ರಾಷ್ಟ್ರಧ್ವಜದ ಮೇಲೆ ಗೋಮೂತ್ರ ಸುರಿದು ಬ್ರಿಟನ ಪ್ರಧಾನಮಂತ್ರಿಗೆ `ನೀವು ಬಂದು ಕುಡಿಯಿರಿ’ ಎಂದು ಹೇಳಿದರು
ಈ ಮೇಲಿನ ಚಿತ್ರ ಪ್ರಕಟಿಸುದರ ಉದ್ದೇಶ ಯಾರ ರಾಷ್ಟ್ರಾಭಿಮಾನವನ್ನು ನೋಯಿಸುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು |
ಲಂಡನ (ಬ್ರಿಟನ) – ಇಲ್ಲಿ ಖಲಿಸ್ತಾನಿಗಳು ಅಕ್ಟೋಬರ 3 ರಂದು ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಆಂದೋಲನವನ್ನು ನಡೆಸಿದ್ದರು. ಆಗ ಅವರು ಭಾರತೀಯ ರಾಷ್ಟ್ರಧ್ವಜವನ್ನು ಅಪಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ. ಖಲಿಸ್ತಾನಿ ಭಯೋತ್ಪಾದಕ ಗುರಚರಣ ಸಿಂಹ ಈ ಆಂದೋಲನದ ಸಮಯದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಭೂಮಿಯ ಮೇಲಿಟ್ಟು ಅದರ ಮೇಲೆ ಗೋಮೂತ್ರವನ್ನು ಸುರಿದು, ಬಾಟಲಿಯನ್ನು ಇಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
लंदन में खालिस्तानियों का फिर उपद्रव: भारतीय उच्चायोग के सामने तिरंगे पर डाला गोमूत्र, भारतीय युवक ने राष्ट्रीय ध्वज की बचाई लाज#London #KhalistaniTerrorist #Tiranga https://t.co/kZOZjH5MZl
— ऑपइंडिया (@OpIndia_in) October 3, 2023
ಈ ಸಮಯದಲ್ಲಿ ಸಿಂಹ ಬ್ರಿಟನ ಪ್ರಧಾನಮಂತ್ರಿ ಋಷಿ ಸುನಕರಿಗೆ, `ನೀವು ಬಂದು ಅದನ್ನು ಕುಡಿಯಬಹುದು.’ ಎಂದು ಹೇಳಿದನು. ಆಗ ತಕ್ಷಣವೇ ಭಾರತೀಯನೊಬ್ಬರು ರಾಷ್ಟ್ರಧ್ವಜವನ್ನು ಎತ್ತಿಕೊಂಡಿರುವುದು ಕಾಣಿಸುತ್ತದೆ. ಕೆಲವು ತಿಂಗಳುಗಳ ಹಿಂದೆ ರಾಯಭಾರಿ ಕಚೇರಿಯ ಹೊರಗೆ ಖಲಿಸ್ತಾನಿಗಳು ಆಂದೋಲನವನ್ನು ನಡೆಸಿ ಹಿಂಸಾಚಾರ ಮಾಡಲು ಪ್ರಯತ್ನಿಸಿದ್ದರು. ಅವರ ಗುರುತನ್ನು ರಾಷ್ಟ್ರೀಯ ತನಿಖಾ ದಳವು ಕಂಡು ಹಿಡಿದಿದೆ. ಅದರಲ್ಲಿಯೂ ಗುರಚರಣ ಸಿಂಹ ಇದ್ದನು. ಅವನು ಬ್ರಿಟನ್ನಿನ `ದಳ ಖಾಲಸಾ’ ಸಂಘಟನೆಯ ಸದಸ್ಯನಾಗಿದ್ದಾನೆ. ರಾಷ್ಟ್ರೀಯ ತನಿಖಾ ದಳವು ಈ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿರುವ ಖಲಿಸ್ತಾನಿಗಳ ಛಾಯಾಚಿತ್ರದಲ್ಲಿ ಗುರಚರಣ ಸಿಂಹ 17 ಕ್ರಮಾಂಕದಲ್ಲಿದ್ದಾನೆ.
ಸಂಪಾದಕೀಯ ನಿಲುವುಬ್ರಿಟನ್ ಪ್ರಧಾನಮಂತ್ರಿ ಋಷಿ ಸುನಕ ಖಲಿಸ್ತಾನಿಗಳ ವಿಷಯದಲ್ಲಿ ಮೃದು ಧೋರಣೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ಇದೇ ಖಲಿಸ್ತಾನಿಗಳು ಅವರಿಗೂ ಅಗೌರವ ತೋರಲು ಆರಂಭಿಸಿದ್ದಾರೆ. ಈಗಲಾದರೂ ಋಷಿ ಸುನಕ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಕೊಂಡು ಅವರ ಭಾರತವಿರೋಧಿ ಕೃತ್ಯಗಳನ್ನು ನಷ್ಟಗೊಳಿಸುವರು ಎಂದು ನಿರೀಕ್ಷಿಸಲಾಗಿದೆ. |