ಫಲಕ ಪ್ರಸಿದ್ಧಿಗಾಗಿ

೧. ಕಾಂಗ್ರೆಸ್‌ನವರ ಹಿಂದೂದ್ವೇಷವನ್ನು ತಿಳಿಯಿರಿ !

ಸಚಿವ ಪ್ರಿಯಾಂಕ ಖರ್ಗೆ ಇವರು ಉದಯನಿಧಿ ಸ್ಟ್ಯಾಲಿನ್‌ ಇವರ ಹೇಳಿಕೆಯನ್ನು ಬೆಂಬಲಿಸಿ ‘ಯಾವ ಧರ್ಮವು ನಿಮಗೆ ಸಮಾನ ಅಧಿಕಾರ ನೀಡುವುದಿಲ್ಲವೋ, ಆ ಧರ್ಮವು ಯಾವುದಾದರೊಂದು ರೋಗದಂತಿದೆ’, ಎಂದು ಹಿಂದೂ ಧರ್ಮವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

೨. ದೇಶವನ್ನು ‘ಭಾರತ’ ಹೆಸರಿನೊಂದಿಗೆ ಹಿಂದೂ ರಾಷ್ಟ್ರ ಎಂದು ಘೋಷಿಸಿ !

‘ಭಾರತದ ಸಂವಿಧಾನದಲ್ಲಿ ಬದಲಾವಣೆ ಮಾಡಿ ‘ಇಂಡಿಯಾ’ ಹೆಸರನ್ನು ತೆಗೆದು ಕೇವಲ ‘ಭಾರತ’ ಹೆಸರನ್ನೇ ಇಡಬೇಕು’, ಎಂದು ಭಾಜಪದ ಸಂಸದ ಹರನಾಥ ಸಿಂಹ ಯಾದವ ಇವರು ವಾರ್ತಾಸಂಸ್ಥೆಯೊಂದಿಗೆ ಮಾತನಾಡುವಾಗ ಆಗ್ರಹಿಸಿದರು.

೩. ಸ್ವಧರ್ಮದ ಕುರಿತು ಪ್ರಶ್ನೆ ಕೇಳುವ ಕಾಂಗ್ರೆಸ್ಸಿನ ಹಿಂದೂ ಸಚಿವರು !

‘ವಿಶ್ವದಲ್ಲಿ ಅನೇಕ ಧರ್ಮಗಳು ಉದಯಿಸಿವೆ; ಆದರೆ ಹಿಂದೂ ಧರ್ಮ ಯಾವಾಗ ಮತ್ತು ಹೇಗೆ ಉದಯಿಸಿತು ?, ಎಂಬುದರ ಬಗ್ಗೆ ಇನ್ನೂವರೆಗೆ ಪ್ರಶ್ನೆಯೇ ಇದೆ’, ಎಂದು ಗೃಹಸಚಿವ ಜಿ. ಪರಮೇಶ್ವರ ಇವರು ಪ್ರಶ್ನಿಸಿದ್ದಾರೆ.

೪. ಅಯೋಧ್ಯೆಯನ್ನು ಪ್ರವಾಸಿಕೇಂದ್ರವಲ್ಲ, ಹಿಂದೂಗಳ ಧಾರ್ಮಿಕ ಶಿಕ್ಷಣದ ಕೇಂದ್ರ ಮಾಡಿ !

ಅಯೋಧ್ಯೆಯಲ್ಲಿ ಪ್ರಸ್ತುತ ೩೨ ಸಾವಿರ ಕೋಟಿ ರೂಪಾಯಿಗಳ ಯೋಜನೆಯನ್ನು ನಿರ್ಮಿಸಿ ಅಯೋಧ್ಯೆಯನ್ನು ವಿಶ್ವದ ಅತಿ ದೊಡ್ಡ ಧಾರ್ಮಿಕ ಪ್ರವಾಸಿ ಕೇಂದ್ರವನ್ನಾಗಿಸುವ ಗುರಿಯನ್ನು ಸರಕಾರವು ಇಟ್ಟುಕೊಂಡಿದೆ.

೫. ನಟ ಕಮಲ ಹಾಸನ ಇವರ ಹಿಂದೂದ್ರೋಹವನ್ನು ತಿಳಿಯಿರಿ !

‘ಉದಯನಿಧಿ ಇವರಿಗೆ ಸನಾತನ ಧರ್ಮದ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಧಿಕಾರವಿದೆ. ಒಂದು ವೇಳೆ ಅವರ ಅಭಿಪ್ರಾಯ ಒಪ್ಪಿಗೆ ಇಲ್ಲದಿದ್ದರೆ, ಸನಾತನ ಧರ್ಮದ ವೈಶಿಷ್ಟ್ಯಗಳನ್ನು ಹೇಳುವ ಚರ್ಚೆಯನ್ನು ಆಯೋಜಿಸಿ’, ಎಂದು ನಟ ಕಮಲ ಹಾಸನ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

೬. ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಿರಿ !

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಗಿಲ್ಗಿಟ್‌-ಬಾಲ್ಟಿಸ್ತಾನದ ನಾಗರಿಕರು ಅನೇಕ ದಿನಗಳಿಂದ ಬೀದಿಗೆ ಇಳಿದು ಪಾಕಿಸ್ತಾನ ಸರಕಾರವನ್ನು ನಿಷೇಧಿಸುತ್ತಿದ್ದಾರೆ. ಅವರಿಗೆ ಭಾರತದಲ್ಲಿ ಸೇರ್ಪಡೆ ಆಗಬೇಕಾಗಿದೆ. ಅವರು ತಮ್ಮ ಮನೆಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

೭. ಭಾರತದಲ್ಲಿ ಅಸುರಕ್ಷಿತ ಹಿಂದುತ್ವನಿಷ್ಠರು !

ಫರಿದಾಬಾದ (ಹರಿಯಾಣಾ)ದಲ್ಲಿ ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ಮಾಡಲಾಗಿದ್ದ ಮಾರಣಾಂತಿಕ ಹಲ್ಲೆಯಲ್ಲಿ ಆಲೋಕ ಎಂಬ ಕಾರ್ಯಕರ್ತನು ಸಾವನ್ನಪ್ಪಿದನು ಮತ್ತು ಶಿವಮ್‌ ಈ ಕಾರ್ಯಕರ್ತನು ಗಂಭೀರವಾಗಿ ಗಾಯಗೊಂಡನು. ಪೊಲೀಸರು ಯಾಮಿನ್, ರಾಜಾ ಮತ್ತು ಗುಗಾ ಇವರನ್ನು ಹುಡುಕುತ್ತಿದ್ದಾರೆ.