ನರಕ ಚತುರ್ದಶಿ (ನವೆಂಬರ್ ೧೪)

ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀ  ಮಹೂರ್ತದಲ್ಲಿ ಅಭ್ಯಂಗಸ್ನಾನವನ್ನು ಮಾಡುತ್ತಾರೆ ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.

 ಬಲಿಪಾಡ್ಯ (ನವೆಂಬರ್ ೧೬)

ಬಲಿಪಾಡ್ಯದಂದು ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿ ಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ. ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ.

ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಲ್ಲಿ ದೀಪಾವಳಿ ಹಾಗೂ ತುಳಸಿಪೂಜೆ ಹೇಗೆ ಆಚರಿಸಬೇಕು ?

‘ಈ ವರ್ಷ ೧೩ ರಿಂದ ೧೬ ನವೆಂಬರ್ ಈ ಅವಧಿಯಲ್ಲಿ ದೀಪಾವಳಿ ಹಬ್ಬವಿದೆ. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಂಚಾರ ಸಾರಿಗೆ ನಿರ್ಬಂಧವನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಜನಜೀವನ ಮೊದಲಿನಂತಾಗುತ್ತಿದ್ದರೂ, ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ನಿರ್ಬಂಧಗಳಿಂದ ನಿತ್ಯದಂತೆ ದೀಪಾವಳಿಯನ್ನು ಆಚರಿಸಲು ಮಿತಿ ಇದೆ. ಇಂತಹ ಸ್ಥಳಗಳಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಬೇಕು

ಆಶ್ವಯುಜ ತಿಂಗಳ ಶರದ ಹುಣ್ಣಿಮೆಯ ಮಹತ್ವ

ರಾತ್ರಿ ೧೦ ರಿಂದ ೧೨ ರ ಸಮಯದಲ್ಲಿ ಅದರಲ್ಲಿ ಚಂದ್ರನ ಯಾವ ಕಿರಣಗಳು ಬೀಳುವವೋ, ಅವು ಅತ್ಯಂತ ಹಿತಕರವಾಗಿರುತ್ತವೆ. ಅದರಿಂದ ನಮ್ಮ ರೋಗನಿರೋಧಕ ಶಕ್ತಿ ಮತ್ತು ಜೀವನಶಕ್ತಿಯು ಹೆಚ್ಚಾಗುತ್ತದೆ. ಚಂದ್ರಕಿರಣಗಳಲ್ಲಿ ಇಡಲಾದ ಈ ಪಾಯಸವನ್ನು ಭಗವಂತನಿಗೆ ಮಾನಸ ನೈವೇದ್ಯವನ್ನು ತೋರಿಸಿ ಸೇವಿಸಬೇಕು.

ನವರಾತ್ರೋತ್ಸವ ಆರಂಭ ಆಶ್ವಯುಜ ಶುಕ್ಲ ಪಕ್ಷ ಪ್ರತಿಪದೆ (೧೭.೧೦.೨೦೨೦)

ಪಾತಾಳದಲ್ಲಿ ವಾಸಿಸುವ ಅಸುರಿ ಶಕ್ತಿಯ ಬಲ ಹೆಚ್ಚಾಗಿದ್ದರಿಂದ ಅವುಗಳು ಬ್ರಹ್ಮಾಂಡದಲ್ಲಿರುವ ಪೃಥ್ವಿ, ಸ್ವರ್ಗ ಮತ್ತು ಉಚ್ಚ ಲೋಕಗಳ ಮೇಲೆ ದಂಡೆತ್ತಿ ಹೋಗಿ ಅಲ್ಲಿ ವಾಸಿಸುತ್ತಿದ್ದ ಸಾತ್ತ್ವಿಕ ಜೀವಗಳ ಸಾಧನೆಯಲ್ಲಿ ವಿಘ್ನ ತರಲು ಪ್ರಯತ್ನಿಸಿದವು. ನವರಾತ್ರಿಯ ಅವಧಿಯಲ್ಲಿ ದೇವಿಯ ಸಕಾರಾತ್ಮಕ ಊರ್ಜೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ.

ನವದುರ್ಗಾ

ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭಮನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?

ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ. ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ.

ಕೆಲವು ದೇವಿಯರ ಉಪಾಸನೆಯ ವೈಶಿಷ್ಟ್ಯಗಳು 

ವಿವಾಹದಂತಹ ಯಾವುದಾದರೊಂದು ವಿಧಿಯ ನಂತರ ಈ ಕುಲದೇವತೆ ಇರುವವರ ಮನೆಯಲ್ಲಿ ದೇವಿಯ ಗೊಂದಲವನ್ನು (ಒಂದು ಕುಲಾಚಾರ) ಹಾಕುತ್ತಾರೆ. ಕೆಲವರ ಮನೆಯಲ್ಲಿ ವಿವಾಹದಂತಹ ಕಾರ್ಯಗಳು ವ್ಯವಸ್ಥಿತವಾಗಿ ನಡೆದಿದ್ದರಿಂದ ಸತ್ಯನಾರಾಯಣನ ಪೂಜೆಯನ್ನು ಮಾಡುತ್ತಾರೆ ಅಥವಾ ಕೋಕಣಸ್ಥ ಬ್ರಾಹ್ಮಣರಲ್ಲಿ ದೇವಿಗೆ ಹಾಲು-ಮೊಸರನ್ನು ಅರ್ಪಿಸುತ್ತಾರೆ, ಇದು ಸಹ ಹಾಗೇ ಆಗಿದೆ.

ನವರಾತ್ರಿಯ ವ್ರತದಲ್ಲಿ ಪಾಲಿಸುವಂತಹ ಆಚಾರಗಳು

ನವರಾತ್ರಿಯ ಒಂಬತ್ತು ದಿನಗಳಲ್ಲಿ ಹೆಚ್ಚಿನ ಜನರು ಉಪವಾಸವನ್ನು ಮಾಡುತ್ತಾರೆ. ಒಂಬತ್ತು ದಿನಗಳು ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ, ಪ್ರಥಮ ದಿನ ಹಾಗೂ ಅಷ್ಟಮಿಯಂದು ಉಪವಾಸವನ್ನು ಅವಶ್ಯವಾಗಿ ಮಾಡುತ್ತಾರೆ. ದೇವಿ ಉಪಾಸನೆಯ ಇತರ ಭಾಗಗಳೊಂದಿಗೆ ನವರಾತ್ರಿಯ ಕಾಲಾವಧಿಯಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ’ ಎಂದು ಜಪಿಸಬೇಕು.