ನಾಝಿ ಸೈನ್ಯಾಧಿಕಾರಿಗಳಿಗೆ ಕೆನಡಾದ ಪ್ರಧಾನಿ ಜಸ್ಟೀನ್ ಟ್ರುಡೋ ಇವರು ಸಂಸತ್ತಿನಲ್ಲಿ ಚಪ್ಪಾಳೆ ತಟ್ಟಿ ಗೌರವ !

ವಿರೋಧ ವ್ಯಕ್ತವಾದ ನಂತರ ಸಂಸತ್ತಿನ ಅಧ್ಯಕ್ಷರಿಂದ ಕ್ಷಮಯಾಚನೆ !

ಓಟಾವ (ಕೆನಡಾ) – ಕಳೆದ ವಾರದಿಂದ ಉಕ್ರೆನಿನ ಅಧ್ಯಕ್ಷ ಝೆಲಸ್ಕಿ ಕೆನಡಾದ ಪ್ರವಾಸದಲ್ಲಿದ್ದಾರೆ. ಅವರು ಸಪ್ಟೆಂಬರ್ ೨೪ ರಂದು ಕೆನಡಾದ ಸಂಸತ್ತಿಗೆ ಪ್ರಮುಖ ಅತಿಥಿಯಾಗಿ ಉಪಸ್ಥಿತರಾಗಿದ್ದರು. ಆ ಸಮಯದಲ್ಲಿ ಅವರ ಉಪಸ್ಥಿತಿಯಲ್ಲಿ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಎರಡನೆಯ ಮಹಾಯುದ್ಧದಲ್ಲಿ ನಾಝಿ ಸೈನಿಕರ ಪರವಾಗಿ ಹೋರಾಡಿರುವ ಓರ್ವ ಹಿರಿಯ ಅಧಿಕಾರಿಯನ್ನು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು. ಇದರಿಂದ ವಿರೋಧಿಪಕ್ಷದ ನಾಯಕ ಪಾಯರೇ ಪಾಲಿವರೆ ಇವರು ಟ್ರುಡೋ ಇವರನ್ನು ವಿರೋಧಿಸಿದರು. ಅವರು ಟ್ವೀಟ್ ಮೂಲಕ, ‘ಟ್ರುಡೋ ಇವರ ಪಕ್ಷವು ಝೆಲಕ್ಸಿ ಇವರ ಸಂಸದ ಭೇಟಿಯ ಸಮಯದಲ್ಲಿ ಸಂಸತ್ತಿನಲ್ಲಿ ನಾಝಿ ಅಧಿಕಾರಿಗೆ ಗೌರವ ಸಲ್ಲಿಸುವ ಆಯೋಜನೆ ಮಾಡಿದ್ದು; ಆದರೆ ಇದರಲ್ಲಿ ಮಹಾ ತಪ್ಪು ಜಸ್ಟಿನ್ ರೂಡೋ ಇವರದ್ದಾಗಿದೆ; ಕಾರಣ ಸಂಸತ್ತಿನಲ್ಲಿ ಯಾವುದಾದರೂ ಅತಿಥಿಗೆ ಗೌರವ ಸಲ್ಲಿಸಬೇಕಿದ್ದರೆ ಅದರ ಆಯೋಜನೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಮಾಡಲಾಗುತ್ತದೆ.’ ಈ ಪ್ರಕರಣದಿಂದ ದೇಶದಲ್ಲಿನ ವಾತಾವರಣ ಬಿಸಿಯಾಗುವುದನ್ನು ನೋಡಿ ಸಂಸತ್ತಿನ ಅಧ್ಯಕ್ಷ ಅಂಥನಿ ರೋಟ ಇವರು ದೇಶದಲ್ಲಿನ ಮತ್ತು ಜಗತ್ತಿನಾದ್ಯಂತ ಇರುವ ಜ್ಯೂ ಜನಾಂಗದ ಕ್ಷಮೆ ಯಾಚಿಸಿದರು.

ಸಂಪಾದಕೀಯ ನಿಲುವು

‘ನಾಝಿ, ಖಲಿಸ್ತಾನಿ, ಗೂಂಡಾಗಳು ಮುಂತಾದವರನ್ನು ಬೆಂಬಲಿಸುವ ಮತ್ತು ಅವರಿಗೆ ಗೌರವ ನೀಡುವ ಜಗತ್ತಿನಲ್ಲಿನ ಏಕೈಕ ಪ್ರಧಾನಮಂತ್ರಿ ಎಂದರೆ ಜಸ್ಟಿನ್ ಟ್ರುಡೋ’, ಎಂದು ಇವರನ್ನು ಇನ್ನು ಮುಂದೆ ಗುರುತಿಸಲಾಗುವುದು.