ಈಗ ಸಮುದ್ರಯಾನ !

ಭಾರತವು ಚಂದ್ರಯಾನ ಯಶಸ್ವಿಯಾದ ಬಳಿಕ ಈಗ ಸಮುದ್ರವಿಜಯವನ್ನು ಪಡೆಯಲು ನಿರ್ಧರಿಸಿದೆ. ಚೆನ್ನೈನ ‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಶಿಯನ್‌ ಟೆಕ್ನಾಲಜಿ’ಯಲ್ಲಿ ನಿರ್ಮಿಸಲಾಗುತ್ತಿರುವ ‘ಮತ್ಸ್ಯ ೬೦೦೦’ ಹೆಸರಿನ ಸಮುದ್ರಯಾನ’ವು ಸಮುದ್ರದಾಳದಲ್ಲಿರುವ ವಿವಿಧ ಸಂಪನ್ಮೂಲಗಳು ಮತ್ತು ಜೀವವೈವಿಧ್ಯವನ್ನು ಅಧ್ಯಯನ ಮಾಡಲಿದೆ. ಸದ್ಯ ಕೇವಲ ಅಮೇರಿಕಾ, ರಶಿಯಾ, ಫ್ರಾನ್ಸ್‌, ಜಪಾನ ಮತ್ತು ಚೀನಾ ಈ ದೇಶಗಳಷ್ಟೇ ಇಂತಹ ಯೋಜನೆಗಳಿಗಾಗಿ ವಿಶೇಷ ತಂತ್ರಜ್ಞಾನ ಮತ್ತು ವಾಹನಗಳನ್ನು ಹೊಂದಿದ್ದು ಈಗ ಭಾರತ ಕೂಡ ಈ ದೇಶಗಳ ಪಟ್ಟಿಗೆ ಸೇರಲಿದೆ. ವಾಸ್ತವದಲ್ಲಿ, ತ್ರೇತಾಯುಗದಲ್ಲಿಯೇ ನಲ ಮತ್ತು ನೀಲರೆಂಬ ರಾಮಾಯಣ ಕಾಲದ ಈ ಅಭಿಯಂತÀರು ರಾಮೇಶ್ವರಮ್‌ ಮತ್ತು ಶ್ರೀಲಂಕಾಗಳ ಮಧ್ಯೆ ೪೮ ಕಿ.ಮೀ. ಉದ್ದದ ಸೇತುವೆಯನ್ನು ನಿರ್ಮಿಸಿ ಸಮುದ್ರದ ಮೇಲೆ ಜಯವನ್ನು ಸಾಧಿಸಿದ್ದರು. ಲಕ್ಷಾಂತರ ವರ್ಷಗಳ ಹಿಂದೆ ಕಟ್ಟಿದ ಸೇತುವೆ ಈಗಿನ ವಿಜ್ಞಾನಕ್ಕೆ ಒಂದು ಸವಾಲಾಗಿದೆ.

‘ಸಮುದ್ರಯಾನ’ದ ಮೂಲಕ ಕೈಗೊಳ್ಳಲಿರುವ ಈ ಸಂಶೋಧನಾ ಕಾರ್ಯವು ಖಂಡಿತವಾಗಿಯೂ ಒಂದು ಕ್ಷೇತ್ರದ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಲಿದೆ.

