ವಾಸ್ತು ಆನಂದದಾಯಕವಾಗಲು ವಸತಿಸಂಕೀರ್ಣ (ಫ್ಲ್ಯಾಟ್‌ ಪದ್ಧತಿಯಲ್ಲಿ)ದಲ್ಲಿ ವಾಸ್ತುಶಾಸ್ತ್ರವನ್ನು ಹೇಗೆ ಬಳಸಬೇಕು ?

೧. ಹೊಸ ಮನೆಯನ್ನು ಕಟ್ಟುವಾಗಲೇ ವಾಸ್ತುಶಾಸ್ತ್ರದ ಬಳಕೆ ಮಾಡಬೇಕು ಎಂಬ ತಪ್ಪು ತಿಳುವಳಿಕೆ !

‘ಹೆಚ್ಚಿನವರ ತಿಳುವಳಿಕೆ ಹೇಗಿದೆಯೆಂದರೆ, ‘ನಮಗೆ ಹೊಸ ಮನೆ ಕಟ್ಟಲಿಕ್ಕಿದ್ದರೆ ಮಾತ್ರ ವಾಸ್ತುಶಾಸ್ತ್ರವನ್ನು ಬಳಸಬೇಕು, ಇಲ್ಲವಾದರೆ ಬೇಕಿಲ್ಲ.’ ಇದು ಸಂಪೂರ್ಣ ತಪ್ಪು ತಿಳುವಳಿಕೆ ಯಾಗಿದೆ. ಹೊಸ ಮನೆಯನ್ನು ಕಟ್ಟುವಾಗ ವಾಸ್ತುಶಾಸ್ತ್ರದ ನಿಯಮಗಳನ್ನು ಬಳಸಿದರೆ, ಬಹಳ ಒಳ್ಳೆಯದು ! ಇದರಿಂದ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಬಹುದು ಮತ್ತು ಈ ಶಾಸ್ತ್ರದ ಲಾಭವನ್ನು ಅವಶ್ಯ ಪಡೆಯಬಹುದು; ಆದರೆ ಪ್ರತಿಯೊಬ್ಬರಿಗೆ ಹೊಸ ಮನೆ ಕಟ್ಟುವ ಅವಕಾಶ ಸಿಗುವುದಿಲ್ಲ. ವಿಶೇಷವಾಗಿ ಮಹಾನಗರ ಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ವಸತಿಸಂಕೀರ್ಣಗಳೇ (ಫ್ಲ್ಯಾಟ್‌ಗಳೇ) ಕಾಣಿಸುತ್ತವೆ. ಜನರು ಜಾಗವನ್ನು (ಫ್ಲಾಟ್) ಖರೀದಿಸಿ ಕಾಮಗಾರಿ ಮಾಡಿಸುವುದಕ್ಕಿಂತ ನಿರ್ಮಿಸಿದ ಕಟ್ಟಡದಲ್ಲಿ ಫ್ಲ್ಯಾಟ್‌ ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ.

೨. ಪೂರ್ವ ಅಥವಾ ಉತ್ತರ ದಿಕ್ಕಿಗೆ ಬಾಗಿಲಿರುವ ವಸತಿಸಂಕೀರ್ಣವನ್ನು ಖರೀದಿಸಬೇಕು !

ವಾಸ್ತುಶಾಸ್ತ್ರವನ್ನು ಬಳಸಿ ವಸತಿಸಂಕೀರ್ಣದಲ್ಲಿಯೂ ಆವಶ್ಯಕ ಬದಲಾವಣೆ ಮಾಡಿ ಲಾಭವನ್ನು ಪಡೆಯಬಹುದಾಗಿದೆ. ಇದರಲ್ಲಿಯೂ ಎರಡು ಭಾಗಗಳಿವೆ. ಒಂದೆಂದರೆ ಪೂರ್ತಿ ಹೊಸ ಫ್ಲ್ಯಾಟ್‌ ಖರೀದಿಸುವುದು. ಈ ಪದ್ಧತಿಯಲ್ಲಿ ಫ್ಲ್ಯಾಟ್‌ ಖರೀದಿಸುವಾಗ ಅಥವಾ ಕಾಯ್ದಿರಿಸುವಾಗ ನಾವು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಬಾಗಿಲಿರುವ ವಸತಿಸಂಕೀರ್ಣವನ್ನೇ ಕಾಯ್ದಿರಿಸಬೇಕು ಅಥವಾ ಖರೀದಿಸಬೇಕು, ಅಂದರೆ ಸಾಮಾನ್ಯವಾಗಿ ಇಂತಹ ಜಾಗದಲ್ಲಿ ಅಡಚಣೆಗಳು ಕಡಿಮೆ ಇರುತ್ತವೆ ಅಥವಾ ಅಡಚಣೆಗಳು ಬಂದರೂ ಬೇಗನೇ ನಿವಾರಣೆಯಾಗುತ್ತದೆ. ಹೆಚ್ಚು ತೊಂದರೆಯಾಗುವುದಿಲ್ಲ ಅಥವಾ ಅದರ ತೀವ್ರತೆಯ ಅರಿವು ಹೆಚ್ಚಿರುವುದಿಲ್ಲ.

