ನಿಜ್ಜರ ಕೊಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡವಿರುವ ಸಂದೇಹ !

ಮಾದಕ ವಸ್ತುಗಳ ವ್ಯಾಪಾರದಿಂದ ಕೊಲೆ ಸಾಧ್ಯತೆ !

ನವ ದೆಹಲಿ – ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತವೇ ಕಾರಣ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ದೊಡ್ಡ ವಿವಾದ ಹುಟ್ಟಿಕೊಂಡಿದೆ. ಈ ಹಿನ್ನಲೆಯಲ್ಲಿ ನಿಜ್ಜರ್ ನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಕೊಂದಿದೆ ಎಂಬ ಸುದ್ದಿ ಹರಿದಾಡಿದೆ. ‘ಭಾರತಕ್ಕೆ ತೊಂದರೆ ನೀಡಲು ಐ.ಎಸ್‌.ಐ. ನಿಜ್ಜರ್ ಅವರನ್ನು ಕೊಲ್ಲಲು ಬಯಸಿತ್ತು’, ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ, ಕೆನಡಾದಲ್ಲಿ ರಾಹತ್ ರಾವ್ ಮತ್ತು ತಾರಿಕ್ ಕಿಯಾನಿ ಇವರು ಐ.ಎಸ್.ಐ.ನ ಬಲಗೈಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನಿಜ್ಜರ ಹತ್ಯೆಗೆ ವ್ಯಾಪಾರ ಹಾಗೂ ಮಾದಕ ವಸ್ತು ಕಾರಣ ಎನ್ನಲಾಗಿದೆ. ರಾವ್ ಮತ್ತು ಕಿಯಾನಿ ಸ್ಥಳೀಯ ಮಾದಕ ವಸ್ತುಗಳ ವ್ಯವಹಾರದ ಮೇಲೆ ನೇರ ನಿಯಂತ್ರಣ ಹೊಂದಲು ನಿಜ್ಜರನ್ನು ಕೊಲ್ಲುಲು ಇವರಲ್ಲಿ ಒಬ್ಬರಿಗೆ ವಹಿಸಿರಬಹುದು ಎಂದು ವರದಿ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !