ಅಲೀಗಡ (ಉತ್ತರಪ್ರದೇಶ)ದಲ್ಲಿನ ಒಂದು ಹಳ್ಳಿಯಲ್ಲಿ ಮುಸಲ್ಮಾನರು ಹಿಂದೂ ಹುಡುಗಿಗೆ ಪೀಡಿಸುತ್ತಿದ್ದ ಕಾರಣ ಅವರು ಪಲಾಯನ ಗೈಯ್ಯುವ ಸಿದ್ಧತೆಯಲ್ಲಿ

ಸಂತ್ರಸ್ತೆಯ ತಂದೆಯ ವಿರುದ್ಧ ಪೊಲೀಸರು ಅಪರಾಧವನ್ನು ದಾಖಲಿಸಿರುವುದರಿಂದ ಹಿಂದೂಗಳು ಅಸಮಧಾನ

ಅಲೀಗಡ (ಉತ್ತರಪ್ರದೇಶ) – ಇಲ್ಲಿ ಹಿಂದೂ ಹುಡುಗಿಗೆ ಮುಸಲ್ಮಾನ ಯುವಕರು ಪೀಡಿಸುತ್ತಿದ್ದ ಕಾರಣ ಹಿಂದೂಗಳು ಅಲ್ಲಿಂದ ಪಲಾಯನ ಗೈಯ್ಯುವ ಸಿದ್ಧತೆಯಲ್ಲಿದ್ದಾರೆ. ಅವರು ತಮ್ಮ ಮನೆಯ ಮುಂದೆ ‘ಮನೆ ಮಾರಾಟಕ್ಕಿದೆ’, ಎಂದು ಫಲಕವನ್ನು ಹಚ್ಚಿದ್ದಾರೆ. ಇಲ್ಲಿನ ಹಿಂದೂಗಳು ಹಿಂದುಳಿದವರಾಗಿದ್ದಾರೆ.

೧. ಹಳ್ಳಿಯಲ್ಲಿನ ಮುನ್ನಾ, ಮೊಹಸೀನ, ಇಮ್ರಾನ ಮತ್ತು ಜೀಶಾನ ಇವರು ಒಂದು ಹಿಂದೂ ಹುಡುಗಿಗೆ ಪೀಡಿಸುತ್ತಾ ಅವಳಿಗೆ ಹೊಡೆದಿದ್ದರು. ಅವಳನ್ನು ಎಳೆದು ಕೊಂಡೊಯ್ಯಲೂ ಕೂಡ ಪ್ರಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಹುಡುಗಿಯ ತಂದೆ ಪೊಲೀಸರಲ್ಲಿ ದೂರು ನೀಡಿದಾಗ ಪೊಲೀಸರು ಆರೊಪಿಯ ದೂರಿಗನ್ವಯ ಹುಡುಗಿಯ ತಂದೆಯ ವಿರುದ್ದವೂ ಅಪರಾಧವನ್ನು ದಾಖಲಿಸಿದ್ದಾರೆ. (ಹಿಂದೂಗಳಿಗೆ ಅನ್ಯಾಯ ಆಗಿರುವಾಗ ಅವರಿಗೆ ಆಶ್ವಾಸನೆ ನೀಡುವ ಬದಲು ಮುಸಲ್ಮಾನರ ಹೇಳಿಕೆಗನುಸಾರ ಹಿಂದೂಗಳ ವಿರುದ್ಧ ಅಪರಾಧವನ್ನು ದಾಖಲಿಸುವ ಪೊಲೀಸರು ಭಾರತದವರೇ ಅಥವಾ ಪಾಕಿಸ್ತಾನದವರೇ ? – ಸಂಪಾದಕರು) ಇದರಿಂದ ಇಲ್ಲಿನ ಹಿಂದೂಗಳು ಬೇಸರಪಟ್ಟಿದ್ದಾರೆ. ಅವರು ಪೊಲೀಸ್ ಠಾಣೆಗೆ ಹೋಗಿ ಪ್ರತಿಭಟನೆ ನಡೆಸಿದರು. ಅನಂತರ ಅವರು ಹಳ್ಳಿಯಿಂದ ಪಲಾಯನಗೈಯ್ಯುವ ಘೋಷಣೆ ನೀಡಿದರು.

೨. ಅನಂತರ ಪೊಲೀಸರು ಸಂತ್ರಸ್ತೆಯ ಮನೆಗೆ ಹೋಗಿ ಆರೋಪಿಯ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನಿಡುತ್ತಾ ‘ಮನೆ ಮಾರಾಟಕ್ಕಿದೆ’ ಎಂಬ ಫಲಕವನ್ನು ತೆಗೆದು ಹಾಕಿದರು.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆ ನಡೆಯಲೇ ಬಾರದೆಂದು ಹಿಂದೂಗಳಿಗನಿಸುತ್ತದೆ ! ಹಿಂದೂಗಳಿಗೆ ಸಹಕರಿಸದಿರುವ ಪೊಲೀಸರ ವಿರುದ್ಧ ಸರಕಾರ ಕ್ರಮತೆಗೆದುಕೊಳ್ಳಬೇಕು !