೩. ವಾಸ್ತುಶಾಸ್ತ್ರದ ನಿಯಮಗಳಿಗನುಸಾರ ಫ್ಲ್ಯಾಟ್‌ನಲ್ಲಿ ಬದಲಾವಣೆ ಮಾಡಿದರೆ ಅಡಚಣೆಗಳು ದೂರವಾಗುತ್ತವೆ !

ದಕ್ಷಿಣ, ದಕ್ಷಿಣ-ಪಶ್ಚಿಮಕ್ಕೆ ಬಾಗಿಲಿರುವ ಫ್ಲ್ಯಾಟ್‌ಗಳಲ್ಲಿ ಅಡಚಣೆಗಳು ಖಂಡಿತವಾಗಿಯೂ ಬರುತ್ತವೆ ಮತ್ತು ಅವು ಗಳನ್ನು ಪರಿಹಾರ ಮಾಡುವಾಗ ಹೆಚ್ಚು ತೊಂದರೆಯಾಗುತ್ತದೆ. ಕೆಲವೊಮ್ಮೆ ಅಡಚಣೆಗಳನ್ನು ಪರಿಹರಿಸುವಾಗ ಮನಸ್ಸಿಗೆ ಬಹಳ ತೊಂದರೆಯಾಗುತ್ತದೆ; ಆದರೆ ನಾವು ವಾಸಿಸುತ್ತಿರುವ ಫ್ಲ್ಯಾಟ್‌ನಲ್ಲಿ ವಾಸ್ತುಶಾಸ್ತ್ರಕ್ಕನುಸಾರ ಬದಲಾವಣೆ ಅಥವಾ ರಚನೆಯನ್ನು ಮಾಡಿದರೂ ಪರಿಸ್ಥಿತಿಯಲ್ಲಿ ನಿಶ್ಚಿತವಾಗಿಯೂ ಬಹಳ ಬದಲಾವಣೆ ಕಂಡು ಬರುತ್ತದೆ. ಈ ರೀತಿ ಬದಲಾವಣೆ ಮಾಡುವಾಗ ಅನುಕೂಲಕ್ಕನುಸಾರ ಆ ಭಾಗದ ಆಕಾರವನ್ನು ಸ್ವಲ್ಪ ಬದಲಾಯಿಸಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ಫ್ಲ್ಯಾಟ್‌ ಒಂದು ವೇಳೆ ಹೆಚ್ಚು ಪ್ರತಿಕೂಲ ಪರಿಣಾಮದ ರಚನೆಯನ್ನು ಹೊಂದಿದ್ದರೆ, ಬದಲಾವಣೆಯ ನಂತರ ಖಂಡಿತವಾಗಿಯೂ ಲಾಭವಾಗುತ್ತದೆ. ಇದರಲ್ಲಿ ಹೆಚ್ಚು ಒಡೆಯುವುದು ಅಥವಾ ಖರ್ಚು ತಗಲುವುದಿಲ್ಲ. ವಾಸ್ತುಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿರುವವರು ವಿವಿಧ ಪರಿಹಾರಗಳನ್ನು ಸರಿಯಾಗಿ ಸೂಚಿಸಬಲ್ಲರು.

೪. ‘ಫ್ಲ್ಯಾಟ್‌ ರಚನೆ ಕುಟುಂಬಕ್ಕೆ ಎಷ್ಟು ಲಾಭದಾಯಕವಿದೆ ?’, ಎಂಬ ವಿಚಾರ ಮಾಡುವುದು ಆವಶ್ಯಕವಾಗಿದೆ !