ಪೃಥ್ವಿಯ ಶೇ. ೭೦ ರಷ್ಟು ಭಾಗವು ನೀರಿನಿಂದ ಆವೃತ್ತವಾಗಿದೆ ಮತ್ತು ಅದರಲ್ಲಿ ಶೇ. ೯೫ ರಷ್ಟು ಭಾಗವು ಸಮುದ್ರವನ್ನು ಆವರಿಸಿದೆ. ಭಾರತವು ೩ ದಿಕ್ಕುಗಳಿಂದಲೂ ಸಮುದ್ರತೀರವನ್ನು ಹೊಂದಿದೆ. ಭಾರತದ ಜನಸಂಖ್ಯೆಯ ಶೇ. ೩೦ ರಷ್ಟು ಜನಸಂಖ್ಯೆಯು ಸಮುದ್ರತೀರದಲ್ಲಿ ವಾಸಿಸುತ್ತಿದೆ ಮತ್ತು ಅಲ್ಲಿ ಮತ್ಸ್ಯೋದ್ಯಮ, ಪ್ರವಾಸೋದ್ಯಮ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಇದರಿಂದ ಭಾರತಕ್ಕೆ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ದೊರೆಯುತ್ತದೆ. ಮೀನುಗಾರಿಕೆ ಉದ್ಯಮ ಮತ್ತು ಮೀನುಕೃಷಿಯ ಕಾರಣದಿಂದ ಭಾರತವು ಮೀನುಗಾರಿಕಾ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿದೆ. ಮುಖ್ಯವಾಗಿ, ಜಾಗತಿಕ ಮಟ್ಟದಲ್ಲಿ ಸಮುದ್ರ ವ್ಯಾಪಾರದ ತೈಲ ಸಾಗಾಣಿಕೆಯ ೩/೪ ಭಾಗವು ಭಾರತದ ಮಹಾಸಾಗರದ ಮೂಲಕ ಹಾದುಹೋಗುತ್ತದೆ. ಸಮುದ್ರದಲ್ಲಿ ೬ ಸಾವಿರ ಮೀಟರ್‌ಗಿಂತ ಹೆಚ್ಚು ಆಳದಲ್ಲಿ ಹಲವು ಬಗೆಯ ಖನಿಜದ್ರವ್ಯಗಳಿದ್ದು ಅವುಗಳ ಅಧ್ಯಯನ ಇನ್ನೂ ನಡೆದಿಲ್ಲ. ದೇಶದಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಭೂಮಿಯ ಕೆಳಗಿನ ಖನಿಜಗಳ ಗಣಿಗಾರಿಕೆ ನಡೆಯುತ್ತಿದ್ದು, ಮುಂದೊಂದು ದಿನ ಇಂಧನ, ಅನಿಲದ ಜೊತೆಗೆ ಖನಿಜಗಳ ಪೂರೈಕೆ ಸ್ಥಗಿತಗೊಳ್ಳುವುದು’ ಎನ್ನುವ ಆತಂಕ ಕಳೆದ ಕೆಲವು ವರ್ಷಗಳಿಂದ ವ್ಯಕ್ತಪಡಿಸಲಾಗುತ್ತಿದೆ. ಅದರಿಂದಾಗಿ ಭವಿಷ್ಯದಲ್ಲಿ ನಮಗೆ ಇತರ ಮಾರ್ಗಗಳ ಪರ್ಯಾಯವನ್ನು ಪತ್ತೆ ಹಚ್ಚಲೇ ಬೇಕಾಗುತ್ತದೆ. ಅದರ ವಿಚಾರವನ್ನು ಮಾಡಿ ಈ ಖನಿಜಗಳ ಅಧ್ಯಯನ ನಡೆಸಲು ಕೇಂದ್ರ ಸಚಿವ ಸಂಪುಟ ‘ಡೀಪ್‌ ಓಶನ್‌ ಮಿಶನ್’ ಎಂಬ ೪ ಸಾವಿರದ ೭೭ ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.

ಸದ್ಯ ಕೋಬಾಲ್ಟ್‌, ಲಿಥಿಯಂ, ತಾಮ್ರ, ನಿಕಲ್‌ ಇತ್ಯಾದಿ ಧಾತುಗಳನ್ನು ಬ್ಯಾಟರಿ ಚಾಲಿತ ವಾಹನಗಳಿಗೆ ಉಪಯೋಗಿಸ ಲಾಗುತ್ತದೆ. ‘ಸ್ಟೀಲ್’ ಉದ್ಯಮದಲ್ಲೂ ಈ ಎಲ್ಲಾ ಧಾತುಗಳು ಪ್ರಮುಖ ಪಾತ್ರವಹಿಸುತ್ತವೆ. ‘ಇಲೆಕ್ಟ್ರಿಕ್’ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರೆ, ೨೦೨೩ ನೇ ಅಂತ್ಯದ ವೇಳೆಗೆ ಭಾರತಕ್ಕೆ ಸದ್ಯದ ಉಪಲಬ್ಧತೆಯ ೫ ಪಟ್ಟು ಅಧಿಕ ಲಿಥಿಯಂ ಮತ್ತು ೪ ಪಟ್ಟು ಅಧಿಕ ಕೋಬಾಲ್ಟ್ ಆವಶ್ಯಕತೆಯಿದೆ. ಆದುದರಿಂದ ಈ ಸಮುದ್ರಯಾನದ ಮಾಧ್ಯಮದಿಂದ ಭಾರತಕ್ಕೆ ಬೇಕಾಗಿರುವ ಈ ಧಾತುಗಳನ್ನು ಪತ್ತೆ ಹಚ್ಚಲು ಸಹಾಯವಾಗಲಿದೆ. ಭವಿಷ್ಯದಲ್ಲಿ ಹೆಚ್ಚುತ್ತಿರುವ ‘ಗ್ಯಾಸ್’ ಬೇಡಿಕೆಯನ್ನು ನೋಡಿದರೆ, ಆ ದೃಷ್ಟಿಯಿಂದಲೂ ಈ ಸಂಶೋಧನೆ ಮಹತ್ವ ಪೂರ್ಣ ವಾಗಲಿದೆ. ಪೆಸಿಫಿಕ್‌ ಮಹಾಸಾಗರದಲ್ಲಿ ಜರ್ಮನಿ ಪ್ರಾಯೋಗಿಕ ವಾಗಿ ಗಣಿಗಾರಿಕೆಯನ್ನು ಪ್ರಾರಂಭಿಸಿದೆ. ಅದಕ್ಕೆ ಅಲ್ಲಿ ನಿಕಲ್, ಕೋಬಾಲ್ಟ್ ಮತ್ತು ತಾಮ್ರ ಸಿಗಲು ಪ್ರಾರಂಭವಾಗಿದೆ. ರಕ್ಷಣಾ ಉತ್ಪಾದನೆಗಳಿಗಾಗಿ ನಿಕಲ್‌ ಅತ್ಯಗತ್ಯವಾಗಿದೆ. ಭಾರತವು ದಿನದಿಂದ ದಿನಕ್ಕೆ ರಕ್ಷಣಾಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದ್ದು, ಭಾರತಕ್ಕೆ ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಿಕಲ್‌ನ ಆವಶ್ಯಕತೆ ಬೀಳಲಿದೆ. ಆ ದೃಷ್ಟಿಯಿಂದಲೂ ಈ ಸಂಶೋಧನೆ ಮಹತ್ವದ್ದಾಗಿದೆ.

