ಶುಭಾಶಯಪತ್ರವನ್ನು ಯುಗಾದಿಯಂದೇ ನೀಡಿ

ನಾವು ಜನವರಿ ತಿಂಗಳಿನ ಪ್ರಾರಂಭದಲ್ಲಿ ಹೊಸವರ್ಷದ ಶುಭಾಶಯಪತ್ರವನ್ನು ನಮ್ಮ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಕಳುಹಿಸುತ್ತೇವೆ. ಅದರ ಬದಲು ಚೈತ್ರ ಶುಕ್ಲ ಪಕ್ಷ ಪಾಡ್ಯಕ್ಕೆ ಶುಭಾಶಯ ಪತ್ರ ಕಳುಹಿಸಲು ಪ್ರಾರಂಭಿಸಿ; ಏಕೆಂದರೆ ಇದುವೇ ನಿಜವಾದ ವರ್ಷಾರಂಭದ ದಿನವಾಗಿದೆ.

ಹಿಂದೂಗಳೇ, ಯುಗಾದಿಯ ಶುಭ ಮುಹೂರ್ತದಲ್ಲಿ ಕೇವಲ ಭಾರತ ಮಾತ್ರವಲ್ಲದೇ  ಪೃಥ್ವಿಯಲ್ಲಿ ಎಲ್ಲೆಡೆ ಹಿಂದೂ ಧರ್ಮವನ್ನು ಪ್ರಸ್ಥಾಪಿತಗೊಳಿಸಿ ರಾಮರಾಜ್ಯದ ನಾಗರಿಕರಂತೆ ಅಖಿಲ ಮನುಕುಲಕ್ಕೆ ಸುಸಂಸ್ಕೃತ ಮತ್ತು ಸುಖಸಮೃದ್ಧಿಯುಕ್ತ ಜೀವನವನ್ನು ನೀಡುವ ನಿಶ್ಚಯ ಮಾಡೋಣ.