ಆಶ್ವಯುಜ ತಿಂಗಳ ಶರದ ಹುಣ್ಣಿಮೆಯ ಮಹತ್ವ

೧. ‘ವರ್ಷದಲ್ಲಿ ಒಂದು ದಿನ ಚಂದ್ರನು ಪೃಥ್ವಿಗೆ ಅತ್ಯಂತ ಸಮೀಪದಲ್ಲಿರುತ್ತಾನೆ, ಆ ದಿನಕ್ಕೆ ಶರದ ಹುಣ್ಣಿಮೆ ಎಂದು ಕರೆಯುತ್ತಾರೆ !

೨. ಶ್ರೀಮದ್ಭಗವದ್ಗೀತೆಯಲ್ಲಿ ಹೇಳಲಾದ ಚಂದ್ರನ ಮಹತ್ವ : ‘ನಕ್ಷತ್ರಾಣಾಮಹಂ ಶಶಿ’ (ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೨೧) ಅಂದರೆ ‘ನಾನು ನಕ್ಷತ್ರಗಳ ಅಧಿಪತಿ ಚಂದ್ರನಾಗಿದ್ದೇನೆ.’

ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ |

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೫, ಶ್ಲೋಕ ೧೩

ಅರ್ಥ : ರಸರೂಪ ಅಂದರೆ ಅಮೃತಮಯ ಚಂದ್ರನಾಗಿ ನಾನು ಎಲ್ಲ ವನಸ್ಪತಿಗಳ ಪೋಷಣೆ ಮಾಡುತ್ತೇನೆ.

ಸೋಮ ಅಂದರೆ ಚಂದ್ರನಾಗಿ ಔಷಧಿಗಳಿಗೆ (ವನಸ್ಪತಿ) ನಾನು ಪುಷ್ಟಿ ನೀಡುತ್ತೇನೆ ಮತ್ತು ಎಲ್ಲರ ಹೃದಯದ ಬಡಿತವನ್ನು ನಡೆಸುವ ಆತ್ಮರಾಮನು ಸಹ ನಾನೇ ಆಗಿದ್ದೇನೆ.

೩. ಲಕ್ಷ್ಮಿಪ್ರಾಪ್ತಿಯ ಸುಂದರ ಉಪಾಯ ! : ಸ್ಕಂದ ಪುರಾಣದಲ್ಲಿ ಮುಂದಿನಂತೆ ಹೇಳಲಾಗಿದೆ, ‘ವರವನ್ನು ನೀಡುವ ಲಕ್ಷ್ಮಿ ದೇವಿಯು ಶರದ ಹುಣ್ಣಿಮೆಯ ಮಧ್ಯರಾತ್ರಿಯಂದು ಸಂಚರಿಸುತ್ತಿರುತ್ತಾಳೆ. ಲಕ್ಷ್ಮಿದೇವಿಯು ಹೇಳುತ್ತಾಳೆ, ‘ಆ ರಾತ್ರಿ ಯಾರು ಜಾಗರಣೆ ಮತ್ತು ಲಕ್ಷ್ಮಿಪೂಜೆಯನ್ನು ಮಾಡುವರೋ, ಲಕ್ಷ್ಮಿನಾರಾಯಣನ ತೇಜವನ್ನು ಚಂದ್ರನಲ್ಲಿ ನೋಡುವರೋ ಮತ್ತು ತಮ್ಮ ಹೃದಯವನ್ನು ಹೃದಯೇಶ್ವರನಿಂದ ತಂಪು ಮಾಡಿಕೊಳ್ಳುವರೋ (ಅಂದರೆ ಅಂತರ್ಯಾಮಿ ಪರಮಾತ್ಮನಲ್ಲಿ ವಿಶ್ರಾಂತಿಯನ್ನು ಪಡೆಯುವರೋ), ಹಾಗೆಯೇ ಅವನ ಬೆಳದಿಂಗಳಲ್ಲಿ ತಮ್ಮ ಚಿತ್ತವನ್ನು ಪ್ರಸನ್ನಗೊಳಿಸುವರೋ ಮತ್ತು ಭಗವಂತನ ಸ್ಮರಣೆ-ಚಿಂತನೆಯನ್ನು ಮಾಡುವರೋ, ಅವರ ಮನೆಯಲ್ಲಿ ನಾನು ವಾಸ ಮಾಡುತ್ತೇನೆ’.

