ಇಂದಿನಿಂದ ನೂತನ ಸಂಸತ್ ಭವನದಲ್ಲಿ ಕಾರ್ಯಕಲಾಪ ಪ್ರಾರಂಭ !

  • ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಪ್ರಾರಂಭ

  • ಹಳೆಯ ಸಂಸತ ಭವನಕ್ಕೆ ಬೀಳ್ಕೊಡುಗೆ

  • ಹಳೆಯ ಸಂಸತ್ ಭವನವನ್ನು ನಿರ್ಮಿಸುವಾಗ ಭಾರತೀಯರ ಬೆವರು ಮತ್ತು ಹಣ ಇತ್ತು ! – ಪ್ರಧಾನಿ ನರೇಂದ್ರ ಮೋದಿ

ನವ ದೆಹಲಿ – ದೇಶಕ್ಕೆ ಮತ್ತೊಮ್ಮೆ 75 ವರ್ಷಗಳ ಸಂಸತ್ತಿನ ಪ್ರಯಾಣದ ನೆನಪುಗಳನ್ನು ಮಾಡಿ ಕೊಡುವ, ಹಾಗೆಯೇ ಹೊಸ ಸಂಸತ್ತಿನಲ್ಲಿ ಹೋಗುವ ಮುನ್ನ ಇತಿಹಾಸಲ್ಲಿನ ಮಹತ್ವದ ಮತ್ತು ಪ್ರೇರಣೆ ನೀಡುವ ಘಟನೆಗಳನ್ನು ನೆನಪಿಸುತ್ತ ಮುಂದೆ ಹೋಗುವ ಕ್ಷಣವಾಗಿದೆ. ಈ ಐತಿಹಾಸಿಕ ವಾಸ್ತವನ್ನು ನಾವೆಲ್ಲರೂ ಬೀಳ್ಕೊಡುತ್ತಿದ್ದೇವೆ. ಸ್ವಾತಂತ್ಯ್ರದ ನಂತರ ಈ ಕಟ್ಟಡಕ್ಕೆ ‘ಸಂಸತ್ ಭವನ’ ಎಂದು ಮನ್ನಣೆ ಸಿಕ್ಕಿತು. ಈ ಕಟ್ಟಡವನ್ನು ಕಟ್ಟುವ ನಿರ್ಧಾರವು ಪರಕೀಯ ರಾಜ್ಯಕರ್ತರದ್ದಾಗಿತ್ತು; ಆದರೆ ‘ ಈ ವಾಸ್ತುವಿನ ನಿರ್ಮಾಣದಲ್ಲಿ ನಮ್ಮ ದೇಶವಾಸಿಯರ ಬೆವರು ಮತ್ತು ಶ್ರಮ ಇದೆ’, ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಹಣವೂ ನಮ್ಮ ದೇಶದ ಜನರದಾಗಿತ್ತು, ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಪ್ಟೆಂಬರ 18 ರಿಂದ ಪ್ರಾರಂಭವಾಗಿದ್ದ ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನದಂದು ಭಾವನಾತ್ಮಕವಾಗಿ ಹೇಳಿದರು. ಸಂಸತ್ತಿನ ಹಳೆಯ ಭವನದಲ್ಲಿನ ಮೊದಲ ದಿನದ ಕಾರ್ಯಕಲಾಪ ನೆರವೇರಿತು. ಸಪ್ಟೆಂಬರ 18 ರಂದು ಈ ಭವನದಲ್ಲಿನ ಕೊನೇಯ ಕಾರ್ಯಕಲಾಪದ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಮಾತನಾಡುತ್ತಿದ್ದರು. ಹಳೆಯ ಸಂಸತ್ ಭವನವನ್ನು ಆಂಗ್ಲರು ಕಟ್ಟಿದ್ದರು. ಸಪ್ಟೆಂಬರ 19 ರಂದು ಶ್ರೀ ಗಣೇಶ ಚತುರ್ಥಿಯ ದಿನದಂದು ಸಂಸತ್ತಿನ ನೂತನ ಭವನದಲ್ಲಿ ಕಾರ್ಯಕಲಾಪ ಪ್ರಾರಂಭವಾಗಲಿದೆ. ಸಪ್ಟೆಂಬರ 22 ರ ವರೆಗೆ ನಡೆಯಲಿರುವ ಈ ವಿಶೇಷ ಅಧಿವೇಶನದಲ್ಲಿ 4 ಮಸೂದೆಗಳನ್ನು ಮಂಡಿಸಲಾಗುವದು.

ಪ್ರಧಾನಿ ಮೋದಿಯವರ ಭಾಷಣದಲ್ಲಿನ ಮುಖ್ಯ ಅಂಶಗಳು

1. ಈ ಸದನವನ್ನು ಬೀಳ್ಕೊಡುವುದು, ಇದು ತುಂಬಾ ಭಾವನಾತ್ಮಕ ಕ್ಷಣವಾಗಿದೆ. ಕುಟುಂಬವು ಹಳೆ ಮನೆಯನ್ನು ಬಿಟ್ಟು ಹೊಸ ಮನೆಗೆ ಹೋದರೂ, ಕೆಲವು ಕ್ಷಣಗಳು ಹಲವಾರು ನೆನಪುಗಳನ್ನು ಜೀವಂತ ಮಾಡುತ್ತವೆ. ನಾವು ಈ ಮನೆಯನ್ನು ಬಿಡುವಾಗ ನಮ್ಮ ಮನಸ್ಸು ಮತ್ತು ಮೆದುಳು ಆ ಭಾವನೆಗಳಿಂದ ಮತ್ತು ಹಲವಾರು ನೆನಪುಗಳಿಂದ ತುಂಬುತ್ತದೆ. ಉತ್ಸವ, ಉತ್ಸಾಹ, ಸಿಹಿ-ಕಹಿ ಕ್ಷಣಗಳು, ಜಗಳ ಇತ್ಯಾದಿ ನೆನಪುಗಳಿಂದ ತುಂಬಿರುತ್ತವೆ.

