ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲಾದ ಪರಿಣಾಮ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಸಮಾಜದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೆಚ್ಚುಕಡಿಮೆ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಇರುತ್ತದೆ. ಕೆಟ್ಟ ಶಕ್ತಿಗಳಿಂದಾಗಿ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ, ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರ ಸಾಧನೆಯಲ್ಲಿಯೂ ಅಡಚಣೆಗಳನ್ನು ತರುತ್ತವೆ; ಆದರೆ ದುರದೃಷ್ಠವಶಾತ್‌ ಬಹಳಷ್ಟು ಜನರು ಕೆಟ್ಟ ಶಕ್ತಿಗಳ ವಿಷಯದಲ್ಲಿ ಅಜ್ಞಾನಿಗಳಾಗಿದ್ದಾರೆ. ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ನಾಮಜಪ-ಸಾಧನೆ ಮಾಡುವುದೊಂದೇ ಪ್ರಭಾವಶಾಲಿ ಪರ್ಯಾಯ ವಾಗಿದೆ. ಕೆಟ್ಟ ಶಕ್ತಿಗಳ ತೊಂದರೆಗಳನ್ನು ನಿವಾರಣೆ ಮಾಡುವ ಉಚ್ಚಮಟ್ಟದ ದೇವತೆಗಳಲ್ಲಿ ದತ್ತದೇವರು ಒಬ್ಬರಾಗಿದ್ದಾರೆ. ಸದ್ಯ ಹಿಂದಿನ ಕಾಲದಂತೆ ಯಾರೂ ಶ್ರಾದ್ಧ-ಪಕ್ಷ ಇತ್ಯಾದಿ, ಹಾಗೆಯೇ ಸಾಧನೆಯನ್ನೂ ಮಾಡದಿರುವುದರಿಂದ ಹೆಚ್ಚಾಗಿ ಎಲ್ಲರಿಗೂ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆ ಆಗುತ್ತದೆ. ದತ್ತನ ನಾಮಜಪದಿಂದ ನಿರ್ಮಾಣವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತಲೂ ರಕ್ಷಣಾಕವಚ ನಿರ್ಮಾಣ ವಾಗುತ್ತದೆ. ದತ್ತನ ನಾಮಜಪದಿಂದ ಅತೃಪ್ತ ಪೂರ್ವಜರಿಗೆ ಗತಿ (ಮುಕ್ತಿ) ಸಿಗುತ್ತದೆ. ಅದ್ದರಿಂದ ಅದರಿಂದ ವ್ಯಕ್ತಿಗೆ ಆಗುವ ತೊಂದರೆಯ ಪ್ರಮಾಣ ಕಡಿಮೆಯಾಗುತ್ತದೆ.

