ಜ್ಞಾನವಾಪಿಯ ಸಮೀಕ್ಷೆ ನಿಲ್ಲಿಸುವುದಕ್ಕೆ ಮುಸಲ್ಮಾನ ಪಕ್ಷ ಸಲ್ಲಿಸಿದ್ದ ಬೇಡಿಕೆ ನ್ಯಾಯಾಲಯದಿಂದ ತಿರಸ್ಕಾರ

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯ ಭಾರತೀಯ ಪುರಾತತ್ವ ಇಲಾಖೆಯಿಂದ ನಡೆಯುವ ಸಮೀಕ್ಷೆ, ವೈಜ್ಞಾನಿಕ ಸಮೀಕ್ಷೆ ನಿಲ್ಲಿಸಲು ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯಿಂದ ಸಲ್ಲಿಸಿರುವ ಅರ್ಜಿ ನ್ಯಾಯಾಲಯ ತಿರಸ್ಕರಿಸಿದೆ. ‘ಈ ಸಮೀಕ್ಷೆ ಅಲಹಾಬಾದ್ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ನಡೆಯುತ್ತಿದೆ. ಆದ್ದರಿಂದ ಈ ನ್ಯಾಯಾಲಯಕ್ಕೆ ಈ ಪ್ರಕರಣದ ಬಗ್ಗೆ ಯಾವುದೇ ವಿಚಾರಣೆ ನಡೆಸುವ ಅಧಿಕಾರವಿಲ್ಲ; ಎಂದು ನ್ಯಾಯಾಲಯ ಈ ಸಮಯದಲ್ಲಿ ಸ್ಪಷ್ಟಪಡಿಸಿದೆ. ಸಮೀಕ್ಷೆ ಮಾಡುವಾಗ ನಿಯಮಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ ೫ ಕ್ಕೆ ನಡೆಯುವುದು.