ಭಾರತದ ಮೇಲೆ ಹತ್ಯೆ ಆರೋಪ ಹೊರಿಸಿದ ಕೆನಡಾ; ಭಾರತದ ಉನ್ನತ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಆದೇಶ !

ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ

ಓಟಾವಾ (ಕೆನಡಾ) – ಜೂನ್‌ನಲ್ಲಿ ಕೆನಡಾದ ಸರ್ರೆ ನಗರದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿ ಕೆನಡಾದ ಭಾರತೀಯ ಉಚ್ಚಾಯುಕ್ತರನ್ನು 5 ದಿನಗಳೊಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ. ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೆನಡಾದ ಸಂಸತ್ತಿನಲ್ಲಿ ನೇರವಾಗಿ ಆರೋಪಿಸಿದರು. ಅವರು, ”ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಭಾರತ ಸರಕಾರದ ಉನ್ನತಾಧಿಕಾರಿಗಳಿಗೂ ಏನಾದರೂ ಸಂಬಂಧವಿದೆಯೇ ? ಈ ನಿಟ್ಟಿನಲ್ಲಿ ಕೆನಡಾದ ತನಿಖಾ ಸಂಸ್ಥೆಗಳು ಕಳೆದ ಕೆಲವು ವಾರಗಳಿಂದ ಕೂಲಂಕುಷವಾಗಿ ತನಿಖೆ ನಡೆಸುತ್ತಿವೆ.” ಎಂದು ಅವರು ಹೇಳಿದರು. ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ನಿಜ್ಜರ್ ಮೇಲೆ ಇಬ್ಬರು ಯುವಕರು ಗುಂಡು ಹಾರಿಸಿದ್ದರು. ಇದರಲ್ಲಿ ಅವನು ಸಾವನ್ನಪ್ಪಿದನು.

ಪ್ರಧಾನಿ ಜಸ್ಟಿನ್ ಟ್ರುಡೊ ಇವರು ಈ ವಿಷಯದ ಬಗ್ಗೆ ಸಂಕ್ಷಿಪ್ತ ಹೇಳಿಕೆ ನೀಡಿದ ನಂತರ, ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜಾಲಿ ಈ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಅವರು, ಯಾವುದೇ ರೀತಿಯ ವಿದೇಶಿ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದರು. ಈ ವಿಷಯದಲ್ಲಿ ನಾವು ದೃಢವಾಗಿದ್ದೇವೆ. ಈ ಬಗ್ಗೆ ನಾವು ಭಾರತದ ವಿದೇಶಾಂಗ ಸಚಿವರಿಗೆ ತಿಳಿಸಿದ್ದೇವೆ. ಈ ವಿಷಯದ ಮೂಲವನ್ನು ಪಡೆಯಲು ನಾವು ಭಾರತದಿಂದ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಪರಿಣಾಮವಾಗಿ ನಾವು ಕೆನಡಾದಿಂದ ಹಿರಿಯ ಭಾರತೀಯ ಅಧಿಕಾರಿಯನ್ನು ವಜಾಗೊಳಿಸಿದ್ದೇವೆ ಎಂದು ಹೇಳಿದರು.

ಕೆನಡಾಗಾ ಪ್ರತ್ಯುತ್ತರ ನೀಡುತ್ತಾ, ಉಚ್ಚಾಯುಕ್ತರ ಉಚ್ಛಾಟನೆ !

ಕೆನಡಾದಲ್ಲಿರುವ ಭಾರತೀಯ ಉಚ್ಚಾಯುಕ್ತರ ಉಚ್ಚಾಟನೆಯ ನಂತರ, ಭಾರತದಲ್ಲಿರುವ ಕೆನಡಾದ ಉಚ್ಚಾಯುಕ್ತರನ್ನು ಹೊರಹಾಕುವ ಮೂಲಕ ಭಾರತವು ಪ್ರತ್ಯುತ್ತರ ನೀಡಿದೆ. ಭಾರತದ ವಿದೇಶಾಂಗ ಸಚಿವಾಲಯು ನೀಡಿದ ಮನವಿಯಲ್ಲಿ, ಭಾರತದಲ್ಲಿರುವ ಕೆನಡಾದ ಉಚ್ಚಾಯುಕ್ತ ಕ್ಯಾಮರೂನ್ ಮೆಕೆ ಅವರನ್ನು ಕರೆಸಲಾಗಿತ್ತು. ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕುವ ಭಾರತ ಸರಕಾರದ ನಿರ್ಧಾರದ ಬಗ್ಗೆ ಅವರಿಗೆ ತಿಳಿಸಲಾಯಿತು. ಮುಂದಿನ 5 ದಿನಗಳಲ್ಲಿ ಭಾರತ ತೊರೆಯುವಂತೆ ಸಂಬಂಧಪಟ್ಟ ಉನ್ನತಾಧಿಕಾರಿಗೆ ಆದೇಶ ನೀಡಲಾಗಿದೆ. ನಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ ನಾವು ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದೆ.

