ಮುಂಬಯಿಯಲ್ಲಿನ ಭಯೋತ್ಪಾದಕ ಯಾಕುಬ್ ಮೆನನ್ ಇವನ ಘೋರಿಯ ವೈಭವೀಕರಣ

ಪೊಲೀಸರು ದೀಪಗಳನ್ನು ತೆರವುಗೊಳಿಸಿದರು !

ಮುಂಬಯಿ – ೧೯೯೩ ರಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದಲ್ಲಿ ೨೫೭ ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಪ್ರಮುಖ ಭಯೋತ್ಪಾದಕ ಯಾಕುಬ್ ಮೆನನ್ ಇವನಿಗೆ ೨೦೧೫ ರಲ್ಲಿ ನಾಗಪುರದಲ್ಲಿ ಗಲ್ಲು ಶಿಕ್ಷೆ ನೀಡಿದ ನಂತರ ಅವನನ್ನು ಮುಂಬಯಿಯಲ್ಲಿ ಹೂಳಲಾಗಿತ್ತು. ಅವನ ಘೋರಿಯನ್ನು ಅಲಂಕರಿಸಿ ಮಜಾರ ಆಗಿ ರೂಪಾಂತರ ಗೊಳಿಸುವ ಕಾರಾಸ್ಥಾನ ‘ಎಬಿಪಿ ಮಾಝಾ’ ಈ ವಾರ್ತಾ ವಾಹಿನಿ ಬಹಿರಂಗಗೊಳಿಸಿದೆ.

ಕೊರೊನಾ ಮಹಮಾರಿಯ ಸಮಯದಲ್ಲಿ ದಕ್ಷಿಣ ಮುಂಬಯಿ ಪ್ರದೇಶದಲ್ಲಿನ ಮರಿನ ಲೈನ್ಸ್ ಇಲ್ಲಿ ಬಡಾ ಕಬ್ರಿಸ್ತಾನ ಪರಿಸರದಲ್ಲಿರುವ ಯಾಕುಬ್‌ನ ಘೋರಿಯನ್ನು ಅಮೃತಶಿಲೆಯಿಂದ ಕಟ್ಟಡ ಕಟ್ಟಲಾಗಿದ್ದು ಈ ಘೋರಿಯ ಸುತ್ತ ಹೆಚ್ಚುವರಿ ಕಾಮಗಾರಿ ನಡೆಸಲಾಗಿದೆ. ಎಲ್.ಇ.ಡಿ. ದೀಪಗಳನ್ನೂ ಈ ಸ್ಥಳಗಳಲ್ಲಿ ಹಚ್ಚಲಾಗಿದೆ. ಈ ಸ್ಥಳದಲ್ಲಿರುವ ಘೋರಿಯ ಸುತ್ತಮುತ್ತ ೫-೬ ಕಬ್ರಗಳು ಕಟ್ಟಬಹುದು ಅಷ್ಟು ಜಾಗವನ್ನು ಕಬಳಿಸಿದ್ದಾರೆ. ಯಾವುದೇ ಕಬ್ರದ ಸ್ಥಳದಲ್ಲಿ ೧೮ ತಿಂಗಳಗಳ ನಂತರ ಬೇರೆಯವರನ್ನು ಹುಳಲಾಗುತ್ತದೆ. ಆದ್ದರಿಂದ ಯಾವುದೇ ಶಾಶ್ವತ ಕಟ್ಟಡ ಕಟ್ಟುವ ಅನುಮತಿ ನೀಡಲಾಗುವುದಿಲ್ಲ. ಹೀಗಿದ್ದರೂ ಸಹ ಅಲ್ಲಿ ಸದೃಢವಾದ ಕಟ್ಟಡ ಕಟ್ಟಲಾಗಿದೆ. ಆದ್ದರಿಂದ ‘ಇಷ್ಟು ವರ್ಷಗಳಲ್ಲಿ ಇಲ್ಲಿ ಯಾರನ್ನು ಹೂಳುವ ವಿಷಯವಾಗಿ ಯಾವುದೇ ಸೂತ್ರ ಹೇಗೆ ಬಹಿರಂಗವಾಗಿಲ್ಲ ?’, ಈ ಪ್ರಶ್ನೆ ಉದ್ಭವಿಸಿದೆ. ಇಲ್ಲಿಯ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಈ ಸ್ಥಳ ಮಾರುವ ಪ್ರಯತ್ನ ಮಾಡಿರುವ ಚರ್ಚೆ ನಡೆದಿದೆ.

ಈ ಸಂದರ್ಭದಲ್ಲಿ ಸಪ್ಟೆಂಬರ್ ೭ ರಂದು ವಾರ್ತೆ ಪ್ರಸಾರವಾದ ನಂತರ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿ ಇವರ ಪಡೆಯು ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಈ ಸ್ಥಳಕ್ಕೆ ಸಂರಕ್ಷಣೆ ನೀಡಲಾಗಿದೆ.

