೧. ಸಪ್ತರ್ಷಿ ನಾಡಿವಾಚನದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರ ಬಗ್ಗೆ ಹೇಳುವಾಗ ‘ಅಲ್ಲಿ ಸಾಕ್ಷಾತ್ ದೇವಲೋಕವೇ ಪ್ರಕಟವಾಗಿದೆ’, ಎಂದು ಅನಿಸುವುದು: ‘ನಾನು ನಾಡಿವಾಚನದ ಸಮಯದಲ್ಲಿ ಮಹರ್ಷಿಗಳ ಎದುರಿಗೆ ಕುಳಿತಿರುತ್ತೇನೆ. ಆ ಸಮಯದಲ್ಲಿ ಮಹರ್ಷಿಗಳು ಅತ್ಯಂತ ಪ್ರೀತಿಯಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಗ್ಗೆ ಓದುತ್ತಿರುತ್ತಾರೆ. ಅವರು ಅಷ್ಟೇ ಅಭಿಮಾನದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕನವರ ಗುಣಗಳನ್ನು ವರ್ಣಿಸುತ್ತಿರುತ್ತಾರೆ. ಅದನ್ನು ಕೇಳುವಾಗ ನನ್ನ ಭಾವಜಾಗೃತ ಆಗುತ್ತದೆ. ‘ಆ ಸಮಯದಲ್ಲಿ ನನಗೆ ಅಲ್ಲಿ ಸಾಕ್ಷಾತ್ ದೇವಲೋಕವೇ ಪ್ರಕಟವಾಗಿದೆ’, ಎಂದು ಅನಿಸುತ್ತದೆ.
೨. ಮಹರ್ಷಿಗಳ ಮನಸ್ಸಿನಲ್ಲಿ ಬಹಳಷ್ಟು ಪ್ರೇಮವನ್ನು ನಿರ್ಮಾಣ ಮಾಡುವುದು, ಇದರಲ್ಲಿಯೇ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಕಾರ್ಯದ ಶ್ರೇಷ್ಠತೆ ಅಡಗಿದೆ : ‘ಉತ್ತರಾಪುತ್ರಿ’ ಎಂದು ಮಹರ್ಷಿಗಳು ಎಷ್ಟೊಂದು ವಾತ್ಸಲ್ಯದಿಂದ ಅಕ್ಕನವರನ್ನು (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ) ಕರೆಯುತ್ತಾರೆಂದರೆ, ಅದನ್ನು ಕೇಳುವವರಿಗೆ ‘ಅಕ್ಕನವರು ಅಲ್ಲಿಯೇ ನಿಂತಿದ್ದಾರೆ’, ಎಂದು ಅನಿಸುತ್ತದೆ. ‘ಮಹರ್ಷಿಗಳ ಮನಸ್ಸಿನಲ್ಲಿ ತಮ್ಮ ವಿಷಯದಲ್ಲಿ ಇಷ್ಟೊಂದು ಪ್ರೇಮವನ್ನು ಮೂಡಿಸುವುದು ಎಂದರೆ, ಇದರಲ್ಲಿಯೇ ಅಕ್ಕನವರ ಕಾರ್ಯದ ಶ್ರೇಷ್ಠತೆ ಅಡಗಿದೆ. ‘ಸ್ವತಃ ಸಪ್ತರ್ಷಿಗಳು ಅಕ್ಕನವರ ಕಾರ್ಯವನ್ನು ಪರಿಗಣಿಸಿದ್ದಾರೆ ಮತ್ತು ಅವರಲ್ಲಿನ ದೇವತ್ವದ ಮಹಿಮೆಯನ್ನು ಹಾಡುತ್ತಾರೆ, ಇನ್ನು ನಾವು ಪೃಥ್ವಿಯ ಮೇಲಿನ ಪಾಮರ ಜೀವಗಳು ಏನು ಹೇಳಬಹುದು ? ಹಾಗೆ ನೋಡಿದರೆ ಅಕ್ಕನವರ ಸ್ಥೂಲದ ಕಾರ್ಯವು ಬಹಳ ದೊಡ್ಡದಾಗಿದೆ, ಅದು ಕಾಗದದ ಮೇಲೆ ಹಿಡಿಸುವಂತಹದ್ದಲ್ಲ. ಸೂಕ್ಷ್ಮದಲ್ಲಿನ ಅವರ ಕಾರ್ಯವನ್ನು ಕೇವಲ ಸಪ್ತರ್ಷಿಗಳು ಮತ್ತು ಶ್ರೀಗುರುಗಳೇ ಹೇಳಬಹುದು; ಆದರೆ ನಾವು ಅಕ್ಕನವರಲ್ಲಿನ ದೇವಿತತ್ತ್ವದ ಚರಣಗಳಲ್ಲಿ ಸಮರ್ಪಣಾಭಾವದಿಂದ ಕೋಟಿ ಕೋಟಿ ವಂದಿಸಬಹುದು, ನಾವು ಇಷ್ಟೇ ಮಾಡಬಲ್ಲೆವು.
