೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರನ್ನು ಭೇಟಿಯಾದಾಗ ಮೈಮರೆಯುವುದು : ‘ನಾನು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಒಂದು ತಿಂಗಳು ವಾಸ್ತವ್ಯದಲ್ಲಿದ್ದಾಗ ೧೬.೧೨.೨೦೨೧ ರಂದು ರಾತ್ರಿ ೮.೩೦ ಗಂಟೆಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ನನ್ನನ್ನು ಭೇಟಿಯಾಗಲು ಅವರ ಕೋಣೆಗೆ ಕರೆದರು. ನಾನು ಅವರ ಕೋಣೆಗೆ ಹೋದಾಗ ಅವರು ನನಗೆ ಸುಖಾಸನದ ಮೇಲೆ (ಸೋಫಾದ ಮೇಲೆ) ಕುಳಿತುಕೊಳ್ಳಲು ಹೇಳಿದರು. ನಾನು ಒಂದೇ ದೃಷ್ಟಿಯಿಂದ ಅವರನ್ನು ನೋಡುತ್ತಲೇ ಇದ್ದೆ. ಆಗ ನನ್ನ ದೇಹದ ಅರಿವು ಮರೆತು ಹೋಗಿತ್ತು. ಅವರು ನನಗೆ ನನ್ನ ಸಾಧನೆಯ ಬಗ್ಗೆ ಹೇಳಿದರು ಮತ್ತು ‘ಭಾಗ್ಯನಗರದಲ್ಲಿನ ಗ್ರಂಥ ಪ್ರದರ್ಶನದ ಸೇವೆಗೆ ಹೋಗಿ ಪುನಃ ರಾಮನಾಥಿ ಆಶ್ರಮಕ್ಕೆ ಬನ್ನಿ’, ಎಂದು ಹೇಳಿದರು.
೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರನ್ನು ನೋಡಿ ‘ಸಾಕ್ಷಾತ್ ಲಕ್ಷ್ಮೀದೇವಿಯೇ ಭೇಟಿಯಾದಳು’, ಎಂಬ ಅನುಭೂತಿ ಬರುವುದು ಮತ್ತು ಅವರೊಂದಿಗೆ ಮಾತನಾಡಲು ಶಬ್ದಗಳೇ ಹೊಳೆಯದಿರುವುದು: ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ನನಗೆ ನನ್ನ ಸಾಧನೆಯ ಬಗ್ಗೆ ಹೇಳುತ್ತಿರುವಾಗ ನನ್ನ ಸ್ಥಿತಿ ಹೇಗಿತ್ತೆಂದರೆ, ‘ನನಗೆ ಸಾಕ್ಷಾತ್ ಲಕ್ಷ್ಮೀದೇವಿ ಭೇಟಿಯಾಗಿದ್ದಾಳೆ’, ಎಂದು ಅನಿಸುತ್ತಿತ್ತು. ‘ನಾವು ಮಾತನಾಡುತ್ತಿದ್ದೆವು; ಆದರೆ ‘ನಾನು ಏನು ಮಾತನಾಡುತ್ತಿದ್ದೇನೆ ?’, ಎಂಬುದು ನನ್ನ ಗಮನಕ್ಕೆ ಬರುತ್ತಿರಲೇ ಇಲ್ಲ. ನನಗೆ ಅವರೊಂದಿಗೆ ಮಾತನಾಡಲು ಶಬ್ದಗಳೇ ಹೊಳೆಯುತ್ತಿರಲಿಲ್ಲ.
೩. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಭೇಟಿಯ ನಂತರ ೪-೫ ದಿನ ‘ಅವರು ಪ್ರತ್ಯಕ್ಷ ನನ್ನ ಎದುರಿಗೆ ನಿಂತಿದ್ದಾರೆ ಮತ್ತು ಅವರಿಂದ ನನ್ನ ಕಡೆ ಚೈತನ್ಯ ಪ್ರಕ್ಷೇಪಿಸುತ್ತಿದೆ’, ಎಂಬ ಅನುಭವ ಬರುವುದು: ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೋಣೆಯಿಂದ ಹೊರಗೆ ಬಂದನಂತರ ನನ್ನ ಆನಂದಕ್ಕೆ ಮಿತಿಯೇ ಇರಲಿಲ್ಲ. ನನಗೆ ‘ಈ ಭೂತಲದ ಮೇಲೆ ನನ್ನ ಈ ಕಣ್ಣುಗಳಿಂದ ಸಾಕ್ಷಾತ್ ಶ್ರೀ ಲಕ್ಷ್ಮೀದೇವಿಯನ್ನು ನೋಡಿದೆನು’, ಎಂಬ ಅನುಭೂತಿ ಬಂದಿತು. ಇಂತಹ ಆನಂದವನ್ನು ಈ ಮೊದಲು ನಾನು ಎಂದಿಗೂ ಅನುಭವಿಸಿರಲಿಲ್ಲ. ನಂತರ ೪-೫ ದಿನ ನಾನು ಸಹಜವಾಗಿ ಕಣ್ಣುಗಳನ್ನು ಮುಚ್ಚಿದರೂ, ನನಗೆ ‘ನನ್ನ ಕಣ್ಣೆದುರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ನಿಂತಿದ್ದಾರೆ ಮತ್ತು ಅವರಿಂದ ನನ್ನತ್ತ ಪ್ರಕಾಶಮಾನ ಚೈತನ್ಯ ಪ್ರಕ್ಷೇಪಿಸುತ್ತಿದೆ’, ಎಂಬುದು ಕಾಣಿಸುತ್ತಿತ್ತು.
‘ನನ್ನಲ್ಲಿ ಯಾವ ಯೋಗ್ಯತೆ ಇಲ್ಲದಿದ್ದರೂ ನನಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದರ್ಶನವಾಯಿತು’, ಇದು ನನ್ನ ಭಾಗ್ಯವೇ ಆಗಿದೆ. ಅದಕ್ಕಾಗಿ ನಾನು ಪರಾತ್ಪರಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’
– ಶ್ರೀಮತಿ ಪದ್ಮಾ ಶೆಣೈ (ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೬೩ ವರ್ಷ), ಭಾಗ್ಯನಗರ (೨೭.೨.೨೦೨೨)