ಭಾರತ ಚಂದ್ರನ ಮೇಲೆ ‘ಚಂದ್ರಯಾನ ೩’ನ್ನು ತಲುಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಪುಗಾಲಿಟ್ಟಿರುವುದರ ಸೂಕ್ಷ್ಮ ಪರೀಕ್ಷಣೆ !

೨೩.೮.೨೦೨೩ ರಂದು ಭಾರತದ ‘ಇಸ್ರೋ’ದ ವಿಜ್ಞಾನಿಗಳು ಅಪಾರ ಪರಿಶ್ರಮಪಟ್ಟು ಸಾಯಂಕಾಲ ೬ ಗಂಟೆ ೪ ನಿಮಿಷಕ್ಕೆ ‘ಚಂದ್ರಯಾನ ೩’ಅನ್ನು ಚಂದ್ರನ ಮೇಲೆ ಇಳಿಸಿದರು. ಚಂದ್ರನ ದಕ್ಷಿಣ ಧ್ರುವದ ಮೇಲೆ ಯಾನವನ್ನು ಇಳಿಸಿದ ಭಾರತವು ಜಗತ್ತಿನ ಮೊದಲನೇ ದೇಶವಾಗಿದೆ. ಇದರಿಂದ ಭಾರತೀಯ ವಿಜ್ಞಾನಿಗಳ ಪ್ರತಿಭೆಯ ಬಗ್ಗೆ ಎಷ್ಟು ಹೊಗಳಿದರೂ ಅದು ಕಡಿಮೆಯೇ ಆಗಿದೆ. ‘ಚಂದ್ರಯಾನ ೩’ರ ಸೂಕ್ಷ್ಮ ಪರೀಕ್ಷಣೆಯನ್ನು ಇಲ್ಲಿ ಕೊಡುತ್ತಿದ್ದೇನೆ.

೧. ‘ಚಂದ್ರಯಾನ ೩’ ಈ ಯಾನದ ಅಂತರಿಕ್ಷ ಅಭಿಯಾನವನ್ನು ಯಶಸ್ವಿಗೊಳಿಸುವ ಸಂಪೂರ್ಣ ‘ಇಸ್ರೋ’ ತಂಡದಲ್ಲಿನ ವೈಜ್ಞಾನಿಕರ ಗುಣವೈಶಿಷ್ಟ್ಯಗಳು !

ಸಂಪೂರ್ಣ ‘ಇಸ್ರೋ’ದ ತಂಡದಲ್ಲಿನ ವಿಜ್ಞಾನಿಗಳು ಅತ್ಯಂತ ಸಾತ್ತ್ವಿಕ ಮತ್ತು ಪ್ರತಿಭಾಶಾಲಿಗಳಾಗಿದ್ದಾರೆ. ಅವರು ಭಾರತದ ನಿಜವಾದ ದೇಶಭಕ್ತರಾಗಿದ್ದಾರೆ. ಅವರ ಮೇಲೆ ಖಗೋಳಶಾಸ್ತ್ರದ ಜನಕರಾಗಿದ್ದ ಆರ್ಯಭಟ್ಟರ ವಿಶೇಷ ಕೃಪೆ ಇದ್ದು, ಅವರು ಭಾರತೀಯ ವಿಜ್ಞಾನಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಅದೇ ರೀತಿ ಇಸ್ರೋದ ವಿಜ್ಞಾನಿಗಳು ಧಾರ್ಮಿಕ ಪ್ರವೃತ್ತಿಯುಳ್ಳವರಾಗಿರುವುದರಿಂದ ಅವರ ಮೇಲೆ ನವಗ್ರಹ ದೇವತೆಗಳ ಮತ್ತು ನಕ್ಷತ್ರದೇವತೆಗಳ ಕೃಪೆಯೂ ಇದೆ. ಆದ್ದರಿಂದ ಅವರಿಂದ ವೈಜ್ಞಾನಿಕ ಕ್ಷೇತ್ರದಲ್ಲಿನ ದೊಡ್ಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿವೆ.

ಕು. ಮಧುರಾ ಭೋಸಲೆ

೨. ‘ಇಸ್ರೋ’ದ ಮುಖ್ಯಸ್ಥರಾದ ಸೋಮನಾಥ ಇವರು ಶ್ರೀ ಚೆಂಗಲಮ್ಮಾದೇವಿ ಮತ್ತು ತಿರುಪತಿ ಬಾಲಾಜಿಯ ದರ್ಶನವನ್ನು ಪಡೆದಿದ್ದರಿಂದ ‘ಚಂದ್ರಯಾನ ೩’ರ ವೈಜ್ಞಾನಿಕ ಅಭಿಯಾನಕ್ಕೆ ದೈವೀ ಶಕ್ತಿಗಳ ಸಹಾಯ ದೊರೆತು ಆಧ್ಯಾತ್ಮಿಕ ಶಕ್ತಿ ಲಭಿಸಿರುವುದರಿಂದ ಅದು ಯಶಸ್ವಿಯಾಯಿತು

೧೪ ಜುಲೈ ೨೦೨೩ ರಂದು ‘ಚಂದ್ರಯಾನ ೩’ ಪೃಥ್ವಿಯ ಮೇಲಿನಿಂದ ಪ್ರಕ್ಷೇಪಣೆ ಆಗುವುದಿತ್ತು. ಅದಕ್ಕಿಂತ ಮೊದಲು ಅಂದರೆ ೧೩ ಜುಲೈ ೨೦೨೩ ರಂದು ‘ಇಸ್ರೋ’ದ ಮುಖ್ಯಸ್ಥ ಶ್ರೀ. ಸೋಮನಾಥ ಇವರು ಶ್ರೀ ಚೆಂಗಲಮ್ಮಾ ಪರಮೇಶ್ವರಿದೇವಿಯ ದೇವಸ್ಥಾನಕ್ಕೆ ಹೋಗಿ ಅವಳ ದರ್ಶನ ಪಡೆದು ಅವಳಿಗೆ ‘ಚಂದ್ರಯಾನ ೩’ನೇ ಅಭಿಯಾನ ಯಶಸ್ವಿ ಯಾಗಲು ಪ್ರಾರ್ಥಿಸಿದರು, ಹಾಗೆಯೇ ‘ಇಸ್ರೋ’ದ ವಿಜ್ಞಾನಿಗಳು ‘ತಿರುಪತಿ ಬಾಲಾಜಿ’ ಮತ್ತು ಭಾರತದಲ್ಲಿನ ಇತರ ಸ್ಥಳಗಳ ಲ್ಲಿರುವ ವಿವಿಧ ದೇವಿದೇವತೆಗಳ ದರ್ಶನವನ್ನು ಪಡೆದು ಅವರ ಕೃಪಾಶೀರ್ವಾದ ಪಡೆದರು. ಆದ್ದರಿಂದ ವೈಜ್ಞಾನಿಕ ಕಾರ್ಯಕ್ಕೆ ಆಧ್ಯಾತ್ಮಿಕ ಶಕ್ತಿ ದೊರಕಿ ‘ಚಂದ್ರಯಾನ ೩’ ಯಾನವು ಚಂದ್ರನಲ್ಲಿ ತಲುಪುವ ಅಂತರಿಕ್ಷ ಅಭಿಯಾನವು ಯಶಸ್ವಿಯಾಯಿತು. ಶ್ರೀವಿಷ್ಣುವಿನ ವಾಹನ ‘ಗರುಡ’ ಮತ್ತು ಶ್ರೀ ಸರಸ್ವತಿದೇವಿಯ ವಾಹನ ‘ರಾಜಹಂಸ’ ಇವರಲ್ಲಿ ವಿವಿಧ ಲೋಕಗಳಲ್ಲಿ ಸಂಚರಿಸುವ ದೈವೀ ಸಾಮರ್ಥ್ಯವಿದೆ. ಶ್ರೀ ತಿರುಪತಿ ಬಾಲಾಜಿಯ ಕೃಪಾಶೀರ್ವಾದದಿಂದ ಶ್ರೀವಿಷ್ಣುವಿನ ವಾಹನವಾಗಿರುವ ಗರುಡದೇವನ ಶಕ್ತಿಯು ‘ಚಂದ್ರಯಾನ ೩’ಕ್ಕೆ ಲಭಿಸಿತು. ಆದ್ದರಿಂದ ‘ಚಂದ್ರಯಾನ ೩’ಕ್ಕೆ ಪೃಥ್ವಿಯ ಮೇಲಿನಿಂದ ಪ್ರಯಾಣ ಮಾಡುವಾಗ ಗರುಡನ ಶಕ್ತಿ ಮತ್ತು ಚಂದ್ರನ ಸಮೀಪ ಹೋದ ನಂತರ ರಾಜಹಂಸದ ಶಕ್ತಿ ಪ್ರಾಪ್ತವಾಯಿತು. ಇದರಿಂದ ಅದಕ್ಕೆ ಯಶಸ್ವಿ ರೀತಿಯಲ್ಲಿ ಉಡಾವಣೆ ಮಾಡಲು ಮತ್ತು ಇಳಿಯಲು ಸಾಧ್ಯವಾಯಿತು.

೩. ದೇವಶಿಲ್ಪಿ ವಿಶ್ವಕರ್ಮನ ಕೃಪಾಶೀರ್ವಾದ ಲಭಿಸಿದ್ದರಿಂದ ‘ಚಂದ್ರಯಾನ ೩’ ಈ ಯಾನದ, ‘ವಿಕ್ರಮ ಲ್ಯಾಂಡರ್’ ಮತ್ತು ‘ಪ್ರಜ್ಞಾನ್’ ರೋವರ್‌ ಈ ಉಪಕರಣಗಳು ಭೌತಿಕದೃಷ್ಟಿಯಲ್ಲಿ ದೋಷರಹಿತ ಹಾಗೂ ಪರಿಪೂರ್ಣವಾದವು ‘ಚಂದ್ರಯಾನ-೩’ ರ ‘ವಿಕ್ರಮ್’ ಲ್ಯಾಂಡರ್‌ನ ಒಳಗಿನಿಂದ ಯಶಸ್ವಿರೀತಿಯಲ್ಲಿ ಬೇರೆಯಾದ ‘ಪ್ರಜ್ಞಾನ್’ ರೋವರ್‌ !

ಭಾರತೀಯ ವಿಜ್ಞಾನಿಗಳ ಪ್ರಾರ್ಥನೆಯಿಂದ ಶ್ರೀ ತಿರುಪತಿ ಬಾಲಾಜಿಯು ವಿಶ್ವಕರ್ಮ ದೇವರಿಗೆ ಭಾರತೀಯ ವಿಜ್ಞಾನಿಗಳಿಗೆ ಸಹಾಯ ಮಾಡಲು ಹೇಳಿದನು. ಆದ್ದರಿಂದ ‘ಇಸ್ರೋ’ ಇವರು ಸಿದ್ಧಪಡಿಸಿದ ‘ಚಂದ್ರಯಾನ ೩’ ಉಪಕರಣವು ಭೌತಿಕದೃಷ್ಟಿಯಲ್ಲಿ ದೋಷರಹಿತ ಮತ್ತು ಪರಿಪೂರ್ಣವಾಯಿತು. ಆದ್ದರಿಂದ ‘ಚಂದ್ರಯಾನ ೩’ ರ ಅಂತರಿಕ್ಷ ಅಭಿಯಾನವು ಯಶಸ್ವಿಯಾಯಿತು.

೪. ‘ವಿಕ್ರಮ್‌ ಲ್ಯಾಂಡರ್’ ಮತ್ತು ‘ಪ್ರಜ್ಞಾನ್‌ ರೋವರ್’ ಇವುಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳು !

‘ವಿಕ್ರಮ್‌ ಲ್ಯಾಂಡರ್‌’ನಲ್ಲಿ ಶ್ರೀ ವಿಷ್ಣುವಿನ ಕ್ರಿಯಾಶಕ್ತಿ ಕಾರ್ಯ ನಿರತವಾಗಿರುವುದರಿಂದ ಈ ಉಪಕರಣವು ಚಂದ್ರನ ಮೇಲೆ ಯಶಸ್ವಿರೀತಿಯಲ್ಲಿ ತಲುಪಿತು, ಹಾಗೆಯೇ ಈ ‘ಲ್ಯಾಂಡರ್’
ನಿಂದ ಹೊರಗೆ ಬಂದಿರುವ ‘ಪ್ರಜ್ಞಾನ್’ ಎಂಬ ಹೆಸರಿನ ‘ರೋವರ್‌’ನಲ್ಲಿ ಶ್ರೀ ಸರಸ್ವತಿದೇವಿಯ ಜ್ಞಾನಶಕ್ತಿ ಕಾರ್ಯನಿರತ ವಾಗಿರುವುದರಿಂದ ‘ಪ್ರಜ್ಞಾನ್‌ ರೋವರ್’ ಇದು ಚಂದ್ರನ ಭೌಗೋಳಿಕ ಕ್ಷೇತ್ರ, ವಾತಾವರಣ ಇತ್ಯಾದಿಗಳ ಮಾಹಿತಿಯನ್ನು ಛಾಯಾಚಿತ್ರಗಳೊಂದಿಗೆ ಕಳುಹಿಸುತ್ತಿದೆ.

೫. ‘ಚಂದ್ರಯಾನ ೩’ ಈ ಯಾನದ ಪ್ರಕ್ಷೇಪಣೆಯಿಂದ ಚಂದ್ರನ ಮೇಲೆ ಇಳಿಯುವವರೆಗಿನ ಸ್ಥೂಲ ಮತ್ತು ಸೂಕ್ಷ್ಮ ಸ್ತರದ ಮಹತ್ವದ ಹಂತಗಳು

೬. ಕೃತಜ್ಞತೆಗಳು 

ಋಷಿಗಳಂತೆ ಪ್ರತಿಭಾಸಂಪನ್ನವಾಗಿರುವ ‘ಇಸ್ರೋ’ದ ಭಾರತೀಯ ವಿಜ್ಞಾನಿಗಳ ಅಪಾರ ಪರಿಶ್ರಮದಿಂದ ಮತ್ತು ದೇವರ ಕೃಪೆಯಿಂದಾಗಿ ‘ಚಂದ್ರಯಾನ ೩’ರ ಅಂತರಿಕ್ಷ್ಷ ಅಭಿಯಾನವು ಯಶಸ್ವಿಯಾಗಿ ಜಗತ್ತಿನಲ್ಲಿ ಭಾರತದ ಕೀರ್ತಿ ಹರಡಿತು. ನನಗೆ ‘ಶ್ರೀಗುರುಗಳ ಕೃಪೆಯಿಂದ ‘ಚಂದ್ರಯಾನ ೩’ರ ಸೂಕ್ಷ್ಮ ಪರೀಕ್ಷಣೆಯ ಸೇವೆಯನ್ನು ಮಾಡಲು ಸಾಧ್ಯ ವಾಯಿತು’, ಅದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಅನಂತ ಕೃತಜ್ಞಳಾಗಿದ್ದೇನೆ.’  – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೮.೨೦೨೩, ಮಧ್ಯಾಹ್ನ ೩.೩೦)