೩. ‘ತಾಯಿಯ ರೂಪದಲ್ಲಿ ಸಾಧಕರನ್ನು ನಿರಪೇಕ್ಷವಾಗಿ ಪ್ರೇಮಿಸುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ಅಕ್ಕ, ಸಪ್ತರ್ಷಿಗಳು ವರ್ಣಿಸಿದಂತೆ ನೀವು ‘ಶ್ರೀಸತ್‌ಶಕ್ತಿ’ ಆಗಿದ್ದೀರಿ, ‘ಶ್ರೀ ಮಹಾಲಕ್ಷ್ಮಿಯ ಅಂಶ’ವಾಗಿದ್ದೀರಿ, ಆದರೂ ನೀವು ನಮ್ಮ ‘ಅತ್ಯಂತ ಆತ್ಮೀಯ ಬಿಂದಾ ಅಕ್ಕ’ಳೇ ಆಗಿರುವಿರಿ. ಆಧ್ಯಾತ್ಮಿಕ ಅಧಿಕಾರದಿಂದ ಎಷ್ಟೇ ದೊಡ್ಡವರಾಗಿ ದ್ದರೂ, ಮಗು ತನ್ನ ತಾಯಿಗೆ ‘ಅಮ್ಮ’ ಎಂದೇ ಕರೆಯುತ್ತದೆ. ಅವಳು ಎಷ್ಟು ಕೋಪ ಮಾಡಿದರೂ, ಅವಳನ್ನೇ ಹೋಗಿ ಅಪ್ಪಿಕೊಳ್ಳುತ್ತದೆ. ಅವಳೊಂದಿಗೆ ತನ್ನ ತೊದಲು ಭಾಷೆಯಲ್ಲಿ ಮಾತನಾಡುತ್ತದೆ. ನಮ್ಮ ಸ್ಥಿತಿಯೂ ಅದೇ ರೀತಿಯಾಗಿದೆ. ತಾಯಿಯ ಕೇವಲ ಪ್ರೀತಿಯ ದೃಷ್ಟಿಯು ಮಗುವಿಗೆ ಒಂದು ಕ್ಷಣದಲ್ಲಿ ಏನೆಲ್ಲ ನೀಡುತ್ತದೆ. ಅಕ್ಕಾ, ನೀವು ನಮಗಾಗಿ ಅದೇ ರೀತಿಯಾಗಿದ್ದೀರಿ !
ತಾಯಿಯಂತೆ ಎಲ್ಲರನ್ನು ಪ್ರೀತಿಸುವ, ಎಲ್ಲರಿಗೂ ಆಧ್ಯಾತ್ಮಿಕ ಆಧಾರವನ್ನು ಕೊಡುವ ಮತ್ತು ದೇವಿಸ್ವರೂಪವಾಗಿರುವ ಸಾಕ್ಷಾತ್ ಶ್ರೀಸತ್‌ಶಕ್ತಿಯ ಚರಣಗಳಲ್ಲಿ ನಮ್ಮೆಲ್ಲರ ಶತಕೋಟಿ ವಂದನೆಗಳು ! ‘ಈ ಕಲಿಯುಗದಲ್ಲಿ ಈಶ್ವರನು ನಮ್ಮನ್ನು ತಮ್ಮಿಂದ ಎಂದಿಗೂ ದೂರ ಮಾಡದಿರಲಿ’, ಇದೇ ತಮ್ಮ ಹುಟ್ಟುಹಬ್ಬದ ದಿನದಂದು ಬಾಲಕರಾದ ನಮ್ಮೆಲ್ಲರ ಕಳಕಳಿಯ ಪ್ರಾರ್ಥನೆಯಾಗಿದೆ !’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೧೮.೯.೨೦೨೨)