೨೦೩೦ ರವರೆಗೆ ಆರ್ಕ್ಟಿಕ್ ಮಹಾಸಾಗರದ ಹಿಮನದಿಗಳು ನಾಶವಾಗುವ ಸಾಧ್ಯತೆ !

  • ಜಾಗತಿಕ ತಾಪಮಾನ ಏರಿಕೆಯ ಪರಿಣಾಮ !

  • ಪ್ರತಿ ೧೦ ವರ್ಷಗಳಿಗೊಮ್ಮೆ ೧೨.೬ ರಷ್ಟು ಮಂಜುಗಡ್ಡೆ ಕರಗುತ್ತಿದೆ !

ಬ್ಯಾಸ್ಟನ್ (ಅಮೇರಿಕಾ) – ಸಂಪೂರ್ಣ ಜಗತ್ತು ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮವನ್ನು ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಿದ್ದು ಆರ್ಕ್ಟಿಕ್ ಮಹಾಸಾಗರದ ಮೇಲೆಯೂ ಅದರ ವಿಪರೀತ ಪರಿಣಾಮ ನೋಡಲು ಸಿಗುತ್ತಿದೆ. ಈ ಮಹಾಸಾಗರದ ಹಿಮನದಿಗಳು ಕರಗಿದುದರಿಂದಲೇ ಅನೇಕ ದೇಶಗಳಲ್ಲಿ ನೆರೆಸದೃಶ ಪರಿಸ್ಥಿತಿ ಉಂಟಾಗುತ್ತಿದೆ. ಒಂದು ವರದಿಗನುಸಾರ, ಪ್ರತಿ ೧೦ ವರ್ಷಗಳಲ್ಲಿ ಆರ್ಕ್ಟಿಕ್ ಮಹಾಸಾಗರದ ಶೇ. ೧೨.೬ ರಷ್ಟು ಮಂಜುಗಡ್ಡೆ ಕರಗುತ್ತಿದೆ. ಶಾಸ್ತ್ರಜ್ಞರು ಆರ್ಕ್ಟಿಕ್ ಮಹಾಸಾಗರದ ಹಿಮನದಿಗಳು ೨೦೩೦ ರವರೆಗೆ ಅದೃಶ್ಯವಾಗುವ ಭಯವನ್ನೂ ವ್ಯಕ್ತಪಡಿಸಿದ್ದರೆ. ಇದರ ಅರ್ಥ ಬೇಸಿಗೆಯಲ್ಲಿ ಇಲ್ಲಿ ಮಂಜುಗಡ್ಡೆ ಕಾಣಿಸುವುದಿಲ್ಲ. ಆರ್ಕ್ಟಿಕ್‌ನ ತಾಪಮಾನ ಜಗತ್ತಿನ ಇತರ ಭಾಗಗಳಿಗಿಂತ ನಾಲ್ಕು ಪಟ್ಟುಗಳಲ್ಲಿ ಹೆಚ್ಚುತ್ತಿದೆ.

(ಸೌಜನ್ಯ – CNN)

೧. ಕಳೆದ ೪೦ ವರ್ಷಗಳಲ್ಲಿ ಬೇಸಿಗೆಯ ನಂತರ ಇಲ್ಲಿ ಉಳಿದಿರುವ ಬಹುಪದರದ ಮಂಜುಗಡ್ಡೆಯು ೭೦ ಲಕ್ಷ ಚದುರ ಕಿಲೋಮೀಟರ್‌ನಿಂದ ಕೇವಲ ೪೦ ಲಕ್ಷ ಚದುರ ಕಿಲೋಮೀಟರ್‌ನಷ್ಟೇ ಉಳಿದುಕೊಂಡಿದೆ.

೨. ಜಾಗತಿಕ ತಾಪಮಾನ ಹೆಚ್ಚಳದ ಸರಾಸರಿ ಪ್ರಮಾಣ ೧.೫ ಡಿಗ್ರಿ ಇರುವಾಗ ಆರ್ಕ್ಟಿಕ್‌ನಲ್ಲಿ ಈ ತಾಪಮಾನವನ್ನು ೪ ಡಿಗ್ರಿಗಳವರೆಗೆ ಅಳೆಯಲಾಗಿದೆ.

೩. ಉತ್ತರ ಅಟಲಾಂಟಿಕ್ ಮಹಾಸಾಗರದ ನೀರಿನ ಅಲೆಗಳ ಆರ್ಕ್ಟಿಕ್ ಮಹಾಸಾಗರದ ತಾಪಮಾನದ ಮೇಲೆ ಪರಿಣಾಮವಾಗುತ್ತಿದ್ದು ಇದಕ್ಕೆ ‘ಅಟಲಾಂಟಿಕೀಕರಣ’ (ಆರ್ಕ್ಟಿಕ್ ಮಹಾಸಾಗರದ ಅಟಲಾಂಟಿಫಿಕೇಶನ್) ಎಂಬ ಹೆಸರನ್ನು ನೀಡಲಾಗಿದೆ. ಇದರಿಂದಾಗಿಯೇ ೨೦೦೭ ರಿಂದ ಆರ್ಕ್ಟಿಕ್ ಮಹಾಸಾಗರದ ಮಂಜುಗಡ್ಡೆಯು ಬಹಳ ಪ್ರಮಾಣದಲ್ಲಿ ಕರಗಿದೆ. ಇದು ಭಾರತದ ಮಾನ್ಸೂನ್ ಮೇಲೂ ಪರಿಣಾಮ ಬೀರಿದೆ.

೪. ವಿಜ್ಞಾನಿಗಳ ಪ್ರಕಾರ, ಹಿಮನದಿಗಳು ಎಷ್ಟು ವೇಗವಾಗಿ ಬದಲಾಗುತ್ತಿವೆ, ಎಂಬ ಕಡೆಗೆ ಗಮನವಿಡುವುದು ಆವಶ್ಯಕವಾಗಿದೆ ಎಂದು ಹೇಳುತ್ತಾರೆ. ಏಕೆಂದರೆ, ಲಕ್ಷಾಂತರ ಜನರು ಕುಡಿಯುವ ನೀರು ಮತ್ತು ಕೃಷಿಗಾಗಿ ಅವುಗಳ ಮೇಲೆ ಅವಲಂಬಿಸಿದ್ದಾರೆ.

೫. ಸಂಶೋಧನೆಗನುಸಾರ ಆರ್ಕ್ಟಿಕ್‌ನಲ್ಲಿ ಸ್ವಾಲಬಾರ್ಡ್ ಮತ್ತು ರಷ್ಯಾದ ಬ್ಯರೆಂಟ್ಸ್ ಮತ್ತು ಕಾರಾ ಸಮುದ್ರದ ಹತ್ತಿರದ ಹಿಮನದಿಗಳು ನೈಸರ್ಗಿಕ ಪ್ರಕ್ರಿಯೆಯಿಂದಾಗಿ ಕರಗುತ್ತಿವೆ.

(ಸೌಜನ್ಯ – FRANCE 24 English)

ಸಂಪಾದಕೀಯ ನಿಲುವು

ಇದು ಧರ್ಮವಿಲ್ಲದ ವೈಜ್ಞಾನಿಕ ಪ್ರಗತಿಯ ಫಲ ಎಂಬುದನ್ನು ಗಮನಿಸಿ !