ಆಭರಣಗಳ ಶುದ್ಧಿಕರಣವನ್ನು ಹೇಗೆ ಮಾಡಬೇಕು ಮತ್ತು ಅದರ ಶುದ್ಧಿಕರಣ ಮಾಡುವುದರಿಂದ ಆಗುವ ಆಧ್ಯಾತ್ಮಿಕ ಲಾಭಗಳೇನು ?

 ಅಲಂಕಾರ ಶುದ್ಧಿಯ ವಿವಿಧ ಪ್ರಕಾರ

ಊದುಬತ್ತಿಯ ಹೊಗೆಯಿಂದ ಶುದ್ಧಿ ಮಾಡಬೇಕು
ಆಭರಣಗಳನ್ನು ಒಂದು ಖಾಲಿ ಪೆಟ್ಟಿಗೆಯಲ್ಲಿಡಬೇಕು

೧. ಸ್ಥೂಲದ ಶುದ್ಧಿ

ಆಭರಣಗಳನ್ನು ಅಂಟುವಾಳಕಾಯಿಯ ನೀರಿನಲ್ಲಿ ಮುಳುಗಿಸಿಡುವುದು : ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಐದು ನಿಮಿಷ ಅಂಟುವಾಳ ಕಾಯಿಯ ನೀರಿನಲ್ಲಿ ಮುಳುಗಿಸಿಡಬೇಕು. ಅನಂತರ ಕೈಯಿಂದ ಹಗುರವಾಗಿ ತಿಕ್ಕಿದರೆ ಅವುಗಳ ಮೇಲಿನ ಧೂಳು ಮತ್ತು ಹೊಲಸು ದೂರವಾಗಿ ಆಭರಣಗಳು ಸ್ವಚ್ಛವಾಗುತ್ತವೆ.

 ೨. ಸೂಕ್ಷ್ಮದ ಶುದ್ಧಿ

ಈಗ ಸಾಮಾನ್ಯವಾಗಿ ಎಲ್ಲರಿಗೂ ಹೆಚ್ಜು-ಕಡಿಮೆ ಪ್ರಮಾಣ ದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯಿದೆ. ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳು ಧರಿಸಿದ ಆಭರಣಗಳಲ್ಲಿ ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯನ್ನು ಸಂಗ್ರಹಿಸಿಡುತ್ತವೆ. ಈ ಕಪ್ಪು ಶಕ್ತಿಯು ಆ ವ್ಯಕ್ತಿಯ ದೇಹದಲ್ಲಿ ಪ್ರಕ್ಷೇಪಿತವಾಗುತ್ತದೆ. ಅಲ್ಲದೇ ಈ ಕಪ್ಪು ಶಕ್ತಿಯಿಂದ ವ್ಯಕ್ತಿಯ ಆಭರಣಗಳನ್ನು ಧರಿಸಿದ ಅವಯವಗಳು ನೋವಾಗಬಹುದು. ಆದುದರಿಂದ ಆಭರಣಗಳನ್ನು ನೋಡುವುದು ಬೇಡವೆನಿಸುತ್ತಿದ್ದರೆ ಅಥವಾ ಆಭರಣಗಳನ್ನು ಧರಿಸಿದಾಗ ತೊಂದರೆಗಳಾಗುತ್ತಿದ್ದರೆ ಆ ಆಭರಣಗಳ ತೊಂದರೆಗಳ ತೀವ್ರತೆಗನುಸಾರ ಮುಂದಿನ ತತ್ತ್ವಗಳಿಂದ ಶುದ್ಧಿಯನ್ನು ಮಾಡಬೇಕು.

ಅ. ತೇಜತತ್ತ್ವ : ಆಭರಣಗಳಿಗೆ ಎಲ್ಲ ಬದಿಗಳಿಂದ ವಿಭೂತಿಯನ್ನು ಹಚ್ಚಬೇಕು.

ಆ. ವಾಯುತತ್ತ್ವ : ಆಭರಣಗಳ ಮೇಲೆ ವಿಭೂತಿಯನ್ನು ಊದಬೇಕು ಅಥವಾ ಊದುಬತ್ತಿಯನ್ನು ಉರಿಸಿ ಅದರ ಹೊಗೆಯನ್ನು ಆಭರಣಗಳ ಮೇಲೆ ಹೋಗುವಂತೆ ಮಾಡಬೇಕು.

