ಆಭರಣಗಳನ್ನು ಖರೀದಿಸುವಾಗ ವಹಿಸಬೇಕಾದ ಕಾಳಜಿ
ಬಹಳಷ್ಟು ಸಲ ಆಭರಣಗಳಿಂದ ಮಾಯಾವೀ, ಅಂದರೆ ಒಳ್ಳೆಯದೆಂದು ಭಾಸವಾಗುವ ಸ್ಪಂದನಗಳು ಬರುತ್ತಿರುತ್ತವೆ. ಇದರಿಂದ ನಾವು ಮೋಸ ಹೋಗುವ ಸಾಧ್ಯತೆಯಿರುತ್ತದೆ. ಜಾಗರೂಕತೆಯ ಉಪಾಯವೆಂದು ಆಭರಣದಿಂದ ಒಳ್ಳೆಯ ಸ್ಪಂದನಗಳ ಅರಿವಾದ ಮೇಲೆಯೂ ೧೦ ನಿಮಿಷ ನಿಮ್ಮ ಕುಲದೇವಿ, ಕುಲದೇವ ಅಥವಾ ಉಪಾಸ್ಯದೇವತೆಯ ಪೈಕಿ ಯಾರಾದರೊಬ್ಬರ ನಾಮಜಪವನ್ನು ಮಾಡಿ.