ಪ್ರತಿಯೊಂದು ವಿಷಯವನ್ನು ಕಾಲಾನುಸಾರ ಮಾಡಿದರೆ, ಅದರಿಂದ ಹೆಚ್ಚು ಲಾಭವಾಗುತ್ತದೆ. ‘ಕಾಲಾನುಸಾರ ಸದ್ಯ ಯಾವ ಪ್ರಕಾರದ ನಾಮಜಪದಿಂದ ದೇವತೆಗಳ ತಾರಕ ಮತ್ತು ಮಾರಕ ತತ್ತ್ವವು ಹೆಚ್ಚು ಸಿಗುತ್ತದೆ’, ಎಂಬುದನ್ನು ಅಧ್ಯಾತ್ಮಶಾಸ್ತ್ರೀಯ ದೃಷ್ಟಿಯಲ್ಲಿ ಅಭ್ಯಾಸ ಮಾಡಿ ದೇವತೆಗಳ ನಾಮಜಪವನ್ನು ಧ್ವನಿಮುದ್ರಿಕರಿಸಲಾಗಿದೆ. ಅದಕ್ಕೆ ಸನಾತನದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕಿ ಸುಶ್ರೀ ತೇಜಲ ಪಾತ್ರಿಕರ (ಸಂಗೀತ ಸಮನ್ವಯಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿಶ್ವವಿದ್ಯಾಲಯ) ಇವರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ಅನೇಕ ಪ್ರಯೋಗಗಳನ್ನು ಮಾಡಿದರು. ಅದರಿಂದ ಈ ನಾಮಜಪಗಳನ್ನು ಸಿದ್ಧಪಡಿಸಲಾಗಿದೆ. ಆದ್ದರಿಂದ ಈ ನಾಮಜಪಗಳನ್ನು ಮಾಡಿದರೆ ಅದರಿಂದ ಕಾಲಾನುಸಾರ ಪ್ರತಿಯೊಬ್ಬರಿಗೂ ಅವರ ಭಾವಕ್ಕನುಸಾರ ಆಯಾ ದೇವತೆಗಳ ತಾರಕ ಅಥವಾ ಮಾರಕ ತತ್ತ್ವವು ಸಿಗಲು ಸಹಾಯವಾಗುತ್ತದೆ. ದತ್ತನ ‘ತಾರಕ’ ಮತ್ತು ‘ಮಾರಕ’ ನಾಮಜಪಗಳಿಂದ ವ್ಯಕ್ತಿಯ ಮೇಲಾಗುವ ಪರಿಣಾಮವನ್ನು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು ಈ ಪರೀಕ್ಷಣೆಗೆ ‘ಯು.ಎ.ಎಸ್‌.’ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಓರ್ವ ಸಾಧಕಿ ಮತ್ತು ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಓರ್ವ ಸಾಧಕರು ಭಾಗವಹಿಸಿದ್ದರು. ಈ ಪರೀಕ್ಷಣೆಯಲ್ಲಿ ಈ ಮುಂದಿನಂತೆ ಒಟ್ಟು ೬ ಪ್ರಯೋಗಗಳನ್ನು ಮಾಡಲಾಯಿತು.
ಅ. ತಾರಕ ನಾಮಜಪದ ೩ ಪ್ರಯೋಗಗಳು : ಪರೀಕ್ಷಣೆಯಲ್ಲಿನ ಸಾಧಕರಿಗೆ ದತ್ತನ ತಾರಕ ನಾಮಜಪವನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಧ್ವನಿಯಲ್ಲಿ ಪ್ರತಿಯೊಂದು ೧ ಗಂಟೆ ಕೇಳಿಸಲಾಯಿತು. ಪ್ರತಿಯೊಂದು ಪ್ರಯೋಗದ ಮೊದಲು ಮತ್ತು ಪ್ರಯೋಗದ ನಂತರ ಸಾಧಕರನ್ನು ‘ಯು.ಎ.ಎಸ್‌.’ ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು.
ಆ. ಮಾರಕ ನಾಮಜಪದ ೩ ಪ್ರಯೋಗಗಳು : ಪರೀಕ್ಷಣೆ ಯಲ್ಲಿನ ಸಾಧಕರಿಗೆ ದತ್ತನ ಮಾರಕ ನಾಮಜಪವನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಧ್ವನಿಯಲ್ಲಿ ಪ್ರತಿಯೊಂದು ೧ ಗಂಟೆ ಕೇಳಿಸಲಾಯಿತು. ಪ್ರಯೋಗದ ಮೊದಲು ಮತ್ತು ನಂತರ ಸಾಧಕರ ಯು.ಎ.ಎಸ್‌.ನಿಂದ ಪರೀಕ್ಷಣೆ ಮಾಡಲಾಯಿತು.

೨. ದತ್ತನ ತಾರಕ ನಾಮಜಪವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ

ಸಾಧಕರಲ್ಲಿದ್ದ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು ದತ್ತನ ತಾರಕ ನಾಮಜಪ ಕೇಳುವ ಮೊದಲು ಇಬ್ಬರಲ್ಲಿಯೂ ನಕಾರಾತ್ಮಕ ಮತ್ತು ಸಕಾರಾತ್ಮಕ ಈ ಎರಡೂ ಊರ್ಜೆಗಳು ಇದ್ದವು. ಅವರು ದತ್ತನ ತಾರಕ ನಾಮಜಪ ಕೇಳಿದ ನಂತರ ಅವರಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

೩. ದತ್ತನ ಮಾರಕ ನಾಮಜಪವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಇಬ್ಬರೂ

ಸಾಧಕರಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆ ಅಥವಾ ಇಲ್ಲವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಗುವುದು ದತ್ತನ ಮಾರಕ ನಾಮಜಪವನ್ನು ಕೇಳುವ ಮೊದಲು ಇಬ್ಬರಲ್ಲಿಯೂ ನಕಾರಾತ್ಮಕ ಮತ್ತು ಸಕಾರಾತ್ಮಕ ಈ ಎರಡೂ ಊರ್ಜೆಗಳು ಇದ್ದವು. ಅವರು ದತ್ತನ ಮಾರಕ ನಾಮಜಪವನ್ನು ಕೇಳಿದ ನಂತರ ಅವರಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆ ಅಥವಾ ಇಲ್ಲವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.