ಸಮುದ್ರದ ಆಳದಲ್ಲಿ ಭೂಮಿಗಿಂತ ಹಲವು ಪಟ್ಟು ಅಧಿಕ ಖನಿಜಗಳು ಅಡಗಿದೆ. ಗಣಿಗಾರಿಕೆಯಿಂದ ಆ ಖನಿಜಗಳನ್ನು ಹೊರತೆಗೆಯುವ ತಂತ್ರಜ್ಞಾನವನ್ನು ಈಗ ಅಭಿವೃದ್ಧಿಪಡಿಸ ಲಾಗುತ್ತಿದೆ. ಈ ಕಾರಣದಿಂದ ‘ಸಮುದ್ರಯಾನ’ ಅಭಿಯಾನ ದಿಂದ ಭಾರತಕ್ಕೆ ರಫ್ತು ದೃಷ್ಟಿಯಿಂದಲೂ ಖಂಡಿತವಾಗಿಯೂ ಪ್ರಯೋಜನವಾಗಲಿದೆ. ಭಾರತವು ‘ಇಂಟರನ್ಯಾಶನಲ್‌ ಸೀಬೆಡ್‌ ಅಥಾರಿಟಿ’ ವತಿಯಿಂದ ಹಿಂದೂ ಮಹಾಸಾಗರದಲ್ಲಿ ೧೦ ಸಾವಿರ ಚದರ ಕಿಲೋಮೀಟರ್‌ ಪ್ರದೇಶದಲ್ಲಿ ಗಣಿಗಾರಿಕೆ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಗಣಿಗಾರಿಕೆಯನ್ನು ನಡೆಸುವಾಗ ಕಬ್ಬಿಣ, ತಾಮ್ರ, ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಪ್ಯಾಲಿಡಿಯಮ್‌ ಮುಂತಾದ ಅಮೂಲ್ಯ ಧಾತುಗಳನ್ನು ಸಹ ಶೋಧಿಸಲಾಗುವುದು. ಭವಿಷ್ಯದಲ್ಲಿ, ಮೇಲಿನ ಖನಿಜಗಳ ಜೊತೆಗೆ, ಭಾರತವು ಚಿನ್ನ, ಬೆಳ್ಳಿಯಂತಹ ಧಾತುಗಳ ಸಂಶೋಧನೆಯತ್ತ ಗಮನ ಹರಿಸುತ್ತಿದೆ.

ಕಾಂಗ್ರೆಸ್‌ ಕಾಲದಲ್ಲಿ ಸಂಶೋಧನೆ ಮತ್ತು ಹೊಸ ನಾವೀನ್ಯ ಪೂರ್ಣ ನಿರ್ಮಾಣಗಳಿಗೆ ಯಾವುದೇ ಬೆಲೆಯಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದ್ದು, ಭಾರತದಲ್ಲಿ ಅಮೂಲ್ಯವಾದ ಬೌದ್ಧಿಕ ವಿಜ್ಞಾನಿಗಳು ಮತ್ತು ಅಭಿಯಂತÀರು ಇದ್ದಾರೆ. ಅವರಿಗೆ ಈಗ ರಾಜಕೀಯ ಮತ್ತು ಆರ್ಥಿಕ ಬೆಂಬಲ ದೊರಕಿರುವುದರಿಂದ ಸಂಶೋಧನೆಯಲ್ಲಿ ಹೊಸ ಹಂತಗಳನ್ನು ದಾಟುವಲ್ಲಿ ಭಾರತ ಯಶಸ್ವಿಯಾಗುತ್ತಿದೆ !