2. ಇಲ್ಲಿಯ ಸಂಸತ್ ಭವನದ ಪ್ರವೇಶದ್ವಾರದಲ್ಲಿ, ‘ಜನರಿಗಾಗಿ ಬಾಗಿಲುಗಳನ್ನು ತೆರೆಯಿರಿ ಮತ್ತು ಅವರಿಗೆ ಅವರ ಹಕ್ಕುಗಳು ಹೇಗೆ ಸಿಗಬಹುದು ?, ಎಂಬುದನ್ನು ನೋಡಿರಿ.’ ಎಂದು ಬರೆಯಲಾಗಿದೆ. ನಾವೆಲ್ಲರೂ ಮತ್ತು ನಮಗಿಂತಲೂ ಮುಂಚೆ ಬಂದಿರುವವರೆಲ್ಲರೂ ಇದರ ಸಾಕ್ಷಿಯಾಗಿದ್ದಾರೆ. ಸಮಾಜದಲ್ಲಿನ ಎಲ್ಲಾ ಮಟ್ಟದಲ್ಲಿನ ಜನರು ಇಲ್ಲಿ ಕೊಡುಗೆ ನೀಡಿದ್ದಾರೆ.

3. ಸಂಸತ್ತಿನ ಪ್ರಾರಂಭದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಕಡಿಮೆ ಇತ್ತು, ಕ್ರಮೇಣ ಅವರ ಸಂಖ್ಯೆ ಹೆಚ್ಚುತ್ತ ಹೋಯಿತು. ಸ್ಥಾಪನೆಯಿಂದ ಇಲ್ಲಿಯವರೆಗೆ 7 ಸಾವಿರದ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಎರಡೂ ಸಭಾಗೃಹಗಳಲ್ಲಿ ಬಂದಿದ್ದಾರೆ. ಈಗ ಸುಮಾರು 600 ಮಹಿಳಾ ಸಂಸದರು ಬಂದರು. ಇಂದ್ರಜೀತ ಗುಪ್ತಾಜಿಯವರು 43 ವರ್ಷಗಳವರೆಗೆ ಈ ಸದನದ ಸಾಕ್ಷಿಯಾಗಿದ್ದರು. ಶಫಿಕುರ ರಹಮಾನ ಇವರು ತಮ್ಮ 93 ನೇ ವಯಸ್ಸಿನಲ್ಲಿ ಸಭಾಗೃಹಕ್ಕೆ ಬರುತ್ತಿದ್ದಾರೆ.

4. ಪ್ರಜಾಪ್ರಭುತ್ವದ ಈ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿಗಳು ನಡೆದವು. ಈ ದಾಳಿ ಕಟ್ಟಡದ ಮೇಲೆ ಆಗಿರದೇ ನಮ್ಮ ಆತ್ಮದ ಮೇಲಾಗಿದ್ದವು. ಆ ಘಟನೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸೈನಿಕರು ಉಗ್ರರೊಂದಿಗೆ ಹೋರಾಡುವಾಗ ನಮ್ಮ ರಕ್ಷಣೆ ಮಾಡಿದರೊ, ಅವರನ್ನೂ ಎಂದಿಗೂ ಮರೆಯಲಾಗುವುದಿಲ್ಲ.

5. ಇಂದು ಯಾವಾಗ ನಾವು ಈ ಸಭಾಗೃಹದಿಂದ ಹೊರ ಬರುತ್ತಿದ್ದೇವೆ, ಆಗ ನನಗೆ ಯಾರು ಈ ಸಂಸತ್ತಿನಲ್ಲಿಂದ ಸುದ್ಧಿಗಳನ್ನು ನೀಡುತ್ತಿದ್ದರೋ ಆ ಪತ್ರಕರ್ತ ಸ್ನೇಹಿತರನ್ನೂ ನೆನಪಿಸಿಕೊಳ್ಳಬೇಕೆನಿಸುತ್ತದೆ. ಇದರಲ್ಲಿ ಕೆಲವರು ತಮ್ಮ ಜೀವನವನ್ನು ಸಂಸತ್ತಿಗೆ ಮುಡುಪಾಗಿಟ್ಟವರೂ ಇದ್ದಾರೆ. ಹಿಂದೆ ಈಗಿನಂತೆ ತಂತ್ರಜ್ಞಾನ ಇರಲಿಲ್ಲ, ಆಗ ಕೇವಲ ಆ ಜನರೇ ಇದ್ದರು. ಅವರು ಒಳಗಿನ ಸುದ್ಧಿ ಮತ್ತು ಒಳಗಿನದಕ್ಕೂ ಒಳಗಿನ ಸುದ್ಧಿಗಳನ್ನೂ ಪಡೆಯುತ್ತಿರುವಷ್ಟು ಶಕ್ತಿ ಅವರಲ್ಲಿ ಇತ್ತು.