ಭಾರತದ ವಿದೇಶಾಂಗ ಸಚಿವಾಲಯವು, ಕೆನಡಾ ಮಾಡಿರುವ ಆರೋಪಗಳನ್ನು ಭಾರತ ಖಂಡಿಸುತ್ತದೆ. ಕೆನಡಾದ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಅವರ ಸಂಸತ್ತಿನಲ್ಲಿನ ಹೇಳಿಕೆಯನ್ನು ನಾವು ನೋಡಿದ್ದೇವೆ. ಇದೇ ರೀತಿಯ ಆರೋಪಗಳನ್ನು ಕೆನಡಾದ ಪ್ರಧಾನಿಯವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೊರಿಸಿದ್ದರು; ಆದರೆ ಆಗಲೂ ನಾವು ಅದನ್ನು ಸಂಪೂರ್ಣವಾಗಿ ನಿರಾಕರಿಸಿದ್ದೇವೆ. ನಮ್ಮದು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದು ಕಾನೂನನ್ನು ಗೌರವಿಸಲು ಬದ್ಧರಾಗಿದ್ದೇವೆ. ಕೆನಡಾದಲ್ಲಿ ಆಶ್ರಯ ಪಡೆದಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಕಟ್ಟರವಾದಿಗಳ ಅಂಶದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದೆ. ಈ ಖಲಿಸ್ತಾನಿಗಳು ಭಾರತದ ಸಾರ್ವಭೌಮತ್ವ ಮತ್ತು ಸಾಮಾಜಿಕ ಒಗ್ಗಟ್ಟಿಗೆ ನೇರವಾಗಿ ಸವಾಲು ಹಾಕುತ್ತಿದ್ದಾರೆ. ಈ ವಿಷಯದಲ್ಲಿ ಕೆನಡಾ ಸರಕಾರವು ಕ್ರಮ ಕೈಗೊಳ್ಳದಿರುವುದು ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸೂತ್ರವಾಗಿದೆ. ಕೆನಡಾದ ರಾಜಕೀಯ ವ್ಯಕ್ತಿಗಳು ಖಲಿಸ್ತಾನಿ ವ್ಯಕ್ತಿಗಳ ಬಗ್ಗೆ ಬಹಿರಂಗವಾಗಿ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದು ಕಳವಳಕಾರಿ ವಿಷಯ. ಕಾನೂನುಬಾಹಿರ ಚಟುವಟಿಕೆಗಳು, ಕೊಲೆಗಳು, ಮಾನವ ಕಳ್ಳಸಾಗಣೆಯಂತಹ ಅಪರಾಧ ಚಟುವಟಿಕೆಗಳು ಕೆನಡಾದಲ್ಲಿ ಹೊಸದೇನಲ್ಲ. ಕೆನಡಾದಲ್ಲಿ ನಡೆಯುತ್ತಿರುವ ಇಂತಹ ಎಲ್ಲಾ ಭಾರತ ವಿರೋಧಿ ಚಟುವಟಿಕೆಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವಂತೆ ಕೆನಡಾ ಸರಕಾರವನ್ನು ನಾವು ವಿನಂತಿಸುತ್ತೇವೆ ಎಂದು ಹೇಳಿದರು.

