ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯರ ದೇಶದ್ರೋಹಿ ಹೇಳಿಕೆ !
ರಾಯಬರೇಲಿ (ಉತ್ತರ ಪ್ರದೇಶ) – ಹಿಂದೂ ರಾಷ್ಟ್ರವಾಗಬಹುದಾದರೆ, ಖಲಿಸ್ತಾನ್ ಏಕೆ ಆಗಬಾರದು? ಬೇರೆ ಧರ್ಮಗಳ ಆಧಾರದಲ್ಲಿ ದೇಶ ವಿಭಜನೆಯಾಗುತ್ತದೆ. ಇದಕ್ಕಾಗಿಯೇ ದೊಡ್ಡ ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಲು ಸಂವಿಧಾನದ ಪ್ರಕಾರ ಭಾರತವು ಜಾತ್ಯತೀತವಾಗಿ ಉಳಿಯಲು ಅವಕಾಶ ನೀಡುವುದು ಸರಿ ಇದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದರು. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಹಿಂದೂ ರಾಷ್ಟ್ರದ ಕುರಿತು ಹೇಳಿಕೆಗೆ ಅವರು ಈ ಮೇಲಿನ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಸ್ವಾಮಿ ಪ್ರಸಾದ್ ಮೌರ್ಯರು ಶ್ರೀ ರಾಮಚರಿತಮಾನಸವನ್ನು ಟೀಕಿಸಿದ್ದರು. ಇದರಲ್ಲಿನ ಕೆಲವು ಸಾಲುಗಳನ್ನು ತೆಗೆದುಹಾಕಲು ಒತ್ತಾಯಿಸಿದ್ದರು. ಆ ವೇಳೆ ವಾದ ವಿವಾದ ನಡೆದಿತ್ತು. (ಆಗಲೇ ಮೌರ್ಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಈಗ ದೇಶದ್ರೋಹಿ ಹೇಳಿಕೆ ನೀಡುವ ಧೈರ್ಯ ಬರುತ್ತಿರಲಿಲ್ಲ. ಈಗಲಾದರೂ ಆತನ ವಿರುದ್ಧ ಕ್ರಮಕೈಗೊಳ್ಳುವ ಆವಶ್ಯಕತೆಯಿದೆ ! – ಸಂಪಾದಕರು)
(ಸೌಜನ್ಯ : TV9 Bharatvarsh)
ಸಂಪಾದಕರ ನಿಲುವು* ಖಲಿಸ್ತಾನದ ಬೇಡಿಕೆ ಭಾರತದಿಂದ ಬೇರ್ಪಟ್ಟು ಸ್ವತಂತ್ರ ದೇಶವನ್ನು ನಿರ್ಮಿಸುವುದಾಗಿದೆ. ಆದರೆ ಹಿಂದೂ ರಾಷ್ಟ್ರದ ಬೇಡಿಕೆಯು ಸಂವಿಧಾನದ ಅಡಿಯಲ್ಲಿ ಮಾಡಲಾದ ಬೇಡಿಕೆಯಾಗಿದೆ. ಆದರೂ ಈ ರೀತಿಯ ತುಲನೆಯನ್ನು ಮಾಡುವ ಮೂಲಕ ಮೌರ್ಯರು ತಮ್ಮ ಬೌದ್ಧಿಕ ದಿವಾಳಿತನದ ಜೊತೆಗೆ ತನ್ನ ದೇಶದ್ರೋಹಿ ಮನಸ್ಥಿತಿಯನ್ನು ತೋರಿಸಿದ್ದಾರೆ. ಇಂತಹವರನ್ನು ನ್ಯಾಯೋಚಿತವಾಗಿ ವಿರೋಧಿಸಬೇಕು ! |