ಯತಿ ನರಸಿಂಹಾನಂದರಿಂದ ಡಿಸೆಂಬರ ತಿಂಗಳಲ್ಲಿ ಧರ್ಮಸಂಸತ್ತಿನ ಆಯೋಜನೆ

ಮಹಂತ ಯತಿ ನರಸಿಂಹಾನಂದ ಸರಸ್ವತಿ

ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿನ ಡಾಸ್ನಾದಲ್ಲಿನ ಶಿವ-ಶಕ್ತಿ ಧಾಮದ ಮಹಂತ ಯತಿ ನರಸಿಂಹಾನಂದ ಸರಸ್ವತಿ ಇವರು ಈ ವರ್ಷ ಡಿಸೆಂಬರ ೧೭ ಮತ್ತು ೧೮ ರಂದು ನಗರದಲ್ಲಿ ಧರ್ಮಸಂಸತ್ತನ್ನು ಆಯೋಜಿಸಿದ್ದಾರೆ. ಇದರಲ್ಲಿ ಸಾಧು-ಸಂತರು ಭಾಗವಹಿಸುವರು. ಇದೇ ವರ್ಷ ಹರಿದ್ವಾರದಲ್ಲಿ ಅವರು ಆಯೋಜಿಸಿದ ಧರ್ಮಸಂಸತ್ತಿನಲ್ಲಿ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರೆಂದು ಅಪರಾಧವನ್ನು ದಾಖಲಿಸಲಾಗಿತ್ತು. ಅದೇ ರೀತಿ ಈ ಪ್ರಕರಣದಲ್ಲಿ ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸೀಮ್ ರಿಝ್ವಿ) ಇವರನ್ನು ಬಂದಿಸಲಾಗಿದೆ.


ಮಹಂತ ಯತಿ ನರಸಿಂಹಾನಂದರು, ಈ ಹಿಂದೆ ಡಾಸ್ನಾ ಹಿಂದೂ ಬಹುಸಂಖ್ಯಾತ ಪ್ರದೇಶವಾಗಿತ್ತು; ಆದರೆ ಇಲ್ಲಿನ ಹಿಂದೂ ವ್ಯಾಪಾರಿಗಳು ಉದ್ಯೋಗದ ನಿಮಿತ್ತ ಬೇರೆ ಕಡೆಗೆ ಹೋಗಿ ನೆಲೆಸಿದರು. ಆದ್ದರಿಂದ ಈಗ ಇಲ್ಲಿ ಶೇ. ೯೫ ರಷ್ಟು ಮುಸಲ್ಮಾನರಿದ್ದಾರೆ. ಅವರು ಇಲ್ಲಿ ತಮ್ಮ ಜನಸಂಖ್ಯೆಯನ್ನು ಶೀಘ್ರಗತಿಯಲ್ಲಿ ಹೆಚ್ಚಿಸಿದ್ದಾರೆ ಎಂದು ಹೇಳಿದರು.