ಅ. ಮಹತ್ವ

೧. ಭಾದ್ರಪದ ಕೃಷ್ಣ ಪಕ್ಷಕ್ಕೆ ‘ಪಿತೃಪಕ್ಷ’ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ.

೨. ಸೂರ್ಯೇ ಕನ್ಯಾಗತೇ ಶ್ರಾದ್ಧಂ
ಯೋ ನ ಕುರ್ಯಾದ್‌ ಗೃಹಾಶ್ರಮೀ | ಧನಂ ಪುತ್ರಾಃ
ಕುತಸ್ತಸ್ಯ ಪಿತೃ ನಿಃಶ್ವಾಸಪೀಡಯಾ || – ಗಾರ್ಗ್ಯ (ಶ್ರಾದ್ಧಕಲ್ಪಲತಾ, ಪುಟ ೯೭)

ಅರ್ಥ : ಯಾವ ಗೃಹಸ್ಥನು ಸೂರ್ಯನು ಕನ್ಯಾರಾಶಿಯಲ್ಲಿದ್ದಾಗ (ಪಿತೃಪಕ್ಷದಲ್ಲಿ) ಶ್ರಾದ್ಧವನ್ನು ಮಾಡುವುದಿಲ್ಲವೋ, ಅಂತಹವನು ಪಿತೃಗಳ ದುಃಖದ ನಿಟ್ಟುಸಿರಿಗೆ ಈಡಾಗಬೇಕಾಗುತ್ತದೆ. ಇಂತಹವನಿಗೆ ಧನ ಮತ್ತು ಪುತ್ರ ಪ್ರಾಪ್ತಿಯು ಹೇಗೆ ಆಗುವುದು ? ಪಿತೃಲೋಕವು ಖಾಲಿಯಿರುತ್ತದೆ ಎಂದರೆ ಆ ಸಮಯ ದಲ್ಲಿ ಕುಲದಲ್ಲಿನ ಎಲ್ಲ ಪಿತೃಗಳು ತಮ್ಮ ವಂಶಜರಿಗೆ ಆಶೀರ್ವಾದವನ್ನು ಕೊಡಲು ಬಂದಿರುತ್ತಾರೆ ಮತ್ತು ಶ್ರಾದ್ಧವನ್ನು ಮಾಡದಿದ್ದರೆ ಅವರು ನಮಗೆ ಶಾಪವನ್ನು ಕೊಟ್ಟು ಹೊರಟು ಹೋಗುತ್ತಾರೆ. ಆದುದರಿಂದ ಈ ಸಮಯದಲ್ಲಿ ಶ್ರಾದ್ಧವನ್ನು ಮಾಡುವುದು ಮಹತ್ವದ್ದಾಗಿದೆ.

೩ ಅ. ಪಿತೃಪಕ್ಷದಲ್ಲಿ ವಾತಾವರಣದಲ್ಲಿನ ತಿರ್ಯಕ್‌ ಲಹರಿಗಳ (ರಜ-ತಮಾತ್ಮಕ ಲಹರಿಗಳ) ಮತ್ತು ಯಮಲಹರಿಗಳ ಪ್ರಭಾವವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಿದರೆ ರಜ-ತಮಾತ್ಮಕ ಕೋಶಗಳಿರುವ ಪಿತೃಗಳಿಗೆ ಪೃಥ್ವಿಯ ವಾತಾವರಣ ಕಕ್ಷೆಯಲ್ಲಿ ಬರಲು ಸುಲಭ ವಾಗುತ್ತದೆ. ಆದುದರಿಂದ ಹಿಂದೂ ಧರ್ಮದಲ್ಲಿ ಹೇಳಲಾದ ವಿಧಿಗಳನ್ನು ಆಯಾ ಕಾಲದಲ್ಲಿ ಮಾಡುವುದು ಹೆಚ್ಚು ಶ್ರೇಯಸ್ಕರ ವಾಗಿದೆ’.

