ತಿಯ ಸ್ಥಾಪನೆ ಮಾಡಿದ್ದರಿಂದ ಅವರ ವಿರುದ್ಧ ಮೌಲ್ವಿ(ಇಸ್ಲಾಂ ಅಧ್ಯಯನಕಾರರು) ಫತ್ವಾ ಹೊರಡಿಸಿದ್ದರು.

ಜಬಲಪುರ್ (ಮಧ್ಯಪ್ರದೇಶ) ಇಲ್ಲಿಯ ಕ್ರೈಸ್ತ ಬಿಷಪಿನ ಮನೆಯಿಂದ ೧ ಕೋಟಿ ೬೫ ಲಕ್ಷ ರೂಪಾಯ ಲೆಕ್ಕ ಇಲ್ಲದ ನಗದು ಹಣ ಜಪ್ತು

‘ದ ಬೋರ್ಡ್ ಆಫ್ ಎಜುಕೇಶನ್ ಚರ್ಚ್ ಆಫ ನಾರ್ಥ ಇಂಡಿಯಾ’ದ ಅಧ್ಯಕ್ಷ ಬಿಷಪ್ ಪಿ.ಸಿ. ಸಿಂಹ ಇವರ ಮೇಲೆ ಆರ್ಥಿಕ ಅನ್ವೇಷಣಾ ಇಲಾಖೆಯ(ಇಔW) ಅಧಿಕಾರಿಗಳು ದಾಳಿ ನಡೆಸಿ ೧ ಕೋಟಿ ೬೫ ಲಕ್ಷ ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ.

ಮುಂಬಯಿಯಲ್ಲಿನ ಭಯೋತ್ಪಾದಕ ಯಾಕುಬ್ ಮೆನನ್ ಇವನ ಘೋರಿಯ ವೈಭವೀಕರಣ

೧೯೯೩ ರಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದಲ್ಲಿ ೨೫೭ ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಪ್ರಮುಖ ಭಯೋತ್ಪಾದಕ ಯಾಕುಬ್ ಮೆನನ್ ಇವನಿಗೆ ೨೦೧೫ ರಲ್ಲಿ ನಾಗಪುರದಲ್ಲಿ ಗಲ್ಲು ಶಿಕ್ಷೆ ನೀಡಿದ ನಂತರ ಅವನನ್ನು ಮುಂಬಯಿಯಲ್ಲಿ ಹೂಳಲಾಗಿತ್ತು. ಅವನ ಘೋರಿಯನ್ನು ಅಲಂಕರಿಸಿ ಮಜಾರ ಆಗಿ ರೂಪಾಂತರ ಗೊಳಿಸುವ ಕಾರಾಸ್ಥಾನ ‘ಎಬಿಪಿ ಮಾಝಾ’ ಈ ವಾರ್ತಾ ವಾಹಿನಿ ಬಹಿರಂಗಗೊಳಿಸಿದೆ.

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧದ ಆಂದೋಲನಕ್ಕೆ ಅನುಮತಿ ನಿರಾಕರಿಸಿದರು

ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಭಾರತ ಭೇಟಿ !

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘಿಸುತ್ತಾ ಅಂತರರಾಷ್ಟ್ರೀಯ ಗಡಿಯಲ್ಲಿ ಗುಂಡಿನ ದಾಳಿ

ಪಾಕಿಸ್ತಾನ ನಂಬಿಕಸ್ಥನಲ್ಲ, ಎನ್ನುವುದು ಆಯಾ ಸಮಯದಲ್ಲಿ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಕದನ ವಿರಾಮದ ನಿಯಮವನ್ನು ಅದು ಪಾಲಿಸುವ ಸಾಧ್ಯತೆ ಕಡಿಮೆಯಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತ ಯಾವಾಗಲೂ ಜಾಗೃತವಾಗಿರುವ ಆವಶ್ಯಕತೆಯಿದೆ !