ಇ. ಆಕಾಶತತ್ತ್ವ : ಆಭರಣಗಳನ್ನು ಒಂದು ಖಾಲಿ ಪೆಟ್ಟಿಗೆ (ಟಿಪ್ಪಣಿ ೧) ಯಲ್ಲಿಡಬೇಕು ಅಥವಾ ಅವುಗಳ ಬಳಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು (ಟಿಪ್ಪಣಿ ೨) ಹಾಕಿಡಬೇಕು.

– (ಪ.ಪೂ.) ಡಾ. ಜಯಂತ ಆಠವಲೆ

ಟಿಪ್ಪಣಿ ೧ – ಖಾಲಿ ಪೆಟ್ಟಿಗೆಯಲ್ಲಿ ಟೊಳ್ಳು ಇರುತ್ತದೆ. ಟೊಳ್ಳು ನಿರ್ಗುಣ ತತ್ತ್ವದ ಪ್ರತೀಕವಾಗಿದೆ. ನಿರ್ಗುಣ ತತ್ತ್ವದಿಂದ ಕಪ್ಪು ಶಕ್ತಿ ನಾಶವಾಗುತ್ತದೆ.

ಟಿಪ್ಪಣಿ ೨ – ಪ.ಪೂ. ಭಕ್ತರಾಜ ಮಹಾರಾಜರು ಸನಾತನ ಸಂಸ್ಥೆಯ ಸ್ಫೂರ್ತಿಸ್ಥಾನವಾಗಿದ್ದಾರೆ. ಪ.ಪೂ. ಭಕ್ತರಾಜ ಮಹಾರಾಜರಂತಹ ಅತ್ಯುಚ್ಚ ಮಟ್ಟದ ಸಂತರು ಈ ಭಜನೆಗಳನ್ನು ಸ್ವತಃ ರಚಿಸಿದ್ದಾರೆ, ಅವರೇ ಸಂಗೀತವನ್ನು ನೀಡಿದ್ದಾರೆ ಮತ್ತು ಅವರೇ ಹಾಡಿದ್ದಾರೆ. ಹಾಗಾಗಿ ಈ ಭಜನೆಗಳಲ್ಲಿ ಶಬ್ದಶಕ್ತಿಯೊಂದಿಗೆ ನಾದಶಕ್ತಿ ಮತ್ತು ಚೈತನ್ಯವಿದ್ದು ಅದರಿಂದ ಆಭರಣಗಳಲ್ಲಿನ ಕಪ್ಪು ಶಕ್ತಿ ದೂರವಾಗುತ್ತದೆ.

೩.ಆಭರಣಗಳನ್ನು ವಿಭೂತಿಯಿಂದ  ಶುದ್ಧಿ ಮಾಡುವುದು

ಆಭರಣಗಳಿಗೆ ವಿಭೂತಿಯನ್ನು ಹಚ್ಚಿ ಧರಿಸಿದರೆ ವಿಭೂತಿಯ ಪರಿಣಾಮವಿರುವವರೆಗೆ ವ್ಯಕ್ತಿಯ ಶರೀರದಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುವ ಪ್ರಮಾಣವು ಬಹಳವಿರುತ್ತದೆ,

೪.  ಕೆಟ್ಟ ಶಕ್ತಿಗಳ ಹಲ್ಲೆಯಾಗಿರುವ ಆಭರಣಗಳನ್ನು ತೆಗೆದಿಟ್ಟರೆ ಶೇ. ೧೦ ರಷ್ಟು ಲಾಭವಾಗುತ್ತದೆ. ಆಭರಣಗಳಿಗೆ ವಿಭೂತಿಯನ್ನು ಲೇಪಿಸಿಟ್ಟರೆ ೧೫ ದಿನಗಳಲ್ಲಿ ಅವುಗಳ ಮೇಲಿನ ಆವರಣವು ಕಡಿಮೆಯಾಗುತ್ತದೆ. ಆಭರಣಗಳನ್ನು ಸುಮ್ಮನೆ ತೆಗೆದಿಟ್ಟರೆ ೩ ತಿಂಗಳ ನಂತರ ಅವುಗಳ ಮೇಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.