ಸಾಧಕರಿಗೆ, ಹಾಗೆಯೇ ವಾಚಕರಿಗೆ, ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಸೇವೆಯ ಸುವರ್ಣಾವಕಾಶ !
‘ಸನಾತನದ ವಿವಿಧ ಸ್ಥಳಗಳಲ್ಲಿನ ಆಶ್ರಮಗಳು ಮತ್ತು ಸೇವಾಕೇಂದ್ರಗಳಲ್ಲಿ ಅನೇಕ ವರ್ಷಗಳಿಂದ ಸಾಧಕರು ವಾಸಿಸುತ್ತಿದ್ದು ಅಲ್ಲಿನ ಹಾಸಿಗೆಗಳನ್ನು ಬಹಳ ಸಮಯದಿಂದ ಬಳಸುತ್ತಿದ್ದಾರೆ. ಈ ಹಾಸಿಗೆಗಳಲ್ಲಿನ ಹತ್ತಿಯನ್ನು ತೆಗೆದು ಹೊಸ ಹಾಸಿಗೆಯನ್ನು ತಯಾರಿಸುವ ಸೇವೆ ಮಾಡಲಿಕ್ಕಿದೆ.
ಹೊಸ ಹಾಸಿಗೆಯನ್ನು ತಯಾರಿಸುವಾಗ ಹಾಸಿಗೆಯ ಗಾತ್ರಕ್ಕೆ ಅನುಗುಣವಾಗಿ ಬಟ್ಟೆಯ ಕವರ್ನ್ನು ಹೊಲಿಯು ವುದು, ಯಂತ್ರದಿಂದ ಹತ್ತಿಯನ್ನು ಕಡೆಯುವುದು, ಬಟ್ಟೆಯ ಕವರಿನಲ್ಲಿ ಹತ್ತಿಯನ್ನು ತುಂಬಿ ಅದನ್ನು ಸಮಾನವಾಗಿ ಹರಡುವುದು ಮತ್ತು ಹತ್ತಿ ಸಡಿಲವಾಗದಂತೆ ಬಟ್ಟೆಯ ಮೇಲೆ ಹೊಲಿಗೆಯನ್ನು ಹಾಕುವುದು, ಈ ರೀತಿ ಸೇವೆಯನ್ನು ಮಾಡಲಾಗುತ್ತದೆ. ಈ ಎಲ್ಲ ಸೇವೆಗಾಗಿ ಹಾಸಿಗೆಗಳನ್ನು ತಯಾರಿಕೆಯ ಕೌಶಲ್ಯವಿರುವವರ ಆವಶ್ಯಕತೆಯಿದೆ.
ಸಾಧಕ, ವಾಚಕ ಅಥವಾ ಧರ್ಮಪ್ರೇಮಿಗಳಲ್ಲಿ ಯಾರಿಗಾದರೂ ಹಾಸಿಗೆಯನ್ನು ತಯಾರಿಸುವ ಅನುಭವ ಇದ್ದರೆ ಅಥವಾ ಈ ವ್ಯವಸಾಯವಿರುವವರಿಗೆ ಈ ಸೇವೆಯ ಸುವರ್ಣಾವಕಾಶವಿದೆ. ಯಾರಿಗೆ ಹಾಸಿಗೆಗಳನ್ನು ತಯಾರಿಸುವ ವ್ಯವಸಾಯವಿದೆ ಮತ್ತು ಅವರು ಕನಿಷ್ಟ ೮-೧೦ ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳು ಸೇವೆ ಗಾಗಿ ಕೊಡಬಹುದಾದ, ಸಾಧಕರಿಗೆ ಪ್ರತ್ಯಕ್ಷ ಹಾಸಿಗೆ ಯನ್ನು ತಯಾರಿಸಲು ಕಲಿಸಲು ಇಚ್ಛಿಸುವವರು ಸಹ ಸಂಪರ್ಕಿಸಬೇಕು. ಯಾರಿಗೆ ಸೇವೆಗಾಗಿ ಪ್ರತ್ಯಕ್ಷ ಬರಲು ಸಾಧ್ಯವಾಗುವುದಿಲ್ಲ; ಆದರೆ ಅವರು ಹಾಸಿಗೆಯ ತಯಾರಿ ಮತ್ತು ಸಾಧಕರಿಗೆ ಕಲಿಸುವುದು, ಈ ಸೇವೆಗಾಗಿ ತಮ್ಮ ಕಾರ್ಖಾನೆಯಲ್ಲಿನ ನೌಕರರನ್ನು ಕಳುಹಿಸಲು ಸಾಧ್ಯವಾಗು ತ್ತಿದ್ದರೆ, ಅವರು ಸಹ ದಯವಿಟ್ಟು ಸಂಪರ್ಕಿಸಬೇಕು.
ವಾಚಕ, ಹಿತಚಿಂತಕ ಮತ್ತು ಧರ್ಮಪ್ರೇಮಿಗಳಿಗೆ ‘ಸೇವೆ’ ಎಂದು ಅಥವಾ ‘ಸೇವಾಮೌಲ್ಯ (ಮಜೂರಿ)’ಯನ್ನು ತೆಗೆದುಕೊಂಡು ಮೇಲಿನ ಸೇವೆಗಳಲ್ಲಿ ಪಾಲ್ಗೊಳ್ಳುವ ಇಚ್ಛೆ ಇದ್ದಲ್ಲಿ ಅದನ್ನು ಸಹ ತಿಳಿಸಬೇಕು. ಸೇವೆ ಮಾಡಲು ಬಯಸುವವರು ಸ್ಥಳೀಯ ಸಾಧಕರ ಮಾಧ್ಯಮದಿಂದ ಜಿಲ್ಲಾ ಸೇವಕರಿಗೆ ತಿಳಿಸಬೇಕು. ಜಿಲ್ಲಾಸೇವಕರು ಪಕ್ಕದಲ್ಲಿ ಕೊಟ್ಟಿರುವ ಕೋಷ್ಟಕದ ಪ್ರಕಾರ ಮಾಹಿತಿಯನ್ನು ಕಳುಹಿಸಬೇಕು.
ಹೆಸರು ಮತ್ತು ಸಂಪರ್ಕ ಕ್ರಮಾಂಕ
ಸೌ. ಭಾಗ್ಯಶ್ರೀ ಸಾವಂತ (೭೦೫೮೮೮೫೬೧೦)
ಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೊಂಡಾ, ಗೋವಾ – ೪೦೩೪೦೧.’
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ತರು, ಸನಾತನ ಸಂಸ್ಥೆ. (೩೧.೮.೨೦೨೩)