ಭಾರತ ಮತ್ತು ಕೆನಡಾ ನಡುವಿನ ವಿವಾದಕ್ಕೆ ಅಮೆರಿಕಾದ ಪ್ರತಿಕ್ರಿಯೆ

ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ವಿವಾದದ ಬಗ್ಗೆ ಅಮೆರಿಕಾ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿನ್ ವಾಟ್ಸನ್ ಇವರು, ಪ್ರಧಾನ ಮಂತ್ರಿ ಟ್ರುಡೊ ಮಾಡಿರುವ ಆರೋಪಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ ಎಂದು ಹೇಳಿದ್ದಾರೆ. ನಾವು ನಮ್ಮ ಕೆನಡಾದ ಸಹೋದ್ಯೋಗಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೇವೆ. ಕೆನಡಾ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸುವುದು ಅತ್ಯಗತ್ಯ ಎಂದು ಹೇಳಿದೆ.

‘ಜಿ-20’ ಶೃಂಗ ಸಭೆಯಲ್ಲಿ ಟ್ರುಡೊಗೆ ಪ್ರಾಮುಖ್ಯತೆ ನೀಡದಿದ್ದಕ್ಕೆ ಕೋಪ !

ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತಕ್ಕೆ ಆಗಮಿಸಿದ್ದರು. ಆಗ ಇತರ ದೇಶಗಳ ಮುಖ್ಯಸ್ಥರಿಗೆ ಹೋಲಿಸಿದರೆ ಅವರಿಗೆ ಕಡಿಮೆ ಪ್ರಾಮುಖ್ಯತೆಯನ್ನು ನೀಡಿದ್ದಕ್ಕಾಗಿ ಕೆನಡಾದ ಮಾಧ್ಯಮಗಳಿಂದ ಅವರನ್ನು ಟೀಕಿಸಲಾಗಿತ್ತು. ‘ಟ್ರುಡೊ ಈ ಶೃಂಗ ಸಭೆಯಲ್ಲಿ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ’ ಎಂಬ ಆರೋಪವೂ ಕೇಳಿಬಂದಿತ್ತು. ಟ್ರುಡೊ ಅವರೊಂದಿಗಿನ ಭೇಟಿಯಲ್ಲಿ ಭಾರತದ ಪ್ರಧಾನಿ ಮೋದಿ ಅವರು ಕೆನಡಾದಲ್ಲಿ ಖಲಿಸ್ತಾನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅದಕ್ಕೆ ಟ್ರುಡೊರವರು, ನಾವು ನಿರಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಇದರ ನಂತರ, ಕೆನಡಾಕ್ಕೆ ಹಿಂದಿರುಗುವ ಮೊದಲು ಅವರ ವಿಮಾನವು ಕೆಟ್ಟುಹೋದ ಕಾರಣ ಟ್ರೂಡೊ ಭಾರತದಲ್ಲಿ 2 ದಿನಗಳ ಕಾಲ ಇರಬೇಕಾಯಿತು. ಇದಕ್ಕಾಗಿ ಟ್ರುಡೊ ಅವರ ದೇಶದಲ್ಲಿ ಟೀಕೆಗೂ ಗುರಿಯಾಗಿದ್ದರು. ಈ ಎಲ್ಲಾ ಘಟನೆಗಳ ಪರಿಣಾಮವಾಗಿ ಟ್ರೂಡೊ ಭಾರತದ ವಿರುದ್ಧ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸಂಪಾದಕೀಯ ನಿಲುವು

ಕಳೆದ ಕೆಲವು ದಶಕಗಳಿಂದ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಸಿಖ್ ಬೆಂಬಲಿಗರಿದ್ದು ಪಂಜಾಬ್‌ನಲ್ಲಿ ಖಲಿಸ್ತಾನಿಗಳಿಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಕಾರ್ಯಾಚರಣೆ ನಡೆಸಿ ಖಾಲಿಸ್ತಾನಿ ಭಯೋತ್ಪಾದಕರು ಕೆನಡಾಗೆ ಪರಾರಿಯಾಗುತ್ತಾರೆ, ಇದು ಹೊಸದೇನಲ್ಲ. ಇಂತಹ ಸಮಯದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರನ್ನು ಬೆಂಬಲಿಸುವ ಕೆನಡಾದ ಈ ಕ್ರಮ ಎಂದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಆಗುತ್ತದೆ !