ನೇಪಾಳದಲ್ಲಿ ಆಡಳಿತಾರೂಢ ಕಮ್ಯುನಿಸ್ಟ್‌ರ ಹಿಂದೂದ್ವೇಷವನ್ನರಿಯಿರಿ !

೧. ನೇಪಾಳದಲ್ಲಿ ಆಡಳಿತಾರೂಢ ಕಮ್ಯುನಿಸ್ಟ್‌ರ ಹಿಂದೂದ್ವೇಷವನ್ನರಿಯಿರಿ !

ನೇಪಾಳವನ್ನೂ ಹಿಂದೂ ರಾಷ್ಟ್ರ ಎಂದು ಘೋಷಿಸುವ ಬಗ್ಗೆ ಹೇಳಿಕೆ ನೀಡಿದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌಂಡೇಲ ಮತ್ತು ಪ್ರಧಾನಿ ಪುಷ್ಪ ಕಮಲ ದಹಲ ‘ಪ್ರಚಂಡ’ ಇವರು ಭೇಟಿಯಾಗಲು ನಿರಾಕರಿಸಿದ್ದಾರೆ.

೨. ಕಾಂಗ್ರೆಸ್‌ ನ ಮತಾಂಧ ನಾಯಕರ ಬೆದರಿಕೆಯನ್ನು ತಿಳಿಯಿರಿ !

ಕಾಂಗ್ರೆಸ್ಸಿನ ಹಿರಿಯ ನಾಯಕ ಅಝೀಝ್‌ ಕುರೇಶಿ ಇವರು ‘ಮುಸಲ್ಮಾನರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ, ಸಹನೆಯ ಕಟ್ಟೆ ಒಡೆದಾಗ ಮುಸಲ್ಮಾನರು ಕೈಯಲ್ಲಿ ಬಳೆ ತೊಟ್ಟು ಕುಳಿತುಕೊಳ್ಳುವುದಿಲ್ಲ. ೨೨ ಕೋಟಿಗಳ ಪೈಕಿ ೨ ಕೋಟಿ ಮುಸಲ್ಮಾನರು ಹತರಾದರೂ ತೊಂದರೆ ಇಲ್ಲ’, ಎಂದು ಹೇಳಿಕೆ ನೀಡಿದ್ದಾರೆ.

೩. ಭೂಮಿಯನ್ನು ವಶಪಡಿಸಿಕೊಳ್ಳುವ ವಕ್ಫ್ ಬೋರ್ಡ್ ಕಾನೂನನ್ನೇ ರದ್ದು ಪಡಿಸಿ !

ಕೇಂದ್ರ ಸರಕಾರವು ದೆಹಲಿ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ೧೨೩ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಇದರಲ್ಲಿ ಮಸೀದಿ, ಕಬ್ರಸ್ತಾನ ಮತ್ತು ದರ್ಗಾಗಳು ಸಮಾವೇಶಗೊಂಡಿವೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ದೆಹಲಿ ವಕ್ಫ್ ಬೋರ್ಡ್‌ಗೆ ನೋಟೀಸನ್ನು ಕಳುಹಿಸಲಾಗಿದೆ.

೪. ಇಂತಹ ಶಾಲೆಗಳ ಮನ್ನಣೆಯನ್ನು ರದ್ದು ಪಡಿಸಿ !

ಅಜಮೇರ (ರಾಜಸ್ಥಾನ)ದಲ್ಲಿನ ಸೋಫಿಯಾ ಶಾಲೆಯ ಎಲ್ಲಾ ವಿದ್ಯಾರ್ಥಿ ಗಳಿಂದ ‘ಕ್ರೀಡಾ ವಿಧಗಳ’ ಹೆಸರಿನಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ತರಿಸ ಲಾಗಿದೆ. ಇದರಲ್ಲಿ ಅವರು ತಮ್ಮ ಸೊಂಟ ಮತ್ತು ಪೃಷ್ಠದ ಆಕಾರವನ್ನು ನಮೂದಿಸಲು ತಿಳಿಸಿದ್ದಾರೆ.

೫. ಅಮೇರಿಕದ ಪಾದ್ರಿಯ ಹಿಂದೂದ್ವೇಷವನ್ನು ತಿಳಿಯಿರಿ !

‘ಅಮೇರಿಕದ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿನ ಸಂಭಾವ್ಯ ಅಭ್ಯರ್ಥಿ ರಾಮಸ್ವಾಮಿ ಆಯ್ಕೆಯಾದರೆ, ನಮಗೆ ವೈಟ್‌ ಹೌಸ್‌ನಲ್ಲಿ ವಿಚಿತ್ರ ರೀತಿಯ ಹಿಂದೂ ದೇವತೆಗಳ ವಿಗ್ರಹಗಳು ನೋಡಲು ಸಿಗುವವು’ ಎಂದು ಕ್ರೈಸ್ತ ಪಾದ್ರಿಯು ಟೇಕಿಸಿದ್ದಾನೆ.

೬. ಕಾಶ್ಮೀರದ ಮುಸಲ್ಮಾನ ವಿದ್ಯಾರ್ಥಿಗಳ ಮತಾಂಧತೆಯನ್ನು ತಿಳಿಯಿರಿ !

ಚಿತ್ತೋಡಗಡ (ರಾಜಸ್ಥಾನ)ದಲ್ಲಿನ ಮೇವಾಡ ವಿಶ್ವವಿದ್ಯಾನಿಲಯದ ಪರಿಸರದಲ್ಲಿ ಕಾಶ್ಮೀರದ ಮುಸಲ್ಮಾನ ವಿದ್ಯಾರ್ಥಿಗಳು ‘ಅಲ್ಲಾಹು ಅಕ್ಬರ’ ಎಂದು ಘೋಷಣೆ ನೀಡಿ, ಕಲ್ಲು ತೂರಾಟ ನಡೆಸಿದರು. ಅವರ ಬಳಿ ಶಸ್ತ್ರಗಳೂ ಇದ್ದವು. ಈ ವಿದ್ಯಾರ್ಥಿಗಳಿಗೆ ಮತ್ತೊಂದು ಗುಂಪು ವಿರೋಧ ಪಡಿಸಿತು. ಈ ಹಿಂಸಾಚಾರದಲ್ಲಿ ೮ ಜನರು ಗಾಯಗೊಂಡಿದ್ದಾರೆ.

೭. ಇಸ್ಲಾಮಿ ದೇಶಗಳಲ್ಲಿ ಹಿಂದೂಗಳ ಸ್ಥಿತಿಯನ್ನು ಅರಿತುಕೊಳ್ಳಿ !

ಮಲೇಷ್ಯಾದ ಪ್ರಧಾನಿದಾತೂಕ ಸೇರಿ ಅನ್ವರ್‌ ಇಬ್ರಾಹಿಂ ಇವರು ಕೆಲವು ದಿನಗಳ ಹಿಂದೆ ಸೆಲಾಂಗೋರನ ಮಸೀದಿಯೊಂದರಲ್ಲಿ ನಮಾಜುಪಠಣದ ನಂತರ ಹಿಂದೂ ಯುವಕನೊಬ್ಬನನ್ನು ಬಹಿರಂಗವಾಗಿ ಇಸ್ಲಾಮ್‌ಗೆ ಮತಾಂತರಿಸಿ ದರು. ಇದನ್ನು ಮಲೇಷ್ಯಾದ ಹಿಂದೂಗಳು ವಿರೋಧಿಸುತ್ತಿದ್ದಾರೆ.