೩ ಆ. ಒಂದು ವರ್ಷದವರೆಗೆ ಶ್ರಾದ್ಧವನ್ನು ಮಾಡಿದ ನಂತರ ಪುನಃ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು ? : (ಒಂದು ವರ್ಷದ ವರೆಗೆ ಮಾಡುವ ಶ್ರಾದ್ಧದಿಂದ ವ್ಯಷ್ಟಿ ಸ್ತರದಲ್ಲಿ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧದಿಂದ ಸಮಷ್ಟಿ ಸ್ತರದಲ್ಲಿ ಪಿತೃೃಣವನ್ನು ತೀರಿಸಲು ಬರುತ್ತದೆ) ‘ಮೃತ್ಯುವಿನ ನಂತರ ಒಂದು ವರ್ಷದ ವರೆಗೆ ಮಾಡುವ ಶ್ರಾದ್ಧದಿಂದ ಆಯಾ ವಿಶಿಷ್ಟ ಲಿಂಗದೇಹಗಳಿಗೆ ಗತಿ ಸಿಗಲು ಸಹಾಯವಾಗುತ್ತದೆ. ಇದರಿಂದ ಆಯಾ ವ್ಯಕ್ತಿಗಳ ವ್ಯಷ್ಟಿ ಸ್ತರದಲ್ಲಿನ ಋಣವನ್ನು ತೀರಿಸಲು ಸಹಾಯವಾಗುತ್ತದೆ. ವಾರ್ಷಿಕಶ್ರಾದ್ಧವು ವೈಯಕ್ತಿಕ ಸ್ತರದಲ್ಲಿ ಋಣವನ್ನು ತೀರಿಸುವ ಒಂದು ವ್ಯಷ್ಟಿ ಉಪಾಸನೆಯೇ ಆಗಿದೆ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವು ಸಮಷ್ಟಿ ಸ್ತರದಲ್ಲಿ ಪಿತೃಗಳ ಋಣವನ್ನು ತೀರಿಸುವ ಸಮಷ್ಟಿ ಉಪಾಸನೆಯಾಗಿದೆ. ವ್ಯಷ್ಟಿ ಋಣವು ಆಯಾ ಲಿಂಗದೇಹಗಳ ಬಗೆಗಿನ ಪ್ರತ್ಯಕ್ಷ ಕರ್ತವ್ಯ ಪಾಲನೆಯನ್ನು ಕಲಿಸಿದರೆ ಸಮಷ್ಟಿ ಋಣವು ಒಂದೇ ಕಾಲದಲ್ಲಿ
ವ್ಯಾಪಕ ಮಟ್ಟದಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ತೀರಿಸುತ್ತದೆ.

ನಮ್ಮೊಂದಿಗೆ ಅತಿಹೆಚ್ಚು ಸಂಬಂಧವಿರುವ ಮೊದಲಿನ ಒಂದೆರಡು ಪೀಳಿಗೆಗಳ ಪಿತೃಗಳ ಶ್ರಾದ್ಧವನ್ನು ನಾವು ಮಾಡುತ್ತೇವೆ. ಏಕೆಂದರೆ ಇವರೊಂದಿಗೆ ನಮ್ಮ
ಕೊಡುಕೊಳ್ಳುವಿಕೆಯ ಲೆಕ್ಕಾಚಾರವು ಬಹಳಷ್ಟು ಇರುತ್ತದೆ ಇತರ ಪೀಳಿಗೆಗಳಿಗಿಂತ ಈ ಪಿತೃಗಳಲ್ಲಿ ಕುಟುಂಬದಲ್ಲಿ ಸಿಲುಕಿಕೊಳ್ಳುವ ಆಸಕ್ತಿಯ ಪ್ರಮಾಣವು ಹೆಚ್ಚಿಗೆ ಇರುವುದರಿಂದ ಅವರ ಈ ಬಂಧನವು ತೀವ್ರವಾಗಿರುತ್ತದೆ. ಆದುದರಿಂದ ಈ ಬಂಧನವನ್ನು ಕಡಿದು ಹಾಕಲು ವೈಯಕ್ತಿಕ ರೀತಿಯಲ್ಲಿ ಒಂದು ವರ್ಷದವರೆಗೆ ಮಾಡುವ ಶ್ರಾದ್ಧಕ್ಕೆ ಸಂಬಂಧಿಸಿದ ವಿಧಿಗಳನ್ನು ಮಾಡುವುದು ಆವಶ್ಯಕ ವಾಗಿರುತ್ತದೆ. ಇದರ ತುಲನೆಯಲ್ಲಿ ಅದಕ್ಕೂ ಮೊದಲಿನ ಇತರ ಪಿತೃಗಳೊಂದಿಗಿನ ನಮ್ಮ ಸಂಬಂಧದ ತೀವ್ರತೆಯು ಕಡಿಮೆ ಇರುವುದರಿಂದ ಅವರಿಗೆ ವಿಧಿಯನ್ನು ಸಾಮೂಹಿಕವಾಗಿ ಪಿತೃಪಕ್ಷದಲ್ಲಿ ಮಾಡುವುದು ಸೂಕ್ತವಾಗಿದೆ. ಆದುದರಿಂದ ಒಂದು ವರ್ಷದವರೆಗೆ ಮಾಡುವ ಶ್ರಾದ್ಧ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧ ಇವರೆಡನ್ನೂ ಮಾಡುವುದು ಆವಶ್ಯಕವಾಗಿದೆ.