೪. ಅಶಾಂತ ಮನುಷ್ಯನೂ ಹುಣ್ಣಿಮೆಯ ಚಂದ್ರನ ದರ್ಶನ ಪಡೆದರೆ ಅಥವಾ ಚಂದ್ರಪ್ರಕಾಶದಲ್ಲಿ ಸ್ವಲ್ಪ ತಿರುಗಾಡಿದರೆ, ಅವನ ಅಶಾಂತಿಯು ಕಡಿಮೆಯಾಗುತ್ತದೆ.

೫. ಆರೋಗ್ಯವು ಚೆನ್ನಾಗಿದ್ದು ವರ್ಷವಿಡೀ ಆರೋಗ್ಯವಂತರಾಗಿರಲು ಇದನ್ನು ಮಾಡಿ ನೋಡಿರಿ ! : ಹುಣ್ಣಿಮೆಯ ಚಂದ್ರ ಮತ್ತು ಅದರಲ್ಲಿಯೂ ಆಶ್ವಯುಜ ಶುಕ್ಲ ಹುಣ್ಣಿಮೆಯ ಚಂದ್ರನು ಔಷಧಿಗಳಿಗೆ ಪುಷ್ಟಿ ನೀಡುವುದು, ಮನುಷ್ಯನ ಮನಸ್ಸಿನ ಪ್ರಸನ್ನತೆಯನ್ನು ಹೆಚ್ಚಿಸುವುದು ಮತ್ತು ವರ್ಷವಿಡಿಯ ಆರೋಗ್ಯದಲ್ಲಿ ಸಹಾಯ ಮಾಡುವುದು, ಇವುಗಳಿಗಾಗಿ ಪ್ರಸಿದ್ಧನಿದ್ದಾನೆ. ಶರದ ಹುಣ್ಣಿಮೆಯ ರಾತ್ರಿ ಹಾಲಿನಲ್ಲಿ ಅವಲಕ್ಕಿ ಅಥವಾ ಅನ್ನವನ್ನು ಹಾಕಿ ಪಾಯಸವನ್ನು ತಯಾರಿಸಬೇಕು ಮತ್ತು ಹತ್ತಿ ಬಟ್ಟೆಯಿಂದ ಮುಚ್ಚಿ ಅದನ್ನು ಚಂದ್ರನ ಪ್ರಕಾಶದಲ್ಲಿ ಇಡಬೇಕು. ರಾತ್ರಿ ೧೦ ರಿಂದ ೧೨ ರ ಸಮಯದಲ್ಲಿ ಅದರಲ್ಲಿ ಚಂದ್ರನ ಯಾವ ಕಿರಣಗಳು ಬೀಳುವವೋ, ಅವು ಅತ್ಯಂತ ಹಿತಕರವಾಗಿರುತ್ತವೆ. ಅದರಿಂದ ನಮ್ಮ ರೋಗನಿರೋಧಕ ಶಕ್ತಿ ಮತ್ತು ಜೀವನಶಕ್ತಿಯು ಹೆಚ್ಚಾಗುತ್ತದೆ. ಚಂದ್ರಕಿರಣಗಳಲ್ಲಿ ಇಡಲಾದ ಈ ಪಾಯಸವನ್ನು ಭಗವಂತನಿಗೆ ಮಾನಸ ನೈವೇದ್ಯವನ್ನು ತೋರಿಸಿ ಸೇವಿಸಬೇಕು. ವರ್ಷವಿಡೀ ಆರೋಗ್ಯವಂತನಾಗಿರಬೇಕೆಂದು ಅಥವಾ ಯಾವುದೇ ಕಾರಣದಿಂದ ರೋಗವು ಬಂದರೂ, ಅದನ್ನು ಸಹಜವಾಗಿಯೇ ದೂರ ಮಾಡಲು ಸಾಧ್ಯವಾಗಬೇಕೆಂದು, ಈ ಪ್ರಯೋಗವನ್ನು ಅವಶ್ಯವಾಗಿ ಮಾಡಬೇಕು.

೬. ಈ ದಿನ ನೃತ್ಯ-ಗಾಯನದೊಂದಿಗೆ ಧ್ಯಾನ-ಭಜನೆಗಳ ಸುಂದರ ಸಮನ್ವಯವಿರಬೇಕು. ಇದರಿಂದ ಚಿತ್ತವು ಪವಿತ್ರವಾಗುತ್ತದೆ.’

– ಪೂಜ್ಯಪಾದ ಸಂತಶ್ರೀ ಆಸಾರಾಮಜಿ ಬಾಪೂ (ಆಧಾರ : ಮಾಸಿಕ ‘ಲೋಕ ಕಲ್ಯಾಣ ಸೇತು’, ಸೆಪ್ಟೆಂಬರ್ ೨೦೧೯)