ಮಲೇಷಿಯಾದ ಪ್ರಧಾನಿಯಿಂದ ಮಸೀದಿಯಲ್ಲಿ ಹಿಂದೂ ಯುವಕನ ಮತಾಂತರ !

ಕೌಲಾಲಂಪುರ (ಮಲೇಶಿಯಾ) – ಮಲೇಶಿಯಾದ ಪ್ರಧಾನಿ ದಾತುಕ ಸೇರಿ ಅನ್ವರ್ ಇಬ್ರಾಹಿಂ ಇವರು ಕೆಲವು ದಿನಗಳ ಹಿಂದೆ ಒಬ್ಬ ಹಿಂದೂ ಯುವಕನನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ಈ ಘಟನೆಯ ನಂತರ ವಿವಾದ ನಿರ್ಮಾಣವಾಯಿತು. ಪ್ರಧಾನಮಂತ್ರಿ ಇಬ್ರಾಹಿಂ ಇವರು ಸೇಲಾಂಗೊರ ಇಲ್ಲಿಯ ಒಂದು ಮಸೀದಿಯಲ್ಲಿ ನಮಾಜ್ ನಂತರ ಒಬ್ಬ ಹಿಂದೂ ಯುವಕನನ್ನು ಬಹಿರಂಗವಾಗಿ ಮತಾಂತರಗೊಳಿಸಿ ಅವನಿಗೆ ಇಸ್ಲಾಂನ ದೀಕ್ಷೆ ನೀಡಿದರು.

ಈ ಘಟನೆಯ ಬಗ್ಗೆ ಮಲೇಶಿಯಾದ ಪೇನಾಂಗ ಪ್ರಾಂತದ ಮಾಜಿ ಉಪಮುಖ್ಯಮಂತ್ರಿ ಪ್ರಾ. ಪಿ. ರಾಮಸ್ವಾಮಿ ಇವರು, ”ಈ ರೀತಿಯ ಕೃತ್ಯಗಳು, ಪ್ರಧಾನಮಂತ್ರಿ ಇಬ್ರಾಹಿಂ ಇವರಿಗೆ ಹಿಂದೂಗಳ ಬಗ್ಗೆ ಸ್ವಲ್ಪವು ಗೌರವವಿಲ್ಲ ಎಂಬುದು ತೋರಿಸುತ್ತದೆ. ದೇಶದ ಪ್ರಗತಿಗಾಗಿ ಹಿಂದುಗಳು ಬಹಳಷ್ಟು ತ್ಯಾಗ ಮಾಡಿದ್ದಾರೆ ಹಾಗೂ ಬಲಿದಾನ ನೀಡಿದ್ದಾರೆ. ಭಾರತೀಯ ಮತ್ತು ಇತರ ಜನರು ವಿಶ್ವಾಸ ಇಟ್ಟಿದ್ದರು ? ಇವರು ಅದೇ ನಾಯಕರಾಗಿದ್ದಾರೆ, ಒಬ್ಬ ಭಾರತೀಯ ವಿದ್ಯಾರ್ಥಿಯು ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಇವರಿಗೆ ಶಿಕ್ಷಣದ ಸಂದರ್ಭದಲ್ಲಿ ಪ್ರಶ್ನೆ ಕೇಳಿದಾಗಿನ ಅವರ ವರ್ತನೆ ಬಹಳ ಕೆಟ್ಟದಾಗಿತ್ತು. ಅದು ಭಾರತೀಯರು ಸ್ವೀಕರಿಸಲು ಸಾಧ್ಯವಿಲ್ಲ. ನಾವು ಇದರ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ, ಪ್ರಧಾನಮಂತ್ರಿ ಇಬ್ರಾಹಿಂ ಇವರು ಮಸೀದಿಯಲ್ಲಿ ಒಬ್ಬ ಹಿಂದೂ ಯುವಕನ ಮತಾಂತರ ಮಾಡಿರುವುದು ಈ ಅಂಶದ ಕಲ್ಪನೆ ಮಾಡಲೂ ಸಾಧ್ಯವಿಲ್ಲ, ಈ ಹಿಂದೆ ಯಾವುದೇ ಪ್ರಧಾನಮಂತ್ರಿಗಳು ಮಾಡಿರಲಿಲ್ಲ. ಹಿಂದೂ ಯುವಕನ ಮತಾಂತರ ಮಾಡುವುದು ಅವರಿಗೆ ಏಕೆ ಅವಶ್ಯಕ ಎನಿಸಿದೆ ? ಅದರಲ್ಲಿ ಅವರಿಗೆ ಏನು ವಿಶೇಷವಾಗಿದೆ ? ಪ್ರಧಾನಮಂತ್ರಿಯವರು ಈ ದೇಶದಲ್ಲಿ ಇಸ್ಲಾಂ ಮತ್ತು ಇತರ ಧರ್ಮಗಳು ಒಟ್ಟಾಗಿರಲು ಸಾಧ್ಯವಿಲ್ಲ ? ಎಂಬುದು ತೋರಿಸುವವರಿದ್ದಾರೆಯೇ ? ಮತಾಂತರದ ಮೂಲಕ ಇತರ ಧರ್ಮದವರನ್ನು ಹೊರ ಹಾಕುವ ಪ್ರಯತ್ನವಾಗಿದೆಯೆ ?”

ಸಂಪಾದಕೀಯ ನಿಲುವು

ಇಂತಹ ವಾರ್ತೆ ಭಾರತದಲ್ಲಿನ ಪ್ರಸಾರ ಮಾಧ್ಯಮಗಳು ಮುಚ್ಚಿ ಹಾಕುತ್ತವೆ ಮತ್ತು ಜಾತ್ಯತೀತರು ಇದರ ಬಗ್ಗೆ ಮೌನ ವಹಿಸುತ್ತಾರೆ, ಇದನ್ನು ತಿಳಿದುಕೊಳ್ಳಿ !

ಇಸ್ಲಾಂ ದೇಶದಲ್ಲಿ ಹಿಂದುಗಳ ಮತಾಂತರ ಮಾಡಲಾಗುತ್ತದೆ, ಹಿಂದೂ ಮಹಿಳೆಯರ ಅಪಹರಣ ಮಾಡಿ ಬಲಾತ್ಕಾರ ಮಾಡಲಾಗುತ್ತದೆ ಹಾಗೂ ಹಿಂದುಗಳ ದೇವಸ್ಥಾನಗಳನ್ನು ನೆಲಸಮ ಮಾಡಲಾಗುತ್ತದೆ, ಆದರೂ ಈ ವಿಷಯದ ಬಗ್ಗೆ ಜಗತ್ತಿನಲ್ಲಿನ ಜಾತ್ಯತೀತರು, ಪ್ರಗತಿ(ಅಧೋಗತಿ) ಪರರು ಹಾಗೂ ಇಸ್ಲಾಮಿ ದೇಶದ ಸಂಘಟನೆಗಳು ಎಂದು ಮಾತನಾಡುವುದಿಲ್ಲ; ಆದರೆ ಭಾರತದಲ್ಲಿ ಯಾವುದಾದರೂ ಮುಸಲ್ಮಾನನ ಮೇಲೆ ತಥಾಕಥಿತ ಅತ್ಯಾಚಾರ ನಡೆದರೆ, ಇದೇ ಜನರು ಆಕಾಶ ಪಾತಾಳ ಒಂದು ಮಾಡಿ ಹಿಂದುಗಳನ್ನು ತಾಲಿಬಾನಿಗಳನ್ನುತಾರೆ !