೩ ಇ. ಪತಿಯ ನಿಧನಕ್ಕಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು (ಮುತ್ತೈದೆ ನವಮಿಯಂದೇ) ಏಕೆ ಮಾಡಬೇಕು ? : ‘ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪ ತತ್ತ್ವಗಳಿಗೆ ಸಂಬಂಧಿಸಿದ ರಜೋಗುಣಿ ಶಿವಲಹರಿಗಳು ಅಧಿಕವಾಗಿರುತ್ತವೆ. ಈ ಲಹರಿ ಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಚಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾ ಮುತ್ತೈದೆಯರ ಲಿಂಗದೇಹಗಳಿಗೆ ಪ್ರಾಪ್ತವಾಗುತ್ತದೆ. ಈ ದಿನ ಕಾಯನಿರತವಾಗಿರುವ ಶಿವಲಹರಿಗಳ ಪ್ರವಾಹವು ಆಯಾ ಲಿಂಗದೇಹಗಳಿಗೆ ಆವಶ್ಯಕವಿರುವ ಲಹರಿಗಳನ್ನು ಸೆಳೆದುಕೊಳ್ಳಲು ಪೋಷಕ ಮತ್ತು ಪೂರಕವಾಗಿರುತ್ತವೆ. ಈ ದಿನ ಮುತ್ತೈದೆಯರಲ್ಲಿರುವ ಶಕ್ತಿತತ್ತ್ವವು ಸೂಕ್ಷ್ಮ ಶಿವತತ್ತ್ವದೊಂದಿಗೆ ಬೇಗನೇ ಸಂಯೋಗವಾಗುವುದರಿಂದ ಮುತ್ತೈದೆ (ಅವಿಧವೆಯ) ಲಿಂಗದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ. ಈ ದಿನ ಶಿವಲಹರಿಗಳು ಅಧಿಕ ಪ್ರಮಾಣ ದಲ್ಲಿರುವುದರಿಂದ ಮುತ್ತೈದೆಗೆ ಸೂಕ್ಷ್ಮ ಶಿವತತ್ತ್ವದ ಬಲವು ಪ್ರಾಪ್ತವಾಗಿ ಪೃಥ್ವಿಯ ಮೇಲಿನ ಅವಳ ಪತಿಗೆ ಸಂಬಂಧಿಸಿದ ಆಸಕ್ತಿಯುಕ್ತಬಂಧನಗಳು ಕಡಿಮೆಯಾಗಿ ಅವಳು ಪತಿಯ ಬಂಧನದಿಂದ ಮುಕ್ತಳಾಗುತ್ತಾಳೆ. ಆದುದರಿಂದ ಶಕ್ತಿರೂಪಕ್ಕೆ ಸಂಬಂಧಿಸಿದ ಮುತ್ತೈದೆಯ ಶ್ರಾದ್ಧವನ್ನು ಮಹಾಲಯದಲ್ಲಿ ಶಿವಲಹರಿಗಳ ಬಾಹುಳ್ಯವಿರುವ ನವಮಿಯಂದು ಮಾಡುತ್ತಾರೆ.

‘ಶ್ರಾದ್ಧ’ವೆಂದರೆ ‘ಕೃತಜ್ಞತೆಯಿಂದ ಪಿತೃಗಳನ್ನು ಸ್ಮರಿಸುವುದಷ್ಟೇ ಅಲ್ಲ’, ಅದೊಂದು ವಿಧಿಯಾಗಿದೆ, ಎಂಬುದನ್ನು ಗಮನದಲ್ಲಿಡಿ !

(ಆಧಾರ : ಸನಾತನ ನಿರ್ಮಿತ ಗ್ರಂಥ : ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ)