ಶ್ರೀಕೃಷ್ಣನ ಈ ವಿಷಯಗಳನ್ನು ನೀವು ಕೇಳಿದ್ದೀರಾ ?

ಶ್ರೀಕೃಷ್ಣನ ರಥದ ಹೆಸರು ‘ಗರುಡಧ್ವಜ’ ಎಂದು ಮತ್ತು ಆ ರಥದ ಸಾರಥಿಯ ಹೆಸರು ‘ದಾರುಕ\ಬಾಹುಕ’ ಎಂದಾಗಿತ್ತು.

‘ಶಾರಂಗ’ವು ಶ್ರೀಕೃಷ್ಣನ ಬಿಲ್ಲಿನ ಹೆಸರಾಗಿದ್ದು ‘ಸುದರ್ಶನ ಚಕ್ರ’ವು ಅವನ ಪ್ರಮುಖ ಆಯುಧವಾಗಿತ್ತು. ಆ ಚಕ್ರವು ಅಲೌಕಿಕ, ದಿವ್ಯಾಸ್ತ್ರ ಮತ್ತು ದೇವಾಸ್ತ್ರ ಈ ಮೂರೂ ರೂಪಗಳಲ್ಲಿ ಕಾರ್ಯ ಮಾಡುತ್ತಿತ್ತು. ಶ್ರೀಕೃಷ್ಣನ ಹತ್ತಿರ ತುಲ್ಯಬಲ ಮತ್ತು ವಿಧ್ವಂಸಕವಾದಂತಹ ಇನ್ನೆರೆಡು ಅಸ್ತ್ರಗಳಿದ್ದವು, ಅವುಗಳೆಂದರೆ ಪಾಶುಪತಾಸ್ತ್ರ (ಇದು ಕೇವಲ ಶಿವ, ಶ್ರೀಕೃಷ್ಣ ಮತ್ತು ಅರ್ಜುನನ ಹತ್ತಿರ ಇತ್ತು) ಮತ್ತು ಪ್ರಸ್ವಪಾಸ್ತ್ರ (ಇದು ಕೇವಲ ಶಿವ, ವಸುಗಣ, ಭೀಷ್ಮ ಮತ್ತು ಶ್ರೀಕೃಷ್ಣನ ಹತ್ತಿರ ಇತ್ತು.)

ಶ್ರೀಕೃಷ್ಣನ ಖಡ್ಗದ ಹೆಸರು ‘ನಂದಕ’, ಗದೆಯ ಹೆಸರು ‘ಕೌಮುದಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು. ಆ ಶಂಖವು ಪಾಟಲಿವರ್ಣದಾಗಿತ್ತು. (ಗುಲಾಬಿ ಬಣ್ಣ)

ಶ್ರೀಕೃಷ್ಣನ ಜನ್ಮದ ನಂತರ ಅವನ ಸ್ಥಾನದಲ್ಲಿ ಕಾರಾವಾಸದಲ್ಲಿದ್ದ ಯಶೋದೆಯ ಪುತ್ರಿಯ ಹೆಸರು ‘ಯೋಗಮಾಯಾ’ ಎಂದಾಗಿತ್ತು, ಅವಳನ್ನೇ ಈಗ ‘ವಿಂಧ್ಯವಾಸಿನಿದೇವಿ’ ಎಂಬ ಹೆಸರಿನಿಂದ ಪೂಜಿಸುತ್ತಾರೆ.

‘ಏಕಾನಂಗಾ’ ಅಥವಾ ‘ಏಕಾಂಗಾ’ ಯಶೋದೆಯ ಈ ಪುತ್ರಿಯು ಶ್ರೀಕೃಷ್ಣನು ಗೋಕುಲ ಬಿಟ್ಟು ಮಥುರೆಗೆ ಹೋದ ನಂತರದ ಶ್ರೀಕೃಷ್ಣನ ಸಹೋದರಿಯಾಗಿದ್ದಾಳೆ.

(ಸಂದರ್ಭ : ಮಾಸಿಕ ‘ವೈದಿಕ ಉಪಾಸನಾ’, ೧೬ ಆಗಸ್ಟ್ ರಿಂದ ೧೪ ಸಪ್ಟೆಂಬರ ೨೦೧೯)

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥ ಗಳಲ್ಲಿ ಉಲ್ಲೇಖವಿದೆ.

ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚ ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿ ಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಸಾಮಾನ್ಯ ಕಣ್ಣಿಗೆ ಕಾಣದಂತಹವುಗಳು ಅವರಿಗೆ ಸೂಕ್ಷ್ಮದಲ್ಲಿ ಗೋಚರಿಸುತ್ತವೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದ ನಾದ ಅಥವಾ ಶಬ್ದಗಳು ಕೇಳಿಸುತ್ತವೆ.