ಪಾಕಿಸ್ತಾನದಲ್ಲಿನ ಅಮೇರಿಕಾದ ರಾಯಭಾರಿಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ !

ಇಸ್ಲಾಮಾಬಾದ – ಪಾಕಿಸ್ತಾನದಲ್ಲಿನ ಅಮೇರಿಕಾದ ರಾಯಭಾರಿ ಡೇವಿಡ್ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಇತ್ತೀಚಿಗೆ ಭೇಟಿ ನೀಡಿದರು. ಈ ಭೇಟಿಯಲ್ಲಿ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ‘ಸ್ವತಂತ್ರ ಕಾಶ್ಮೀರ’ ಎಂದು ಘೋಷಿಸಿದರು. ಅವರ ಈ ಹೇಳಿಕೆಯ ನಂತರ ಭಾರತ ಮತ್ತು ಅಮೆರಿಕ ಇವರಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಬಹುದು. ಬ್ಲೂಮ್ ಇವರ ಈ ನಿಲುವಿನ ನಂತರ ಅಮೆರಿಕಾದ ದ್ವಿಮುಖ ಬಹಿರಂಗವಾಗಿದೆ. ಕೆನಡಾದಲ್ಲಿನ ಖಲೀಸ್ತಾನವಾದಿಯ ಸೂತ್ರದಿಂದ ಎರಡು ದೇಶಗಳಲ್ಲಿ ಕೆಲವು ಸೂತ್ರಗಳ ಬಗ್ಗೆ ಮೊದಲೇ ಭಿನ್ನಾಭಿಪ್ರಾಯವಿದೆ.

ಬ್ಲೂಮ್ ಇವರು ಕಳೆದ ವರ್ಷ ಕೂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಈ ಪ್ರವಾಸಕ್ಕೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಆ ಸಮಯದಲ್ಲಿ ಕೂಡ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಸ್ವತಂತ್ರ ಕಾಶ್ಮೀರ’ ಎಂದೇ ಉಲ್ಲೇಖಿಸಿದ್ದರು. (ಜಮ್ಮು ಕಾಶ್ಮೀರ ಇದು ಭಾರತದ ಅವಿಭಾಜ್ಯ ಅಂಗವಾಗಿದೆ, ಹೀಗೆ ಭಾರತದ ಸಂಸತ್ತಿನಲ್ಲಿ ಒಮ್ಮತದಿಂದ ಘೋಷಿಸಲಾಗಿರುವಾಗ ಅದರ ಬಗ್ಗೆ ವಿಪರ್ಯಾಸದ ಹೇಳಿಕೆ ನೀಡುವುದು ಇದು ಅಮೆರಿಕಾದ ದ್ವಿಮುಖ ಅಲ್ಲದೆ ಬೇರೆ ಏನಿದೆ ? – ಸಂಪಾದಕರು)

ಸಂಪಾದಕೀಯ ನಿಲುವು

ಅಮೇರಿಕಾದ ನಿಜ ಸ್ವರೂಪ ! ಅಮೇರಿಕಾ ಭಾರತದ ಮಿತ್ರ ಆಗಲು ಎಂದಿಗೂ ಸಾಧ್ಯವಿಲ್ಲ. ಅಮೇರಿಕಾ ಸ್ವಂತ ಸ್ವಾರ್ಥಕ್ಕಾಗಿ ಯಾವುದಾದರೂ ದೇಶವನ್ನು ಹತ್ತಿರ ಮಾಡುತ್ತದೆ ಮತ್ತು ಸ್ವಂತ ಉದ್ದೇಶ ಸಾಧಿಸಿದ ನಂತರ ಅದನ್ನು ತಿರಸ್ಕರಿಸುತ್ತದೆ. ಆದ್ದರಿಂದ ಈ ಪ್ರಕರಣದಲ್ಲಿ ಅಮೆರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಭಾರತ ಪ್ರತ್ಯುತ್ತರ ನೀಡುವುದು ಆವಶ್ಯಕವಾಗಿದೆ !