ಜಗತ್ತಿನಲ್ಲೇ 2 ನೇ ಎಲ್ಲಕ್ಕಿಂತ ಬೃಹತ್ ಅರ್ಥ ವ್ಯವಸ್ಥೆ ಇರುವ ಚೀನಾ ಗಂಭೀರವಾದ ಆರ್ಥಿಕ ಸಂಕಷ್ಟದಲ್ಲಿ ! – ತಜ್ಞರ ಅಭಿಪ್ರಾಯ

ಸೋವಿಯತ್ ಯೂನಿಯನ ಹಾಗೆ ವಿಭಜನೆ ಆಗುವ ಸಾಧ್ಯತೆಯ !

ಬೀಜಿಂಗ್ (ಚೀನಾ) – ಜಗತ್ತಿನಲ್ಲೇ 2 ನೇ ಬೃಹತ್ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಚೀನಾ ಪ್ರಸ್ತುತ ನಿರುದ್ಯೋಗ ಮತ್ತು ಕುಸಿಯುತ್ತಿರುವ ಅರ್ಥ ವ್ಯವಸ್ಥೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ೪೦ ವರ್ಷಗಳ ಹಿಂದೆ ಯಾವ ರೀತಿಯಲ್ಲಿ ಸೋವಿಯತ ಯೂನಿಯನ್ ಗಂಭೀರ ಪರಿಸ್ಥಿತಿ ಎದುರಿಸಿ ಅದು ವಿಭಜನೆ ