‘ಲಿವ್‌ ಇನ್‌ ರಿಲೇಶನಶಿಪ್‌’ನ ಘಾತಕ ವಿಚಾರಗಳನ್ನು ಒಪ್ಪದಿರುವುದು ರಾಷ್ಟ್ರೀಯ ಕರ್ತವ್ಯವೇ ಆಗಿದೆ !

ಶ್ರೀ. ದುರ್ಗೇಶ ಪರುಳಕರ

ವಿವಾಹವನ್ನು ಮಾಡಿಕೊಳ್ಳದೇ ಸ್ತ್ರೀ-ಪುರುಷರು ಒಟ್ಟಿಗಿರಬಹುದು ಎಂಬಂತಹ ಒಂದು ಸಂಕಲ್ಪನೆ ಸಮಾಜದಲ್ಲಿ ರೂಢಿ ಆಗುತ್ತಿದೆ. ಇದಕ್ಕೆ ಆಂಗ್ಲದಲ್ಲಿ ‘ಲಿವ್‌ ಇನ್‌ ರಿಲೇಶನಶಿಪ್’ ಎಂದು ಹೇಳುತ್ತಾರೆ. ಈ ಸಂಕಲ್ಪನೆಯು ನಮ್ಮ ಹೊಲದಲ್ಲಿನ ಹುಲ್ಲಿನಂತಿದೆ. ಹುಲ್ಲು ಯಾವ ರೀತಿ ಬೆಳೆಗೆ ಹಾನಿ ಮಾಡುತ್ತದೆಯೋ, ಅದೇ ರೀತಿ ಈ ಸಂಕಲ್ಪನೆ ನಮ್ಮ ವಿವಾಹ ವ್ಯವಸ್ಥೆಯನ್ನು ನಾಶಮಾಡಲು ಕಾರಣವಾಗುತ್ತಿದೆ. ನಮ್ಮ ವಿವಾಹ ವ್ಯವಸ್ಥೆ ಅಂದರೆ ಗೃಹಸ್ಥಾಶ್ರಮ.
ಹಿಂದೂ ಸಮಾಜಜೀವನದಲ್ಲಿ ೪ ಆಶ್ರಮಗಳಿವೆ. ಬ್ರಹ್ಮಚರ್ಯಾಶ್ರಮ, ಗೃಹಸ್ಥಾಶ್ರಮ, ವಾನಪ್ರಸ್ಥಾಶ್ರಮ ಮತ್ತು ಸಂನ್ಯಾಸಾಶ್ರಮ. ಈ ೪ ಆಶ್ರಮಗಳಲ್ಲಿ ಕೇವಲ ಗೃಹಸ್ಥಾಶ್ರಮದಲ್ಲಿಯೇ ಹಣವನ್ನು ಸಂಪಾದಿಸಬಹುದು, ಅಂದರೆ ಬ್ರಹ್ಮಚರ್ಯಾಶ್ರಮ, ವಾನಪ್ರಸ್ಥಾಶ್ರಮ ಮತ್ತು ಸಂನ್ಯಾಸಾಶ್ರಮ ಈ ೩ ಆಶ್ರಮಗಳು ಉದರನಿರ್ವಾಹಕ್ಕಾಗಿ ಗೃಹಸ್ಥಾಶ್ರಮವನ್ನು ಅವಲಂಬಿಸಿರುತ್ತವೆ. ಬ್ರಹ್ಮಚರ್ಯಾಶ್ರಮದಲ್ಲಿ ಅಂದರೆ, ಇಂದಿನ ಪರಿಭಾಷೆಯಲ್ಲಿ ಹೇಳಬೇಕೆಂದರೆ ವಿದ್ಯಾರ್ಥಿವರ್ಗವು ಇದರಲ್ಲಿ ಬರುತ್ತದೆ. ಈ ವಿದ್ಯಾರ್ಥಿ ವರ್ಗಕ್ಕೆ ಹಣ ಗಳಿಸಲು ಆಗುವುದಿಲ್ಲ. ಅದಕ್ಕಾಗಿ ಅದಕ್ಕೆ ಕುಟುಂಬವನ್ನು ಅವಲಂಬಿಸಿರಬೇಕಾಗುತ್ತದೆ. ಇಂದು ಅನೇಕ ಸಾಮಾಜಿಕ ವ್ಯವಸ್ಥೆಗಳು ಸಾಮಾಜಿಕ ಕೆಲಸಗಳನ್ನು ಮಾಡುತ್ತಿವೆ. ಅವುಗಳಿಗೆ ಸಾಮಾಜಿಕ ಕೆಲಸಗಳನ್ನು ಮಾಡಲು ಬೇಕಾಗುವ ಧನದ ಸಹಾಯವನ್ನು ಗೃಹಸ್ಥಾಶ್ರಮಿ ಜನರು, ಅಂದರೆ ವಿವಾಹ ವ್ಯವಸ್ಥೆಯ ಜನರು ಮಾಡುತ್ತಾರೆ. ಈಗಲೂ ನಮ್ಮ ಸಮಾಜದಲ್ಲಿ ಅನೇಕ ಸಂನ್ಯಾಸಿಗಳಿದ್ದಾರೆ. ಅವರ ಜೀವನೋಪಾಯಕ್ಕೆ ಗೃಹಸ್ಥಾಶ್ರಮಿ ಜನರೇ ಸಹಾಯ ಮಾಡುತ್ತಾರೆ. ಈ ನಾಲ್ಕೂ ಆಶ್ರಮಗಳು ಸೇರಿ ರಾಷ್ಟ್ರ ನಿರ್ಮಾಣವಾಗುತ್ತದೆ; ಆದುದರಿಂದಲೇ ಗೃಹಸ್ಥಾಶ್ರಮವು ರಾಷ್ಟ್ರೀಯ ಜೀವನದ ಆಧಾರವಾಗಿದೆ ಎಂದು ಹೇಳಲಾಗಿದೆ.

೧. ವಿವಾಹ ವ್ಯವಸ್ಥೆಯ ಬಗ್ಗೆ ಮಾಡಲಾಗುವ ಕೋಲಾಹಲ !

ವಿವಾಹದ ಅರ್ಥ ಎರಡು ಕುಟುಂಬಗಳ ಮಿಲನ ಎಂದಾಗಿದೆ. ಕೇವಲ ಇಬ್ಬರು ವ್ಯಕ್ತಿಗಳ ಮಿಲನವೆಂದರೆ ವಿವಾಹವಲ್ಲ. ಈ ವಿಷಯವನ್ನು ನಾವು ಗಮನದಲ್ಲಿಡಬೇಕು. ಈ ಆಧುನಿಕ ಕಾಲದಲ್ಲಿ ನಾವು ವೇದಗಳ ಅಧ್ಯಯನ ಮಾಡಿಲ್ಲ. ಆದುದರಿಂದ ವೇದಗಳಲ್ಲಿ ಇದರ ಬಗ್ಗೆ ಏನು ಹೇಳಲಾಗಿದೆ ? ಎಂಬುದು ನಮಗೆ ಗೊತ್ತಿಲ್ಲ. ನಮ್ಮ ಆಚಾರ ಮತ್ತು ವಿಚಾರಗಳ ಮೇಲೆ ಪಾಶ್ಚಾತ್ಯ ಜಗತ್ತಿನ ಪ್ರಭಾವವಿದೆ. ಆದುದರಿಂದ ವಿವಾಹವು ಸಂಸ್ಕಾರವಾಗಿಯಲ್ಲ, ಸಮಾರಂಭವಾಗಿ ರೂಪಾಂತರವಾಗಿದೆ.
‘ಲಿವ್‌ ಇನ್‌ ರಿಲೇಶನ್‌ಶಿಪ್‌’ನ ಸಮರ್ಥನೆಯನ್ನು ಮಾಡುವ ಜನರ ವಿಚಾರದಲ್ಲಿ ವಿವಾಹ ವ್ಯವಸ್ಥೆಯ ಆವಶ್ಯಕತೆ ಯಿಲ್ಲ. ಅವರ ಪ್ರಕಾರÀ ವಿವಾಹ ವ್ಯವಸ್ಥೆ ಪರಿಪೂರ್ಣ ಮತ್ತು ಆದರ್ಶವಾಗಿಲ್ಲ. ‘ವಿವಾಹ ವ್ಯವಸ್ಥೆ ಸ್ತ್ರೀಯರನ್ನು ಶೋಷಿಸುತ್ತದೆ. ಆದುದರಿಂದ ಅದು ಸರಿಯಿಲ್ಲ’ ಎಂದು ಕೆಲವರಿಗೆ ಅನಿಸುತ್ತದೆ. ‘ಲಿವ್‌ ಇನ್‌ ರಿಲೇಶನ್‌ಶಿಪ್‌’ನಿಂದ ಭಾರತೀಯ ಸಂಸ್ಕೃತಿಯ ಅಧಃಪತನವಾಗುವುದಿಲ್ಲ ಎಂದು ಅದರ ಬೆಂಬಲಿಗÀರಿಂದ ಪ್ರಚಾರವಾಗುತ್ತದೆ. ಹಿಂದೂ ಸಂಸ್ಕೃತಿಯನ್ನು ಹಾಳು ಮಾಡಲು ಪ್ರಯತ್ನಿಸುವ ಕೆಲವು ಜನರಿದ್ದಾರೆ. ಅವರು ಹಿಂದೂ ಧರ್ಮ ಮತ್ತು ಸಂಸ್ಕೃತಿಯ ವಚನಗಳಿಗೆ ಏನೂ ಅರ್ಥವಿಲ್ಲ ಎನ್ನುತ್ತಾರೆ.

೨. ಸ್ತ್ರೀಯು ವಿವಾಹ ವ್ಯವಸ್ಥೆಯ ಬೆನ್ನೆಲುಬಾಗಿದ್ದಾಳೆ

ಭಾರತೀಯ ಸಂಸ್ಕೃತಿಯು ಸ್ತ್ರೀಯರನ್ನು ಉಪಭೋಗದ ವಸ್ತುವೆಂದು ಪರಿಗಣಿಸಿಲ್ಲ. ಸ್ತ್ರೀಯು ಕುಟುಂಬ ವ್ಯವಸ್ಥೆಯ ಅಥವಾ ವಿವಾಹ ವ್ಯವಸ್ಥೆಯ ಬೆನ್ನೆಲುಬಾಗಿದ್ದಾಳೆ. ಬಹಳ ಕಷ್ಟ ವನ್ನು ಸಹಿಸಿ ಅವಳು ತನ್ನ ಕುಟುಂಬವನ್ನು ವಾತ್ಸಲ್ಯದಿಂದ ಮತ್ತು ಮಮತೆಯಿಂದ ಜೋಪಾನ ಮಾಡುತ್ತಾಳೆ. ಅವಳ ಅಂತಃಕರಣದಲ್ಲಿ ಪ್ರೇಮ, ಆತ್ಮೀಯತೆ ಮತ್ತು ವಾತ್ಸಲ್ಯದ ಅಮೃತಮಯ ಧಾರೆಯಿದೆ. ಅವಳ ಮನಸ್ಸಿನಲ್ಲಿ ತನ್ನ ಕುಟುಂಬದ ಬಗ್ಗೆ ಉತ್ಕಟ ಭಾವನೆ ಇದೆ. ಕುಟುಂಬದಲ್ಲಿ ಯಾರಿಗಾದರೂ ಯಾವುದೇ ರೀತಿಯ ನೋವು, ದುಃಖವಾದರೆ ಅವಳ ಕಣ್ಣುಗಳಲ್ಲಿ ಸಹಜವಾಗಿಯೇ ನೀರು ಬರುತ್ತವೆ ಎಂಬುದು ಈ ಶಬ್ದದ ಅರ್ಥವಾಗಿದೆ. ಅವಳು ಸದ್ಭಾವನೆ ಮತ್ತು ಆತ್ಮೀಯತೆಯ ಪ್ರತೀಕವಾಗಿದ್ದಾಳೆ.

೩. ‘ವಿವಾಹದ ನಂತರ ಮಗಳು ತನ್ನ ಗಂಡನ ಮನೆಯಲ್ಲಿ ಆನಂದದಿಂದ ಇರಬೇಕು, ಸುಖದಿಂದ ಸಂಸಾರ ಮಾಡಬೇಕು’ ಎಂಬ ಆಶೀರ್ವಾದವನ್ನು ವಿವಾಹ ಸಂಸ್ಕ್ರತಿಯು ನವವಧುವಿಗೆ ನೀಡಿದೆ.

೪. ‘ಯಾರ ಕೈಯಲ್ಲಿ ತೊಟ್ಟಿಲಿನ ಹಗ್ಗ ಇರುತ್ತದೆಯೋ, ಅವಳೇ ಜಗತ್ತನ್ನು ಉದ್ಧಾರ ಮಾಡುವಳು ಎಂಬ ನಾಣ್ಣುಡಿಯಿದೆ, ಈ ನಿಸರ್ಗ ನಿಯಮದಂತೆ ಸ್ತ್ರೀಯೇ ಮಗುವಿಗೆ ಜನ್ಮ ಕೊಡುತ್ತಾಳೆ. ಯಾವುದೇ ಸಂಸ್ಕೃತಿ ಅಥವಾ ಪುರುಷ ಜಾತಿಯು ಅವಳ ಮೇಲೆ ಈ ಜವಾಬ್ದಾರಿಯನ್ನು ಹೊರಿಸಿಲ್ಲ.

೫. ಭಾರತೀಯ ಸಂಸ್ಕೃತಿಯು ಸ್ತ್ರೀಯರಿಗೆ ನೀಡಿದ ಮಹತ್ವ

ಸಭ್ಯ ಸಮಾಜದಲ್ಲಿ ನಮ್ರತೆಯನ್ನು ಅಲಂಕಾರ ಎಂದು ತಿಳಿಯಲಾಗಿದೆ. ಜನ್ಮಕ್ಕೆ ಬರುವ ಮಗುವಿನ ಮೇಲೆ ಮೊದಲ ಸಂಸ್ಕಾರ ತಾಯಿಯಿಂದಲೇ ಆಗುತ್ತದೆ. ನಮ್ಮ ಸಂಸ್ಕೃತಿಯು ದೇವರು ಮತ್ತು ತಂದೆಗೆ ನಮಸ್ಕರಿಸುವ ಮೊದಲು ತಾಯಿಗೆ ನಮಸ್ಕರಿಸಲು ಹೇಳಿದೆ. ‘ಮಾತೃದೇವೋ ಭವ | ಪಿತೃದೇವೋ ಭವ | ಆಚಾರ್ಯದೇವೋ ಭವ | (ತೈತ್ತಿರೀಯೋಪನಿಷದ್, ಶಿಕ್ಷಾ, ಅನುವಾಕ ೧೧, ವಾಕ್ಯ ೨) ಕುಲದೇವತಾಭ್ಯೋ ನಮಃ |
ಅಂದರೆ ತಾಯಿ, ತಂದೆ ಮತ್ತು ಆಚಾರ್ಯರನ್ನು ದೇವರೆಂದು ತಿಳಿಯುವವರು. ಕುಲದೇವತೆಗೆ ನಮಸ್ಕಾರವಿರಲಿ, ಎಂದು ಹೇಳಲಾಗಿದ್ದು ತಾಯಿಯೇ ಮಗುವಿನ ಮೊದಲ ಗುರು ವಾಗಿದ್ದಾಳೆ. ಆದುದರಿಂದ ಸ್ತ್ರೀಯು ಜಗತ್ತನ್ನು ಉದ್ಧರಿಸುವವ ಳಾಗಿದ್ದಾಳೆ ಎಂದು ಈ ವಚನದಲ್ಲಿ ಹೇಳಲಾಗಿದೆ.

೬. ಸ್ತ್ರೀಯು ಒಂದು ಕ್ಷಣದ ಹೆಂಡತಿ ಮತ್ತು ಅನಂತ ಕಾಲದ ತಾಯಿ !

ಮಾನವೀ ಪ್ರಜೆಯನ್ನು ಹೆಚ್ಚಿಸಲು ಸ್ತ್ರೀ-ಪುರುಷರು ಒಟ್ಟಿಗೆ ಬರಬೇಕಾಗುತ್ತದೆ. ‘ಪ್ರಜೋತ್ಪತ್ತಿಗಾಗಿಯೇ ಅವರು ಒಟ್ಟಿಗೆ ಬರಬೇಕು’ ಇಂತಹ ಶಿಕ್ಷಣವನ್ನು ಹಿಂದೂ ಸಂಸ್ಕೃತಿ ನೀಡುತ್ತದೆ. ಸ್ತ್ರೀಯರ ಕಡೆಗೆ ವಾಸನಾಮಯ ದೃಷ್ಟಿಯಿಂದ ನೋಡಬಾರದು. ಅವಳನ್ನು ಹೀಗೆ ನೋಡುವುದು ಪಾಪ ವಾಗಿದೆ ಎಂಬ ಶಿಕ್ಷಣವನ್ನು ಹಿಂದೂ ಸಂಸ್ಕೃತಿ ನೀಡುತ್ತದೆ. ಈ ದೃಷ್ಟಿಯಿಂದಲೇ ಸ್ತ್ರೀ ಕ್ಷಣಕ್ಕಾಗಿ ಹೆಂಡತಿ ಮತ್ತು ಅನಂತ ಕಾಲಕ್ಕಾಗಿ ತಾಯಿಯಾಗಿರುತ್ತಾಳೆ ಎಂದು ಈ ವಚನದಲ್ಲಿ ಹೇಳಲಾಗಿದೆ. ಇದರ ವಿಕೃತ ಅರ್ಥವನ್ನು ತೆಗೆದು ಈ ವಚನದಲ್ಲಿ ಹುರುಳಿಲ್ಲವೆಂದು ಸಿದ್ಧ ಮಾಡುವವರು ತಮ್ಮನ್ನು ವಿದ್ವಾಂಸರೆಂದು ಹೇಳಿಕೊಳ್ಳುತ್ತಾರೆ. ಈ ಜನರು ಉದ್ದೇಶಪೂರ್ವಕ ವಾಗಿಯೇ ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಈ ರೀತಿಯ ಕೆಟ್ಟ ವಿಚಾರಗಳನ್ನು ಮಂಡಿಸುತ್ತಾರೆ.

೭. ಸಂಸ್ಕಾರಗಳಿಗೆ ಮಹತ್ವವನ್ನು ಕೊಡದಿದ್ದರೆ ಮನುಷ್ಯ ಜೀವನ ಅಧಃಪತನವಾಗುತ್ತದೆ

‘ಲಿವ್‌ ಇನ್‌ ರಿಲೇಶನ್‌ಶಿಪ್‌’ನಲಿದ್ದ ಆಫ್ತಾಬ್‌ ಮತ್ತು ಶ್ರದ್ಧಾ ಇವರಲ್ಲಿ ಜಗಳಗಳಾಗಿ ಅದು ವಿಕೋಪಕ್ಕೆ ಹೋಯಿತು ಮತ್ತು ಅದರಲ್ಲಿ ಶ್ರದ್ಧಾಳ ಕೊಲೆಯಾಯಿತು. ಮನುಷ್ಯನು ತನ್ನ ವಿಕೃತಿಗಳನ್ನು ದೂರ ಮಾಡದಿದ್ದರೆ, ಅವನು ಕ್ರೂರನಾಗುತ್ತಾನೆ. ಮನುಷ್ಯನಲ್ಲಿನ ಪಶುತ್ವವನ್ನು ನಾಶ ಮಾಡಲು ಸಂಸ್ಕಾರಗಳು ಆವಶ್ಯಕವಾಗಿವೆ. ಸಂಸ್ಕಾರಗಳಿಂದಾಗಿಯೇ ಮನುಷ್ಯನು ಸಜ್ಜನಿಕೆ ಯಿಂದ ಮತ್ತು ಸಭ್ಯತೆಯಿಂದ ನಡೆದುಕೊಳ್ಳುತ್ತಾನೆ. ಸಂಸ್ಕಾರ ಗಳಿಗೆ ಮಹತ್ವ ನೀಡದೇ ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಮನುಷ್ಯ ಜೀವನದ ಅಧಃಪತನವೇ ಆಗುತ್ತದೆ.

೮. ಋಗ್ವೇದ ಮತ್ತು ಅಥರ್ವವೇದ ಇವುಗಳಲ್ಲಿ ಹೇಳಲಾದ ಗೃಹಸ್ಥಾಶ್ರಮದ ಮಹತ್ವ ಮತ್ತು ಅವುಗಳಲ್ಲಿ ಮಾಡಿದ ಮಾರ್ಗದರ್ಶನ

