ಅಮೇರಿಕೆಯ ಸಂಸತ್ತಿನಲ್ಲಿ ಶ್ರೀ ಶ್ರೀ ರವಿಶಂಕರ ಮತ್ತು ಆಚಾರ್ಯ ಲೊಕೇಶ ಮುನಿ ಇವರ ಶಾಂತಿಯ ಕಾರ್ಯದ ಬಗ್ಗೆ ಶ್ಲಾಘನೆ !

ವಾಷಿಂಗ್ಟನ (ಅಮೇರಿಕಾ) – ಭಾರತದ ಧರ್ಮಗುರು ಶ್ರೀ ಶ್ರೀ ರವಿಶಂಕರ ಮತ್ತು ಆಚಾರ್ಯ ಲೊಕೇಶ ಮುನಿ ಇವರು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸಲು ಮಾಡಿರುವ ಪ್ರಯತ್ನಗಳ ಬಗ್ಗೆ ಅಮೇರಿಕೆಯ ಸಂಸತ್ತು ಶ್ಲಾಘಿಸಿದೆ.

ಅಮೇರಿಕಾದ ಸಂಸದ ರಾಜಾ ಕೃಷ್ಣಮೂರ್ತಿ ಇವರು, ಶ್ರೀ ಶ್ರೀ ರವಿಶಂಕರ್ ಅವರು ಕಳೆದ 40 ವರ್ಷಗಳಿಂದ ಧ್ಯಾನ ಮತ್ತು ಯೋಗದ ಶಕ್ತಿಯ ಮೂಲಕ ವಿಶ್ವದ ಜನರಿಗೆ ಆಂತರಿಕ ಶಾಂತಿಗಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಆಂತರಿಕ ಶಾಂತಿ ಸಿಗುತ್ತಿದೆ ಮತ್ತು ಇದರಿಂದ ಜಗತ್ತಿನಲ್ಲಿ ಹಿಂಸಾಚಾರ ಕಡಿಮೆಯಾಗಬಹುದು ಎಂದು ಹೇಳಿದರು.

ರಾಜಾ ಕೃಷ್ಣಮೂರ್ತಿ ತಮ್ಮ ಮಾತನ್ನು ಮುಂದುವರಿಸಿ, ಆಚಾರ್ಯ ಲೊಕೇಶ ಮುನಿಗಳು ತಮ್ಮನ್ನು ಜೈನ ಧರ್ಮ, ಬೌದ್ಧ ಧರ್ಮ ಮತ್ತು ವೈದಿಕ ತತ್ವಗಳಿಗೆ ಅರ್ಪಿಸಿಕೊಂಡಿದ್ದಾರೆ. ಅವರು ಅನೇಕ ಸ್ಥಳಗಳಲ್ಲಿ ಧಾರ್ಮಿಕ ಹಿಂಸಾಚಾರವನ್ನು ಕಡಿಮೆ ಮಾಡಲು ಸಹಾಯ ಮಾಡಿದರು. ಅವರು ಭಾರತದ ಗುರುಗ್ರಾಮನಲ್ಲಿ ವಿಶ್ವ ಶಾಂತಿ ಕೇಂದ್ರವನ್ನು ತೆರೆದಿದ್ದಾರೆ. ಅವರ ಕಾರ್ಯಗಳಿಂದ ಜಗತ್ತಿನಾದ್ಯಂತವಿರುವ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಜಗತ್ತಿನ ಒಬ್ಬರಾದರೂ ಇಸ್ಲಾಮಿಕ್ ಧರ್ಮಗುರುಗಳು ಇಂತಹ ಕಾರ್ಯವನ್ನು ಮಾಡುತ್ತಾರೆಯೇ ?