ಅಪಘಾತಗಳಿಂದ ರಕ್ಷಣೆಯಾಗಲು ಪ್ರತಿದಿನ ಮಾಡಬೇಕಾದ ನಾಮಜಪವನ್ನು ಈಗ ತೊಂದರೆ ಕಡಿಮೆ ಆಗಿರುವುದರಿಂದ ಮಾಡುವ ಆವಶ್ಯಕತೆ ಇಲ್ಲ !

ಸಾಧಕರಿಗೆ ಸೂಚನೆ

(ಸದ್ಗುರು) ಡಾ. ಮುಕುಲ ಗಾಡಗೀಳ

‘ಸನಾತನದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯದಲ್ಲಿ ಅಡಚಣೆ ತರುವುದಕ್ಕಾಗಿ ಕೆಟ್ಟ ಶಕ್ತಿಗಳು ಸಾಧನೆ ಮತ್ತು ಸಮಷ್ಟಿ ಸೇವೆ ಮಾಡುವ ಸಾಧಕರಿಗೆ ಅನೇಕ ರೀತಿಯಲ್ಲಿ ತೊಂದರೆಗಳನ್ನು ನೀಡುತ್ತಿದ್ದವು. ಈ ತೊಂದರೆಯಲ್ಲಿ ಒಂದು ವಿಧ ಅಂದರೆ ಕಳೆದ ಕೆಲವು ತಿಂಗಳುಗಳಿಂದ ಸಾಧಕರಿಗೆ ಅಪಘಾತ ಆಗುವ ಪ್ರಮಾಣ ಹೆಚ್ಚಾಗಿತ್ತು. ಇದನ್ನು ಗಮನಿಸಿ ಅಪಘಾತಗಳಿಂದ ಸಾಧಕರ ರಕ್ಷಣೆಯಾಗುವುದಕ್ಕಾಗಿ ೪ ಆಗಸ್ಟ್ ೨೦೨೪ ರಿಂದ ಸಾಧಕರಿಗೆ ವೈಯಕ್ತಿಕ ನಾಮಜಪದ ಜೊತೆಗೆ ಒಂದು ಗಂಟೆ ‘ಮಹಾಶೂನ್ಯ’ ಈ ನಾಮಜಪ ತುಟಿಯ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ಬಲಗೈಯ ಅಂಗೈಯನ್ನು ಹಿಡಿದು ಮಾಡಲು ಹೇಳಲಾಗಿತ್ತು. ಕಳೆದ ೫ ತಿಂಗಳಲ್ಲಿ ಸಾಧಕರು ಈ ಜಪ ಮಾಡುತ್ತಿದ್ದರು ಮತ್ತು ಅವರಿಗೆ ‘ಈ ನಾಮಜಪದಿಂದ ತಾವು ಅಪಘಾತದಿಂದ ಪಾರಾಗಿದ್ದೇವೆ ಅಥವಾ ಅಪಘಾತ ಆಗಿದೆ; ಆದರೆ ಸಣ್ಣಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿವೆ’, ಈ ರೀತಿಯ ಅನುಭೂತಿಗಳು ಬಂದಿವೆ.

ಪ್ರಸ್ತುತ ೬ ಜನವರಿ ೨೦೨೫ ರ ವರೆಗೆ ಈ ನಾಮಜಪ ಮಾಡಬೇಕಿತ್ತು. ಈ ನಾಮಜಪದ ಪರಿಣಾಮದ ವರದಿ ಪಡೆದ ನಂತರ ‘ಈಗ ಸಾಧಕರ ಮೇಲಿನ ಅಪಘಾತದ ಅಪಾಯ ಕಡಿಮೆ ಆಗಿದೆ’, ಹೀಗೆ ಕಂಡು ಬಂದಿದೆ. ಆದ್ದರಿಂದ ಸಾಧಕರು ಇನ್ನು ಮುಂದೆ ಈ ನಾಮಜಪ ಮಾಡುವ ಆವಶ್ಯಕತೆ ಇಲ್ಲ’.

(ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೪.೧.೨೦೨೫)