ಕೆಲವು ಫ್ಲ್ಯಾಟ್‌ಗಳಲ್ಲಿ ಕೆಲವು ರಚನೆಗಳನ್ನು ಬದಲಾಯಿಸು ವುದು ಸಾಧ್ಯವಿರುವುದಿಲ್ಲ, ಇಂತಹ ಸಮಯದಲ್ಲಿ, ತೊಂದರೆಗಳನ್ನು ಕಡಿಮೆ ಮಾಡುವಂತಹ ಪರಿಹಾರವಿರುತ್ತದೆ. ನಮ್ಮ ಮನೆ, ಎಂದರೆ ಫ್ಲ್ಯಾಟ್‌ನ ಸ್ಪಂದನಗಳು ೨೪ ಗಂಟೆಗಳ ಕಾಲ ಮನೆಯಲ್ಲಿರುವ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತವೆ. ಆದುದರಿಂದ ಆ ‘ಫ್ಲ್ಯಾಟ್‌ನ ರಚನೆ ನಮಗೆ ಮತ್ತು ನಮ್ಮ ಕುಟುಂಬಕ್ಕೆ ಎಷ್ಟು ಲಾಭದಾಯಕವಾಗಿದೆ ?’, ಎಂಬುದರ ವಿಚಾರ ಮಾಡುವುದು ಮುಖ್ಯವಾಗಿದೆ. ಇತರರಿಗೆ ಅಥವಾ ಮನೆಗೆ ಬರುವ ಅತಿಥಿಗಳಿಗೆ ನಮ್ಮ ಫ್ಲ್ಯಾಟ್‌ನ ರಚನೆ ಹೇಗೆ ಚೆನ್ನಾಗಿ ಕಾಣಿಸಬಹುದು ?’, ಎಂಬ ವಿಚಾರವನ್ನು ಎಂದಿಗೂ ಮಾಡಬಾರದು. ‘ರಚನೆ ಚೆನ್ನಾಗಿ ಕಾಣಿಸಬೇಕು, ಇದಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚಿನ ಮಹತ್ವವಿಲ್ಲ. ಮನೆಯಲ್ಲಿ ಮಾಡಿದ ಅಂತರ್ಗತ ರಚನೆ ನಮ್ಮ ಕುಟುಂಬದವರ ಪ್ರಗತಿಗೆ ಎಷ್ಟು ಪೂರಕವಾಗಿದೆ ಅಥವಾ ಲಾಭದಾಯಕವಾಗಿದೆ ?’, ಎಂಬ ಬಗ್ಗೆಯೇ ವಿಚಾರ ಮಾಡುವುದು ಆವಶ್ಯಕವಾಗಿದೆ.

೫. ಬಾಗಿಲು ಅಯೋಗ್ಯ ದಿಕ್ಕಿನಲ್ಲಿದ್ದರೆ ಏನು ಮಾಡಬೇಕು ?

ಎಲ್ಲರಿಗೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಬಾಗಿಲಿರುವ ಫ್ಲ್ಯಾಟ್‌ ಸಿಗಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಎಷ್ಟೋ ಜನರಿಗೆ ದಕ್ಷಿಣ, ಪಶ್ಚಿಮ, ನೈಋತ್ಯ ದಿಕ್ಕಿಗೆ ಬಾಗಿಲಿರುವ ಮನೆಗಳೂ ಸಿಗುತ್ತವೆ. ಹೀಗಿದ್ದರೂ, ಭಯ ಪಡುವ ಆವಶ್ಯಕತೆ ಇಲ್ಲ, ಅಂದರೆ ಇರುವ ಜಾಗದಲ್ಲಿ ಶೇ. ೭೦-೮೦ ರಷ್ಟು ನಕಾರಾತ್ಮಕ ಸ್ಪಂದನಗಳಿದ್ದರೆ ಮನೆಯಲ್ಲಿ ವಾಸ್ತುಶಾಸ್ತ್ರಕ್ಕನುಸಾರ ರಚನೆಯನ್ನು ಬದಲಾಯಿಸುವುದರಿಂದ ಶೇ. ೨೦ ರಿಂದ ೩೦ ರಷ್ಟು ತೊಂದರೆಗಳು ಕಡಿಮೆಯಾಗಬಹುದು. ಬರುವ ತೊಂದರೆಗಳನ್ನು ಸಹಿಸಿಕೊಳ್ಳಬಹುದು. ಎಲ್ಲರಿಗೂ ಅಡಚಣೆ ಗಳು ಬರುತ್ತಿರುತ್ತವೆ; ಆದರೆ ಬರುವ ಅಡಚಣೆಗಳನ್ನು ಯಾವ ರೀತಿ ನಾವು ಶಾಂತವಾಗಿ ಜಯಿಸಬಹುದು ?’, ಎಂದು ತಿಳಿಯಬಹುದು ಮತ್ತು ಅದರಂತೆ ಸಂಭವಿಸುತ್ತದೆ. ವಾಸ್ತುಶಾಸ್ತ್ರ ವನ್ನು ಆಧರಿಸಿದ ರಚನೆಯು ಶೇ. ೧೦೦ ಹಾನಿಯನ್ನು ಉಂಟು ಮಾಡುವುದಿಲ್ಲ; ಆದರೆ ಕೇವಲ ಲಾಭವಾಗುತ್ತದೆ.

