ಅಧ್ಯಾತ್ಮದ ಅಧ್ಯಯನ ಮಾಡುವಲ್ಲಿ ಶಬ್ದಗಳಿಗಿರುವ ಮಿತಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅಧ್ಯಾತ್ಮದಲ್ಲಿ ಹೆಚ್ಚೆಂದರೆ ಶೇ. ೫೦ ರಷ್ಟು ಜ್ಞಾನ ವನ್ನು ಮಾತ್ರ ಶಬ್ದಗಳಿಂದ ಪಡೆದುಕೊಳ್ಳಬಹುದು. ಅದರ ಮುಂದಿನ ಎಲ್ಲ ಜ್ಞಾನವು ಅನುಭೂತಿ ಗಳಿಂದಲೇ ಸಿಗುತ್ತದೆ. ಇದರ ಕೆಲವು ಉದಾಹರಣೆಗಳು ಮುಂದಿನಂತಿವೆ.

೧. ಸಕ್ಕರೆಯ ಸಿಹಿಯನ್ನು ಶಬ್ದಗಳಲ್ಲಿ ಹೇಳಲು ಬರುವುದಿಲ್ಲ, ಅದರ ರುಚಿಯನ್ನು ಸಕ್ಕರೆಯನ್ನು ತಿಂದೇ ನೋಡಬೇಕಾಗುತ್ತದೆ. ಹಾಗೆಯೇ ಒಳ್ಳೆಯ ಮತ್ತು ಕೆಟ್ಟಶಕ್ತಿಗಳು, ಭಾವ, ಚೈತನ್ಯ, ಆನಂದ, ಶಾಂತಿ ಮುಂತಾದ ಆಧ್ಯಾತ್ಮಿಕ ಪರಿಭಾಷೆಯಲ್ಲಿನ ಶಬ್ದಗಳ ಅರ್ಥವನ್ನು ಶಬ್ದಗಳಲ್ಲಿ ಹೇಳಲು ಬರುವುದಿಲ್ಲ, ಅವುಗಳನ್ನು ಅನುಭವಿಸಿಯೇ ನೋಡಬೇಕಾಗುತ್ತದೆ.

೨. ಉದ್ದ, ಅಗಲ, ಎತ್ತರ ಮತ್ತು ಕಾಲ ಎಂಬ ನಾಲ್ಕು ಮಿತಿಗಳ ಆಚೆಗೆ ಇನ್ನೂ ಮೂರು ಮಿತಿಗಳಿವೆ. ಅವುಗಳನ್ನೂ ಶಬ್ದಗಳಲ್ಲಿ ಹೇಳಲು ಬರುವುದಿಲ್ಲ.

೩. ಸಪ್ತಲೋಕ, ಸಪ್ತಪಾತಾಳ ಮತ್ತು ಬ್ರಹ್ಮಾಂಡದ ಆಚೆಗಿರುವ ವಿಶ್ವದಲ್ಲಿನ ವಾತಾವರಣವನ್ನು ಶಬ್ದಗಳಲ್ಲಿ ಹೇಳಲು ಬರುವುದಿಲ್ಲ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