ಹಿಂದೂ ಸಂಸ್ಕೃತಿಯು ಸಂಸ್ಕಾರಗಳಿಗೆ ಮಹತ್ವ ನೀಡುವು ದಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಒಟ್ಟು ೪೮ ಪ್ರಕಾರದ ಸಂಸ್ಕಾರಗಳನ್ನು ಹೇಳಲಾಗಿದೆ. ಅವುಗಳಲ್ಲಿ ಮಹತ್ವದ ೧೬ ಸಂಸ್ಕಾರಗಳನ್ನು ಪಾಲಿಸಲು ಆಗ್ರಹಿಸಲಾಗಿದೆ. ಈ ೧೬ ಸಂಸ್ಕಾರ ಗಳಲ್ಲಿಯೇ ವಿವಾಹ ಸಂಸ್ಕಾರ ಬರುತ್ತದೆ. ಋಗ್ವೇದ ಮತ್ತು ಅಥರ್ವವೇದಗಳಲ್ಲಿ ಗೃಹಸ್ಥಾಶ್ರಮದ ಮಹತ್ವವನ್ನು ಹೇಳಲಾಗಿದೆ. ನಮ್ಮ ಸಂಸ್ಕೃತಿ ಮತ್ತು ವೇದಗಳು ಸಹ ಸ್ತ್ರೀಯರನ್ನು ಅಥವಾ ಪುರುಷರನ್ನು ಹೀಗೆ ಯಾರನ್ನೂ ಕಡಿಮೆ ಎಂದು ಪರಿಗಣಿಸಿಲ್ಲ. ವಿವಾಹ ಮಾಡಿಕೊಂಡು ಪತಿಯ ಮನೆಗೆ ಹೋಗುವ ವಧುವಿಗೆ ಋಗ್ವೇದ ಮತ್ತು ಅಥರ್ವವೇದಗಳು ಏನು ಹೇಳುತ್ತವೆ ಎಂದರೆ – ‘ಹೇ ಸ್ತ್ರೀ ನೀನು ಮಾವ, ಅತ್ತೆ, ನಾದಿನಿ, ಮೈದುನ ಇತ್ಯಾದಿ ಎಲ್ಲರೊಂದಿಗೆ ಮಾವನ ಮನೆಯಲ್ಲಿ ರಾಣಿಯಂತಿರು. ರಾಣಿಯು ಅರಮನೆಯಲ್ಲಿ ಆನಂದದಿಂದ ಇರುವಂತೆ ನೀನು ರಾಣಿಯಂತೆ ಅಧಿಕಾರ ನಡೆಸುತ್ತಾ ಅಲ್ಲಿ ಸುಖದಿಂದಿರು. ನೀನು ದಾಸಿ ಭಾವನೆಯಿಂದ ಹೀನಾವಸ್ಥೆಯಲ್ಲಿ ಇರಬೇಡ ಎಂದು ನವವಧುವಿಗೆ ವೇದಗಳು ಹೇಳುತ್ತವೆ. ಇದರ ಅರ್ಥ ಮಾವನ ಮನೆಯವರು ನವವಧುವಿನೊಂದಿಗೆ ಸಮಾನತೆಯಿಂದ ವರ್ತಿಸÀಬೇಕು ಎಂದಾಗುತ್ತದೆ. – ಶ್ರೀ. ದುರ್ಗೇಶ ಪರೂಳೆಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ, ಮಹಾರಾಷ್ಟ್ರ. ಬೇರೆ ಮನೆಯಿಂದ ನಮ್ಮ ಮನೆಗೆ ಬಂದ ನವವಿವಾಹಿತ ಸ್ತ್ರೀ ಯನ್ನು ಗೌರವಿಸಬೇಕು ಎಂದು ವೇದಗಳು ಗೃಹಸ್ಥಾಶ್ರಮಿಗಳಿಗೆ ಮಾರ್ಗದರ್ಶನ ಮಾಡಿವೆ.

೯. ಗೃಹಸ್ಥಾಶ್ರಮವು ‘ಸಂಸ್ಕಾರ ಕೇಂದ್ರ’ವಾಗಿದೆ; ಅದರಿಂದಲೇ ಕುಟುಂಬ, ಸಮಾಜ ಮತ್ತು ರಾಷ್ಟ್ರದ ವಿಕಾಸವಾಗುತ್ತದೆ

ಸ್ತ್ರೀ-ಪುರುಷರಿಗೆ ಮಾರ್ಗದರ್ಶನ ಮಾಡುವಾಗ ವೇದ ಗಳು, ಸ್ತ್ರೀ-ಪುರುಷರ ವಿಚಾರಗಳು ಶುದ್ಧವಾಗಿರಬೇಕು. ಭಾಷೆ ಉತ್ತಮವಾಗಿರಬೇಕು. ಪ್ರತಿಯೊಬ್ಬರ ಆಚರಣೆ ಪವಿತ್ರವಾಗಿರ ಬೇಕು. ಮನುಷ್ಯನು ಪವಿತ್ರ ಮಾತುಗಳಿಂದ, ಸದಾಚಾರ ಇವುಗಳಿಂದಲೇ ಪೂಜನೀಯ ಮತ್ತು ವಂದನೀಯನಾಗು ತ್ತಾನೆ. ಸಂಕ್ಷಿಪ್ತದಲ್ಲಿ ಹೇಳಬೇಕೆಂದರೆ ಪ್ರತಿಯೊಬ್ಬರ ವಿಚಾರ, ಆಚಾರ ಮತ್ತು ಉಚ್ಚಾರ ಮೂರೂ ಶುದ್ಧ, ಪವಿತ್ರ ಮತ್ತು ಉನ್ನತವಾಗಿರಬೇಕು ಎಂಬ ಮಾರ್ಗದರ್ಶನವನ್ನು ಮಾಡ ಲಾಗಿದೆ. ಗೃಹಸ್ಥಾಶ್ರಮದಲ್ಲಿ ಈ ರೀತಿಯ ಸಂಸ್ಕಾರಗಳನ್ನು ಮಾಡ ಲಾಗುತ್ತದೆ; ಆದುದರಿಂದಲೇ ಗೃಹಸ್ಥಾಶ್ರಮವು ಸಂಸ್ಕಾರಗಳ ಕೇಂದ್ರವಾಗಿದೆ. ಈ ರೀತಿಯ ಸಂಸ್ಕಾರಗಳಿಂದ ತಯಾರಾದ ನಾಗರಿಕನು ಸಮಾಜದಲ್ಲಿ ಉತ್ತಮ ನಡುವಳಿಕೆ, ಶುದ್ಧ ವಿಚಾರ ಗಳನ್ನಿಟ್ಟುಕೊಳ್ಳುತ್ತಾನೆ. ಇದರಿಂದ ಕುಟುಂಬ, ಸಮಾಜ ಮತ್ತು ರಾಷ್ಟ್ರ ಇವುಗಳ ವಿಕಾಸವೇ ಆಗುತ್ತದೆ.

೧೦. ವೇದಗಳು ಗೃಹಸ್ಥಾಶ್ರಮದ ಬಗ್ಗೆ ಮಾಡಿದ ವಿಶ್ಲೇಷಣೆ

ಬ್ರಹ್ಮಚರ್ಯೇಣ ಕನ್ಯಾ ಯುವಾನಂ ವಿನ್ದತೇ ಪತಿಮ್‌ |

(ಸಂಸ್ಕೃತ) – ಅಥರ್ವವೇದ, ಕಾಂಡ ೧೧, ಸೂಕ್ತ ೫, ಖಂಡ ೧೮

ಅರ್ಥ : ಹುಡುಗಿಯು ಬ್ರಹ್ಮಚಾರಿಯಾಗಿದ್ದು (ಉತ್ತಮ ಶಿಕ್ಷಣ ಪಡೆದು) ತಾರುಣ್ಯಕ್ಕೆ ಬಂದಾಗ ಪತಿಯನ್ನು ಪ್ರಾಪ್ತ ಮಾಡಿಕೊಳ್ಳಬೇಕು. (ವಿವಾಹ ಮಾಡಿಕೊಳ್ಳಬೇಕು.)

ಮೊದಲು ಹುಡುಗರಂತೆ ಹುಡುಗಿಯರು ಸಹ ಗುರುಕುಲ ದಲ್ಲಿ ಇರುತ್ತಿದ್ದರು. ಗುರುಕುಲದಿಂದ ಬಂದ ಹುಡುಗ ಮತ್ತು ಹುಡುಗಿಯರಿಬ್ಬರೂ ವಿದ್ವಾನರಾಗಿರುತ್ತಿದ್ದರು. ಇಂತಹ ಇಬ್ಬರು ವಿದ್ವಾನ ಹುಡುಗ ಹುಡುಗಿಯರ ವಿವಾಹವನ್ನು ಮಾಡಲಾಗುತ್ತಿತ್ತು. ಆದುದರಿಂದ ವಿವಾಹದಲ್ಲಿ ಹೇಳಲಾಗುವ ಮಂತ್ರಗಳ ಅರ್ಥ ಅವರಿಗೆ ಸಹಜವಾಗಿ ತಿಳಿಯುತ್ತಿತ್ತು. ಧನಹೀನ ಮನುಷ್ಯನಿಗೆ ತನ್ನ ಸಂಸಾರವನ್ನು ನಡೆಸಲು ಬರುವುದಿಲ್ಲ. ಆದುದರಿಂದ ಅವನಿಗೆ ಗೃಹಸ್ಥಾಶ್ರಮವನ್ನು ಉತ್ತಮ ರೀತಿಯಲ್ಲಿ ಪಾಲಿಸÀಲು ಸಾಧ್ಯವಾಗುವುದಿಲ್ಲ. ವೇದಗಳು ಪ್ರತಿಯೊಬ್ಬರಿಗೆ ಸ್ವತಂತ್ರ ವಿಚಾರ ಮಾಡಲು ಪೂರ್ಣ ಅನುಮತಿ ನೀಡಿವೆ; ಆದರೆ ಸ್ವತಂತ್ರ ವಿಚಾರಗಳಿಗೆ ಬಲಿಯಾಗಿ ಪರಿವಾರದಲ್ಲಿ ಅಸಂತೋಷವನ್ನು ನಿರ್ಮಿಸುವುದು ಜಾಣತನದ ಲಕ್ಷಣವಲ್ಲ.

೧೧. ರಾಷ್ಟ್ರದ ಏಳಿಗೆಯಾಗಲು ಸ್ತ್ರೀಯರ ಕೊಡುಗೆಯು ಪುರುಷರಷ್ಟೇ ಇರುತ್ತದೆ

ಸುವಾನಾ ಪುತ್ರಾನ್ಮಹಿಷೀ ಭವತಿ ಗತ್ವಾ ಪತಿಂ ಸುಭಗಾ ವಿ ರಾಜತು | (ಸಂಸ್ಕೃತ)
– ಅಥರ್ವವೇದ, ಕಾಣ್ಡ ೨, ಸೂಕ್ತ ೩೬, ಖಂಡ ೩

ಅರ್ಥ : ಸೌಭಾಗ್ಯವತಿ ಸ್ತ್ರೀಯು ಪತಿಯನ್ನು ಪ್ರಾಪ್ತಮಾಡಿ ಕೊಂಡು ಅವನಿಗೆ ಒಪ್ಪುವ ಹಾಗೆ ಇದ್ದು ಪುತ್ರರಿಗೆ ಜನ್ಮ ನೀಡಿ ರಾಣಿಯಂತೆ ಇರಬೇಕು.