ಪೊಲೀಸರು ಕಬ್ರದ ಹತ್ತಿರದ ದೀಪಗಳನ್ನು ತೆರೆವುಗೊಳಿಸಿದ್ದಾರೆ !

ಘೋರಿಯ ಹತ್ತಿರ ಎಲ್.ಇ.ಡಿ. ದೀಪಗಳು ಮತ್ತು ಮೇಲಿನ ಹಾಲೋಜನ್ ದೀಪಗಳು ತೆಗೆದಿದ್ದಾರೆ ಹಾಗೂ ಅಲ್ಲಿಯ ವಿದ್ಯುತ್ ಪೂರೈಕೆ ನೀಡುವ ತಂತಿಗಳು ಪೊಲೀಸರು ತೆಗೆದು ಹಾಕಿದ್ದಾರೆ.

ಬಡಾ ಕಬ್ರಸ್ತಾನಿನ ಸ್ಪಷ್ಟನೆ !

ಇಲ್ಲಿ ಅನೇಕ ಘೋರಿಯನ್ನು ಅಮೃತಶಿಲೆಯಿಂದ ಕಟ್ಟಲಾಗಿದೆ. ಯಾಕುಬ್‌ನ ಪರಿವಾರದವರು ಈ ಜಾಗದ ಬಾಡಿಗೆ ನೀಡುತ್ತಿದ್ದೂ ಅವರ ಪರಿವಾರದವರಲ್ಲಿನ ಬೇರೆಯವರನ್ನು ಇಲ್ಲಿ ಹೂಳಲಾಗಿದೆ ಎಂದು ಬಡಾ ಕಬ್ರಸ್ತಾನಗೆ ಸಂಬಂಧಿತ ವ್ಯಕ್ತಿಯು ಸ್ಪಷ್ಟೀಕರಣ ನೀಡಿದರು.

ಈ ಪ್ರಕರಣದಲ್ಲಿ ಮುಂದಿನ ಪ್ರಶ್ನೆಗಳು ಉದ್ಭವಿಸಿದೆ

೧. ಸರಕಾರ ಕಬ್ರಸ್ತಾನವನ್ನು ಯಾಕೂಬ್ ಮೆಮನ್ ಇವನ ಪರಿವಾರದವರಿಗೆ ಯಾಕೂಬ್‌ನ ಘೋರಿಯ ಭೂಮಿ ಮಾರಿದೆಯೆ ? ಈ ರೀತಿಯ ಕಬ್ರಸ್ತಾನದದ ಜಾಗ ಯಾರಿಗಾದರೂ ಮಾರಲು ಸಾಧ್ಯವೇ ?

೨. ಯಾವುದೇ ಕಬ್ರಸ್ತಾನದಲ್ಲಿ ಈ ರೀತಿ ಯಾವುದಾದರೂ ಘೋರಿಯನ್ನು ಸುರಕ್ಷಿತ ಮಾಡಲಾಗುತ್ತಿದ್ದರೇ ಅವರ ಅನುಮತಿ ಪಡೆಯಲಾಗಿದೆಯೇ ?

೩. ಯಾಕುಬ್ ಇವನ ಘೋರಿಯ ನಿಯಮದ ಪ್ರಕಾರ ೧೮ ತಿಂಗಳ ನಂತರ ಏಕೆ ಅಗಿಯಲಿಲ್ಲ ?

೪. ತತ್ಕಾಲಿನ ಸರಕಾರವು ಯಾಕುಬನ ಘೋರಿಯನ್ನು ವಿಲೇವಾರಿ ಮಾಡುವ ನಿರ್ಣಯ ಏಕೆ ತೆಗೆದುಕೊಂಡಿಲ್ಲ ?

೫. ಭಯೋತ್ಪಾದಕ ಯಾಕುಬ್ ಮೆನನ್ ಇವನ ಈ ರೀತಿ ವೈಭವೀಕರಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆಯೇ ?

ಸಂಪಾದಕಿಯ ನಿಲುವು

ಮಹಾರಾಷ್ಟ್ರದ ರಾಜಧಾನಿಯಲ್ಲಿ ಈ ರೀತಿಯ ಘಟನೆ ನಡೆಯುವುದು ಲಚ್ಚಾಸ್ಪದವಾಗಿದೆ ! ಇಷ್ಟು ಆಗುವವರೆಗೆ ಪೊಲೀಸರು ಮತ್ತು ಸರಕಾರ ಏನು ಮಾಡುತ್ತಿತ್ತು ?

ಈ ಘಟನೆಯಿಂದ ಮುಂಬಯಿಯಲ್ಲಿ ಭಯೋತ್ಪಾದಕರಿಗೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಬಲ ಇದೆ ಎಂಬುದು ಕಾಣುತ್ತಿದೆ. ಈ ಪರಿಸ್ಥಿತಿ ರಾಜಧಾನಿ ಸುರಕ್ಷೆಗಾಗಿ ಅಪಾಯಕಾರಿ ಆಗಿದೆ !