ಶ್ರೀ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ರೂಬಿ ಖಾನರಿಂದ ಉತ್ಸಾಹದಿಂದ ಮೂರ್ತಿಯ ವಿಸರ್ಜನೆ !

ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರಿಂದ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು !

ಅಲೀಗಡ (ಉತ್ತರಪ್ರದೇಶ) – ಇಲ್ಲಿಯ ಮುಸಲ್ಮಾನ ಮಹಿಳೆ ರೂಬಿ ಖಾನ ತಮ್ಮ ಮನೆಯಲ್ಲಿ ಶ್ರೀ ಗಣೇಶ ಚತುರ್ಥಿಯಂದು ಸ್ಥಾಪನೆ ಮಾಡಿದ್ದ ಶ್ರೀ ಗಣೇಶಮೂರ್ತಿಯನ್ನು ವಿಧಿವತ್ತಾಗಿ ವಿಸರ್ಜಿಸಿದರು. ಮೂರ್ತಿಯ ಸ್ಥಾಪನೆ ಮಾಡಿದ್ದರಿಂದ ಅವರ ವಿರುದ್ಧ ಮೌಲ್ವಿ(ಇಸ್ಲಾಂ ಅಧ್ಯಯನಕಾರರು) ಫತ್ವಾ ಹೊರಡಿಸಿದ್ದರು. ಆದರೂ ರೂಬಿ ಖಾನರು ಹಿಂಜರಿಯದೇ ಶ್ರೀ ಗಣೇಶನ ಪೂಜೆಯನ್ನು ಮುಂದುವರಿಸಿದ್ದರು. ರೂಬಿ ಖಾನರ ಸುರಕ್ಷತೆಗಾಗಿ ೨ ಪೊಲೀಸರನ್ನು ನೇಮಿಸಲಾಗಿದೆ.
ರೂಬಿ ಖಾನರು ಮಾತನಾಡುತ್ತಾ, ನಾನು ಮೂರ್ತಿಯ ಸ್ಥಾಪನೆಯನ್ನು ಮಾಡಿದ್ದರಿಂದ ನನಗೆ ಇಸ್ಲಾಂನಿಂದ ಬಹಿಷ್ಕರಿಸುವ ಮತ್ತು ನನ್ನ ಕುಟುಂಬವನ್ನು ಜೀವಂತ ಸುಡುವುದಾಗಿ ಬೆದರಿಕೆ ಸಿಗುತ್ತಿದ್ದವು. ಮನೆಯಿಂದ ಹೊರಗೆ ಹೊರಟಾಗ ‘ನಾನು ಹಿಂದೂ ಮಹಿಳೆ ರಸ್ತೆಯಲ್ಲಿ ಹೋಗುತ್ತಿದ್ದಾಳೆ’, ಎಂದು ಕೊಂಕು ನುಡಿಯುತ್ತಿದ್ದರು. ನಾನು ಫತ್ವಾಗಳಿಗೆ ಹೆದರುವುದಿಲ್ಲ. ನಾನು ಉತ್ಸಾಹದಿಂದ ಶ್ರೀ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿದೆ ಮತ್ತು ಅದೇ ಉತ್ಸಾಹದಿಂದ ವಿಸರ್ಜನೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಯಾವುದೇ ಒಬ್ಬ ಮುಸಲ್ಮಾನನು ಹಿಂದೂಗಳ ಧಾರ್ಮಿಕ ಕೃತಿಯನ್ನು ಮಾಡಿದರೆ, ತಕ್ಷಣವೇ ಮತಾಂಧರು ಅದನ್ನು ವಿರೋಧಿಸುತ್ತಾರೆ ಮತ್ತು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ, ಈ ವಿಷಯದಲ್ಲಿ ಜಾತ್ಯತಿತವಾದಿ ಮತ್ತು ಪ್ರಗತಿ(ಅಧೋ)ಪರರು ಮೌನವಾಗಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !