ಭೂಮಿಯಿಂದಾಗಿ ಚಂದ್ರನ ಮೇಲೆ ನೀರು ನಿರ್ಮಾಣ ! – ಅಮೆರಿಕದ ವಿಜ್ಞಾನಿಗಳ ದಾವೆ

‘ಚಂದ್ರಯಾನ-1’ ಮಾಹಿತಿಯ ಅಧ್ಯಯನದಿಂದ ಅಮೆರಿಕದ ವಿಜ್ಞಾನಿಗಳ ದಾವೆ

ವಾಷಿಂಗ್ಟನ್ (ಅಮೇರಿಕಾ) – ಭೂಮಿಯ ಮೇಲಿನ ಹೆಚ್ಚು ಶಕ್ತಿ ಇರುವ ‘ಇಲೆಕ್ಟ್ರಾನ್ ಗಳು’ (ಸೂಕ್ಷ್ಮಕಣಗಳು) ಚಂದ್ರನ ಮೇಲೆ ನೀರನ್ನು ಸೃಷ್ಟಿಸುತ್ತಿವೆ. ಈ ಇಲೆಕ್ಟ್ರಾನ್ ಗಳು ಭೂಮಿಯ ‘ಪ್ಲಾಸ್ಮಾ ಶೀಟ್’ ನಲ್ಲಿದೆ. (ಸೂಕ್ಷ್ಮ ಕಣಗಳ ಆವರಣದಲ್ಲಿ) ಇದರಿಂದಾಗಿ ಪೃಥ್ವಿಯ ಹವಾಮಾನದಲ್ಲಿನ ಬದಲಾವಣೆಗಳು ಆಗುತ್ತಿರುತ್ತವೆ ಎಂದು ಅಮೇರಿಕೆಯ ಹವಾಯಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭಾರತದ ‘ಚಂದ್ರಯಾನ-1’ ಕಳುಹಿಸಿರುವ ಮಾಹಿತಿಯನ್ನು ಅಧ್ಯಯನ ಮಾಡಿದ ನಂತರ ಪ್ರತಿಪಾದನೆ ಮಾಡಿದ್ದಾರೆ. ‘ನೇಚರ್ ಆಸ್ಟ್ರಾನಮಿ’ ಜರ್ನಲ್ ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.

1. ವಿಜ್ಞಾನಿಗಳು, ಈ ಇಲೆಕ್ಟ್ರಾನ್ ಗಳು ಚಂದ್ರನ ಮೇಲಿರುವ ಗಟ್ಟಿ ಮತ್ತು ಖನಿಜಗಳನ್ನು ಕರಗಿಸುತ್ತವೆ. ಆದ್ದರಿಂದ, ಚಂದ್ರನ ಹವಾಮಾನವೂ ಬದಲಾಗುತ್ತಿದೆ. ಈ ಇಲೆಕ್ಟ್ರಾನ್ಸ್ ಗಳಿಂದಾಗಿ ಚಂದ್ರನ ಮೇಲೆ ನೀರು ನಿರ್ಮಾಣವಾಗಲು ಸಹಾಯ ಆಗಿರಬಹುದು ಎಂದು ದಾವೆ ಮಾಡಿದ್ದಾರೆ.

2. ಚಂದ್ರನಿಗೆ ರಾತ್ರಿ 14 ದಿನಗಳು ಮತ್ತು 14 ದಿನಗಳು ಸೂರ್ಯಪ್ರಕಾಶ ಇರುತ್ತದೆ. ಯಾವಾಗ ಸೂರ್ಯಪ್ರಕಾಶ ಇಲ್ಲದಿರುವಾಗ ಸೌರ ಮಾರುತದ ಮಳೆಯಾಗುತ್ತದೆ. ಈ ಕಾಲಾವಧಿಯಲ್ಲಿ ನೀರಿನ ನಿರ್ಮಿತಿಯಾಗಿದೆಯೆಂದು ಹೇಳಲಾಗುತ್ತದೆ.

3. 2008 ರಲ್ಲಿ ಚಂದ್ರಯಾನ-1 ಅನ್ನು ಉಡಾವಣೆ ಮಾಡಲಾಯಿತು. ಈ ಬಾಹ್ಯಾಕಾಶ ನೌಕೆ ಕಳುಹಿಸಿದ ಮಾಹಿತಿಯಿಂದ ಚಂದ್ರನ ಮೇಲೆ ಮಂಜುಗಡ್ಡೆ ಇದೆ ಎಂದು ಸಾಬೀತಾಗಿತ್ತು. ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಸೂರ್ಯಪ್ರಕಾಶ ತಲುಪದಿರುವ ಕಾರಣದಿಂದ ಅಲ್ಲಿಯ ತಾಪಮಾನ ಮೈನಸ್ 200 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆ ಹೊಂದಿರಬಹುದು, ಇದು ಮಂಜುಗಡ್ಡೆಯ ರೂಪದಲ್ಲಿ ನೀರಿನ ಅಸ್ತಿತ್ವವನ್ನು ಸೂಚಿಸುತ್ತದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ತದನಂತರ ಅಲ್ಲಿ ನೀರನ್ನು ಹುಡುಕಲು ‘ಚಂದ್ರಯಾನ-3’ ಕಳುಹಿಸಲಾಯಿತು.

ಸಂಪಾದಕೀಯ ನಿಲುವು

ಹುಣ್ಣಿಮೆ ಮತ್ತು ಅಮಾವಾಸ್ಯೆಯ ಕಾಲಾವಧಿಯಲ್ಲಿ, ಚಂದ್ರನ ಕಾರಣದಿಂದಾಗಿ, ಭೂಮಿಯ ವಾತಾವರಣದಲ್ಲಿ ಕೆಲವು ಸೂಕ್ಷ್ಮ ಸ್ತರದಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಅದರ ಪರಿಣಾಮ ಮನುಷ್ಯನ ಮನಸ್ಸಿನ ಮೇಲೂ ಆಗುತ್ತದೆ. ಇದನ್ನು ಋಷಿ-ಮುನಿಗಳು ಕೂಡ ಹೇಳಿದ್ದಾರೆ. ಈಗ ಇದರ ಬಗ್ಗೆಯೂ ವಿಜ್ಞಾನಿಗಳು ಆಳವಾಗಿ ಸಂಶೋಧನೆ ನಡೆಸಬೇಕು !