೬. ‘ಇಂಟಿರಿಯರ್‌ ಡೆಕೊರೆಶನ್‌’ನಲ್ಲಿ ಕೇವಲ ಚೆನ್ನಾಗಿ ಕಾಣುವ ಬಗ್ಗೆ ಒತ್ತು ನೀಡಿರುವುದು

‘ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಫ್ಲ್ಯಾಟ್‌ ಅಥವಾ ಮನೆಯನ್ನು ಚೆನ್ನಾಗಿ ಅಲಂಕರಿಸಬೇಕು’, ಎಂದು ಅನಿಸುತ್ತದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ವಿಶೇಷವಾಗಿ ಉಚ್ಚ ಮಧ್ಯಮ ವರ್ಗದ ಜನರಲ್ಲಿ ‘ಇಂಟಿರಿಯರ್‌ ಡಿಝೈನರ್‌’ರನ್ನು ಕರೆಯಿಸಿ ಫ್ಲ್ಯಾಟ್‌ ಅನ್ನು ಚೆನ್ನಾಗಿ ಮಾಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚು ಇರುತ್ತದೆ. ಅದಕ್ಕಾಗಿ ಅವರು ೨ – ೩ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ವಿಶೇಷವಾಗಿ ಹೊಸ ಫ್ಲ್ಯಾಟ್‌ ಖರೀದಿಸಿದ ನಂತರ ಗೃಹಪ್ರವೇಶಕ್ಕೆ ಮೊದಲು ‘ಇಂಟಿರಿಯರ್‌ ಡೆಕೋರೇಶನ್’ ಮಾಡಿಸಿಕೊಳ್ಳುವ ರೂಢಿ ಚಾಲನೆಯಲ್ಲಿದೆ. ಅದು ಸಹ ತಪ್ಪಲ್ಲ; ಏಕೆಂದರೆ ಒಂದು ಸಲ ಅಲ್ಲಿ ವಾಸಿಸತೊಡಗಿದ ನಂತರ ಪುನಃ ಬಣ್ಣ ಹಚ್ಚುವುದು, ‘ಫರ್ನಿಚರ್’ ಇತ್ಯಾದಿ ವಿಷಯಗಳು ಜನರಿಗೆ ಬೇಡವಾಗಿರುತ್ತದೆ; ಆದರೆ ‘ಇಂಟಿರಿಯರ್‌ ಡೆಕೋರೇಶನ್’ ಮಾಡುವ ವ್ಯಕ್ತಿಗೆ ವಾಸ್ತುಶಾಸ್ತ್ರದ ಮಾಹಿತಿ ಇರುತ್ತದೆ ಎಂದೇನಿಲ್ಲ. ಅವರ ಒಲವು ಯಾವಾಗಲೂ ‘ಫ್ಲ್ಯಾಟ್‌ನಲ್ಲಿ ಬಣ್ಣದ ಆಯೋಜನೆ, ಪೀಠೋಪಕರಣಗಳು’ ಇತ್ಯಾದಿ ಅಲಂಕಾರಗಳು ಹೆಚ್ಚೆಚ್ಚು ಚೆನ್ನಾಗಿ ಹೇಗೆ ಕಾಣಬಹುದು ?’, ಎಂಬ ಕಡೆಗೆ ಇರುತ್ತದೆ. ಅವರಲ್ಲಿ ಉತ್ತಮ ಕಲಾತ್ಮಕತೆಯೂ ಇರುತ್ತದೆ; ಆದರೆ ನನ್ನ ಇಂದಿನ ಅನುಭವದಿಂದ ಏನು ಹೇಳುತ್ತೇನೆಂದರೆ, ಅವರು ಮಾಡುವ ಇಂಟಿರಿಯರ್‌ ಡೆಕೊರೇಶನ್’ ವಾಸ್ತುಶಾಸ್ತ್ರದ ನಿಯಮಗಳ ವಿರುದ್ಧ ಇರುತ್ತದೆ. ‘ಚೆನ್ನಾಗಿ ಕಾಣುವುದು’, ಇದೊಂದೇ ಮುಖ್ಯ ಗುಣಮಟ್ಟ; ಆದರೆ ಮನೆ ಯಲ್ಲಿನ ಜನರಿಗೆ ಅದು ಎಷ್ಟರ ಮಟ್ಟಿಗೆ ಲಾಭದಾಯಕವಾಗಿದೆ ? ಎಂದು ಅವರು ವಿಚಾರ ಮಾಡುವುದಿಲ್ಲ.

– ಶ್ರೀ. ಅರವಿಂದ ವಝೆ (ಆಧಾರ : ಆಧ್ಯಾತ್ಮಿಕ ‘ಓಂ ಚೈತನ್ಯ’, ಡಿಸೆಂಬರ್‌ ೨೦೦೧) (ಮುಂದುವರಿಯುವುದು)