ಗೋಲಪಾರಾದಲ್ಲಿನ ಮದರಸಾವನ್ನು ಸ್ಥಳೀಯರು ನೆಲೆಸಮ ಮಾಡಿದ ನಂತರ ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರ ಹೇಳಿಕೆ

ಯಾವುದು ನೆಲಸಮ ಮಾಡಲಾಗಿದೆ ಅದು ಮದರಸಾಗಳಲ್ಲ, ಅವು ಅಲ್ ಕಾಯ್ದಾದ ತಾಣ ಆಗಿದೆ !

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗೋಹಾಟಿ (ಅಸ್ಸಾಂ) – ಅಸ್ಸಾಂನ ಗೋಲುಪಾರಾದಲ್ಲಿ ಸ್ಥಳೀಯ ಜನರು ಸಂಘಟತರಾಗಿ ಒಂದು ಮದರಸಾವನ್ನು ನೆಲಸಮ ಮಾಡಿದ್ದಾರೆ. ಈ ವಿಷಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು, ನಾವು ನೆಲಸಮ ಮಾಡಿದ ಮದರಸಾವು ಮದರಸಾ ಆಗಿದಲಿಲ್ಲ, ಬದಲಾಗಿ ಅದು ಅಲ್ ಕಾಯ್ದಾದ ತಾಣಗಳಾಗಿದ್ದವು. ನಾವು ೨-೩ ಮದರಸಾಗಳನ್ನು ಇಲ್ಲಿಯವರೆಗೆ ನೆಲಸಮ ಮಾಡಿದ್ದೇವೆ. ಆದರೆ ಈಗ ಜನರು ತಾವಾಗಿಯೇ ಅವುಗಳನ್ನು ನೆಲೆಸಮ ಮಾಡುತ್ತಿದ್ದಾರೆ. ಸ್ಥಳೀಯ ಮುಸಲ್ಮಾನರೇ ಮುಂದೆ ಬಂದು ಅವುಗಳನ್ನು ನೆಲಸಮ ಮಾಡುತ್ತಾ, ನಮಗೆ ಇಲ್ಲಿ ಅಲ್ ಕಾಯ್ದಾದ ಚಟುವಟಿಕೆಗಳು ನಡೆಯುತ್ತವೆ ಅಂತಹ ಮದರಸಗಳು ನಮಗೆ ಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಗೋಲಪಾರಾದ ಮದರಸಾದ ಸಂಚಾಲಕ ಜಲಾಲುದ್ದೀನ್ ಶೇಖ್ ಇವನು ಭಯೋತ್ಪಾದಕ ಚಟುವಟಿಕೆಯಲ್ಲಿ ಸಹಭಾಗಿ ಆಗಿರುವುದರಿಂದ ಆತನನ್ನು ಬಂಧಿಸಲಾಗಿದೆ. ಅನಿಮೂಲ್ ಇಸ್ಲಾಂ, ಉಸ್ಮಾನ್, ಮೆಹದಿ ಹಸನ್ ಮತ್ತು ಜಹಾಂಗೀರ್ ಅಲೋನ್ ಇವರಲ್ಲಿನ ಇಬ್ಬರು ಅಲ್ ಕಾಯ್ದಾ ಮತ್ತು ಅನ್ಸಾರುಲ್ಲಾಹ ಬಾಂಗ್ಲಾ ಟೀಮ್ ಈ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಬಂಧ ಪಟ್ಟವರಾಗಿದ್ದು ಅವರು ನಾಪತ್ತೆಯಾಗಿದ್ದಾರೆ.