೧. ಇದರ ಮೇಲೆ ಯಾರು ಮತ್ತು ಯಾವಾಗ ಕ್ರಮ ಕೈಗೊಳ್ಳುತ್ತಾರೆ ?
ಮಸೀದಿಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಲ್ಯಾಂಡ್ ಜಿಹಾದ್ ಮಾಡಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಸಂಚು ಮುಂಬೈ, ಭಾಯಿಂದರ್, ನವಿ ಮುಂಬೈ, ವಸಯಿ, ವಿರಾರ್, ಕಲ್ಯಾಣ, ಡೊಂಬಿವಲಿ ಮತ್ತು ಪನವೇಲ್‌ನಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಹೇಳಿದ್ದಾರೆ.
೨. ಮೊಘಲರ ವಂಶಜರನ್ನು ಗುರುತಿಸಿ !
ಕಾಂಗ್ರೆಸ್ ನಾಯಕ ಹುಸೇನ್ ದಲ್ವಾಯಿ ಅವರು ಛತ್ರಪತಿ ಸಂಭಾಜಿ ಮಹಾರಾಜರನ್ನು ಔರಂಗಜೇಬನು ಮನುಸ್ಮೃತಿ ಪ್ರಕಾರ ಕೊಂದನು ಮತ್ತು ಅವನು ಛತ್ರಪತಿ ಸಂಭಾಜಿ ಮಹಾರಾಜರಿಗೆ ವಿಧಿಸಿದ ಶಿಕ್ಷೆಗಳು ಮನುಸ್ಮೃತಿಯ ಪ್ರಕಾರ ಇದ್ದವು ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ.
೩. ಮಸೀದಿಗಳ ಸಮೀಪ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳು ಯಾವಾಗ ಕೊನೆಗೊಳ್ಳುತ್ತವೆ ?
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರಾಮನವಮಿ ಹಬ್ಬದ ಹಿಂದಿನ ದಿನ ನಡೆಯುತ್ತಿದ್ದ ‘ಮಂಗಲಾ’ ಮೆರವಣಿಗೆಯು ಜಾಮಾ ಮಸೀದಿಯ ಬಳಿ ತಲುಪಿದಾಗ, ಮತಾಂಧ ಮುಸಲ್ಮಾನರು ದಾಳಿ ನಡೆಸಿದ ನಂತರ ಅಲ್ಲಿ ಗಲಭೆಯ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು, ಲಾಠಿ ಚಾರ್ಜ್ ಮಾಡಿದರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.
೪. ಸಮಾಜವಾದಿ ಪಕ್ಷದ ಹಿಂದೂದ್ವೇಷಿ ಮನಸ್ಥಿತಿಯನ್ನು ತಿಳಿಯಿರಿ !
ಭಾಜಪದವರಿಗೆ ದುರ್ವಾಸನೆ ಇಷ್ಟ, ಅದಕ್ಕಾಗಿ ಅವರು ಗೋಶಾಲೆಗಳನ್ನು ಕಟ್ಟುತ್ತಿದ್ದಾರೆ. ಭಾಜಪವು ಹರಡಿರುವ ಈ ದುರ್ವಾಸನೆಯನ್ನು ದೂರ ಮಾಡುವಂತೆ ನಾನು ಕನೌಜ್‌ನ ಜನರಿಗೆ ಮನವಿ ಮಾಡುತ್ತೇನೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿರುವ ಸಂಸದ ಅಖಿಲೇಶ ಯಾದವ್ ಇವರು ಹೇಳಿದ್ದಾರೆ.
೫. ದೇಶವಿರೋಧಿ ಬಂಗಾಲ ಸರಕಾರವನ್ನು ಯಾವಾಗ ವಿಸರ್ಜಿಸಲಾಗುತ್ತದೆ ?
ಬಂಗಾಳದ ತೃಣಮೂಲ ಕಾಂಗ್ರೆಸ್‌ನ ಗೂಂಡಾಗಳು ಬಾಂಗ್ಲಾದೇಶದ ಗಡಿಯನ್ನು ಮುಚ್ಚಲು ಅಡ್ಡಿಪಡಿಸುತ್ತಾರೆ, ಭದ್ರತಾ ಪಡೆಗಳೊಂದಿಗೆ ದುರ್ವರ್ತನೆ ಮಾಡುತ್ತಾರೆ. ಮಮತಾ ಬ್ಯಾನರ್ಜಿ ಸರಕಾರವು ಗಡಿಯಲ್ಲಿ ಬೇಲಿ ಹಾಕಲು ಭೂಮಿಯನ್ನು ಸಹ ನೀಡುವುದಿಲ್ಲ ಎಂದು ಗೃಹ ಸಚಿವ ಅಮಿತ ಶಾ ಲೋಕಸಭೆಯಲ್ಲಿ ತಿಳಿಸಿದ್ದಾರೆ.
೬. ಇದು ಬಂಗಾಲವಲ್ಲ, ಬಾಂಗ್ಲಾದೇಶ !
ಬಂಗಾಲದ ಮಾಲದಾ ಜಿಲ್ಲೆಯ ಮೊಥಾಬಾರಿ ಭಾಗದಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಮತಾಂಧ ಮುಸಲ್ಮಾನರು ಬೀದಿಗಿಳಿದು ಹಿಂದೂಗಳ ಅಂಗಡಿ ಮತ್ತು ಮನೆಗಳನ್ನು ಗುರಿಯಾಗಿಸಿ ಹಾನಿ ಮಾಡುತ್ತಿರುವುದು ಕಂಡು ಬಂದಿದೆ.