ಮಾನವೀ ಪ್ರಜೆಗಳನ್ನು ಹೆಚ್ಚಿಸುವ ಜವಾಬ್ದಾರಿಯನ್ನು ನಿಸರ್ಗವು ಸ್ತ್ರೀಯರಿಗೆ ಒಪ್ಪಿಸಿದೆ; ಆದುದರಿಂದ ಸ್ತ್ರೀಯರು ಮಕ್ಕಳ ಉತ್ಪತ್ತಿ ಮಾಡುತ್ತಾರೆ. ಇದರಿಂದ ದೇಶದ ಪ್ರಜೆಗಳು ಹೆಚ್ಚಾಗುತ್ತಾರೆ ಅಂದರೆ ರಾಷ್ಟ್ರವು ಬೆಳೆಯುತ್ತದೆ. ಪ್ರಜಾ ಅಭಿವೃದ್ಧಿಯ ಮಹಾನ ಕಾರ್ಯವನ್ನು ಸ್ತ್ರೀಯರು ಮಾಡುತ್ತಾರೆ ಎಂದು ವೇದಗಳು ಸ್ತ್ರೀಯರನ್ನು ಮಹಾರಾಣಿಯಂತೆ ಗೌರವಿಸ ಬೇಕು ಎಂದು ಹೇಳಿವೆ. ಕೇವಲ ಪುರುಷರ ಕೊಡುಗೆಯಿಂದ ರಾಷ್ಟ್ರದ ಏಳಿಗೆಯಾಗುವುದಿಲ್ಲ, ರಾಷ್ಟ್ರದ ಏಳಿಗೆಯಾಗಲು ಪುರುಷರಷ್ಟೇ ಸ್ತ್ರೀಯರ ಕೊಡುಗೆ ಇರುವುದು ಅತ್ಯಂತ ಆವಶ್ಯಕ ವಾಗಿದೆ. ಆದುದರಿಂದ ಸ್ತ್ರೀಯರು ರಾಣಿಯಂತೆ ನಡೆದುಕೊಳ್ಳ ಬೇಕು, ಎಂದು ವೇದಗಳು ಹೇಳುತ್ತವೆ.

೧೨. ರಾಷ್ಟ್ರದ ಏಳಿಗೆಯಲ್ಲಿ ಸಂಸ್ಕಾರಗಳ ಮಹತ್ವ

ಸಂಪೂರ್ಣ ಕುಟುಂಬವು ಪರಸ್ಪರರಿಗೆ ಸಹಕರಿಸÀಬೇಕು. ಪರಸ್ಪರÀರಿಗೆ ಅನುಕೂಲವಾಗುವಂತೆ ಕುಟುಂಬದ ಪ್ರತಿಯೊಬ್ಬ ಸದಸ್ಯನು ವರ್ತಿಸÀಬೇಕೆಂಬ ಅಲಿಖಿತ ನಿಯಮ ಗೃಹಸ್ಥಾಶ್ರಮ ದಲ್ಲಿದೆ. ಅಥರ್ವವೇದದಲ್ಲಿ ಗೃಹಸ್ಥಾಶ್ರಮವು ಅಮೃತ ಮತ್ತು ಆನಂದಪ್ರಾಪ್ತಿಯನ್ನು ಮಾಡಿಕೊಳ್ಳಲು ಇದೆ ಎನ್ನಲಾಗಿದೆ. ಅಮೃತ ಇದರ ಅರ್ಥ ದೀರ್ಘಾಯುಷ್ಯ (ದೀರ್ಘಜೀವನ) ಮತ್ತು ಆನಂದ ಇದರ ಅರ್ಥ ಮನಸ್ಸಿಗೆ ಶಾಂತಿಪೂರ್ಣ ಸುಖ ಪ್ರಾಪ್ತವಾಗಬೇಕು. ಇಂತಹ ವರ್ತನೆ ಪರಿವಾರದ ಪ್ರತಿಯೊಬ್ಬ ಸದಸ್ಯನದ್ದಾಗಿರಬೇಕು. ಕುಟುಂಬದಲ್ಲಿ ಪ್ರತಿಯೊಬ್ಬ ಪರಸ್ಪರರ ಮೇಲೆ ಗೌರವಯುತÀ ಪ್ರೇಮ ಇರಬೇಕು. ಗೌರವ ಯುತ ಪ್ರೇಮದಿಂದಲೇ ಮನಸ್ಸು ಆನಂದದಲ್ಲಿ ಮತ್ತು ಪ್ರಸನ್ನವಾಗಿರುತ್ತದೆ. ಇದರಿಂದಾಗಿ ಯಾವುದೇ ಒತ್ತಡ ಇರುವುದಿಲ್ಲ. ಜೀವನದಲ್ಲಿ ಉತ್ಸಾಹ ಉಳಿದುಕೊಳ್ಳುತ್ತದೆ. ಮಾನಸಿಕ ನಿರುತ್ಸಾಹವಾಗುವುದಿಲ್ಲ. ಒಂಟಿತನದ ಭಾವನೆ ಉಳಿಯುವುದಿಲ್ಲ. ಮನಸ್ಸು, ಬುದ್ಧಿ, ಚಿತ್ತ ಸುದೃಢ ಮತ್ತು ನಿರೋಗಿಯಾಗಿರುತ್ತವೆ. ಇದೆಲ್ಲ ಗೌರವಯುತ ಪ್ರೇಮದಿಂದ ಸಂಭವಿಸುತ್ತದೆ; ಆದುದರಿಂದ ಮನೆಯಲ್ಲಿನ ಯಾವುದೇ ವ್ಯಕ್ತಿ ಯಾರೊಂದಿಗೂ ಕಪಟದಿಂದ ನಡೆದುಕೊಳ್ಳಬಾರದು. ಪರಸ್ಪರರಿಗೆ ಪ್ರೇಮವನ್ನು ನೀಡಬೇಕು. ಪ್ರತಿಯೊಬ್ಬರ ಮನಸ್ಸಿನಲ್ಲಿ ಸ್ನೇಹಭಾವ ಇರಬೇಕು. ಇದೇ ಸ್ನೇಹಭಾವ ಸಮಾಜವನ್ನು ಒಗ್ಗೂಡಿಸುತ್ತದೆ. ಇಂತಹ ಸಂಘಟಿತ ಸಮಾಜವು ರಾಷ್ಟ್ರದ ಉತ್ಕರ್ಷಕ್ಕೆ ಸಮರ್ಥವಾಗಿರುತ್ತದೆ. ಕುಟುಂಬವ್ಯವಸ್ಥೆಯಲ್ಲಿ ಮಾಡುವ ಸಂಸ್ಕಾರಗಳು ರಾಷ್ಟ್ರವನ್ನು ಬಲಪಡಿಸುತ್ತದೆ.

೧೩. ವೇದಗಳ ಕಲಿಸುವಿಕೆಯ ಕಡೆಗೆ ದುರ್ಲಕ್ಷಿಸಿ ‘ಲಿವ್‌ ಇನ್‌ ರಿಲೇಶನ್‌ಶಿಪ್‌’ಅನ್ನು ಸ್ವೀಕರಿಸಿದರೆ ಕುಟುಂಬವ್ಯವಸ್ಥೆಯು ನಾಶವಾಗುವ ಸಾಧ್ಯತೆ ಇರುತ್ತದೆ

ಸ್ತ್ರೀಯರ ಮೇಲೆ ಅತ್ಯಾಚಾರಗಳು ನಡೆಯುತ್ತಿದ್ದರೆ, ಅದು ರಾಷ್ಟ್ರಘಾತÀಕವಾಗಿದೆ. ಯಾವ ರಾಷ್ಟ್ರದಲ್ಲಿ ಸ್ತ್ರೀಯರ ಮೇಲೆ ದೌರ್ಜನ್ಯ, ಬಲಾತ್ಕಾರಗಳಾಗುತ್ತವೆಯೋ, ಆ ರಾಷ್ಟ್ರದ ಲಯವಾಗುತ್ತದೆ; ಆದುದರಿಂದಲೇ ರಾಷ್ಟ್ರ ನಾಶವಾಗಬಾರದೆಂದು ರಾಷ್ಟ್ರವೇ ಸ್ತ್ರೀಯರ ಶೀಲದ ರಕ್ಷಣೆ ಮತ್ತು ಸಂವರ್ಧನೆ ಮಾಡಬೇಕೆಂದು ಅಥರ್ವವೇದದಲ್ಲಿ ಮಾರ್ಗದರ್ಶನ ಮಾಡಲಾಗಿದೆ.
ಹಿಂದೂ ರಾಷ್ಟ್ರಕ್ಕೆ ಹಾನಿಯನ್ನು ಮಾಡಬೇಕೆಂದೇ ಕುಟುಂಬ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕಲಾಗುತ್ತಿದೆ. ಅದಕ್ಕಾಗಿಯೇ ಲಿವ್‌ ಇನ್‌ ರಿಲೇಶನ್‌ಶಿಪ್‌ ಈ ಸಂಕಲ್ಪನೆಯನ್ನು ನಮ್ಮ ಭೂಮಿಯಲ್ಲಿ ಬೇರೂರಿಸಲು ಪ್ರಯತ್ನಿಸಲಾಗುತ್ತಿದೆ, ವೇದಗಳ ಬೋಧನೆಯನ್ನು ದುರ್ಲಕ್ಷಿಸಿ ಈ ಸಂಕಲ್ಪನೆಯನ್ನು ಸ್ವೀಕರಿಸಿದರೆ ನಮ್ಮ ಕುಟುಂಬವ್ಯವಸ್ಥೆ ನಾಶವಾಗುವುದು. ಅದರ ಪರಿಣಾಮ ರಾಷ್ಟ್ರ ನಾಶವಾಗುವ ಹಂತಕ್ಕೆ ಬರುವುದು. ಅದಕ್ಕಾಗಿ ವಿವಾಹ ಅಥವಾ ಕುಟುಂಬ ವ್ಯವಸ್ಥೆಯನ್ನು ನಾವು ಕಾಪಾಡಬೇಕು ಮತ್ತು ಇದು ನಮ್ಮ ರಾಷ್ಟ್ರೀಯ ಕರ್ತವ್ಯವಾಗಿದೆ. ಅದಕ್ಕಾಗಿಯೇ ನಾವು ‘ಲಿವ್‌ ಇನ್‌ ರಿಲೇಶನ್‌ಶಿಪ್‌’ನಂತಹ ಘಾತಕ ವಿಚಾರಗಳನ್ನು ಒಪ್ಪಿಕೊಳ್ಳಬಾರದು. (ಆಧಾರ-ಅಥರ್ವವೇದ-ಗೃಹಸ್ಥಾಶ್ರಮ-ಭಾಗ ೩, ಲೇಖಕರು – ಮ.ಮ. ಬ್ರಹ್ಮರ್ಷಿ ಪಂಡಿತ ಶ್ರೀಪಾದ ದಾಮೋದರ ಸಾತವಳೆಕರ) – ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ, ಮಹಾರಾಷ್ಟ್ರ. (೧.೧೨.೨೦೨೨)