ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘಿಸುತ್ತಾ ಅಂತರರಾಷ್ಟ್ರೀಯ ಗಡಿಯಲ್ಲಿ ಗುಂಡಿನ ದಾಳಿ

ಜಮ್ಮೂ – ಪಾಕಿಸ್ತಾನದ ಸೈನ್ಯವು ಕದನವಿರಾಮವನ್ನು ಉಲ್ಲಂಘಿಸಿ ಅಂತರರಾಷ್ಟ್ರೀಯ ಗಡಿಯಲ್ಲಿರುವ ಅರನಿಯಾ ಸೆಕ್ಟರನಲ್ಲಿ ಗುಂಡಿನ ದಾಳಿ ನಡೆಸಿತು. ಅದಕ್ಕೆ ಭಾರತದ ಗಡಿಭದ್ರತಾ ದಳದವರು ಪ್ರತ್ಯುತ್ತರ ನೀಡಿದರು. ಈ ಗುಂಡು ಹಾರಾಟದ ಎರಡೂ ದೇಶಗಳ ಸೈನ್ಯಗಳು ಧ್ವಜ ಸಭೆಯನ್ನು ಆಯೋಜಿಸಿ ಕದನ ವಿರಾಮವನ್ನು ಪಾಲಿಸಲು ಸಮ್ಮತಿಸಿತು.

ಫೆಬ್ರುವರಿ ೨೦, ೨೦೨೧ ರಂದು ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ರಚಿಸಲಾಗಿತ್ತು. ತದನಂತರ ಒಂದೆರಡು ಘಟನೆಗಳನ್ನು ಹೊರತುಪಡಿಸಿದರೆ ಶಾಂತತೆ ಉಳಿದಿದೆ. (ಗಡಿಯಲ್ಲಿ ಶಾಂತಿ ಇದ್ದರೂ, ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಪುನಃ ಹಿಂದೂಗಳನ್ನು ಗುರಿ ಮಾಡಿರುವ ಘಟನೆಗಳು ಹೆಚ್ಚಾಗಿದೆಯೆನ್ನುವುದೂ ಅಷ್ಟೇ ಸತ್ಯವಾಗಿದೆ – ಸಂಪಾದಕರು)

ಸಂಪಾದಕೀಯ ನಿಲುವು

ಪಾಕಿಸ್ತಾನ ನಂಬಿಕಸ್ಥನಲ್ಲ, ಎನ್ನುವುದು ಆಯಾ ಸಮಯದಲ್ಲಿ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಕದನ ವಿರಾಮದ ನಿಯಮವನ್ನು ಅದು ಪಾಲಿಸುವ ಸಾಧ್ಯತೆ ಕಡಿಮೆಯಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತ ಯಾವಾಗಲೂ ಜಾಗೃತವಾಗಿರುವ ಆವಶ್ಯಕತೆಯಿದೆ !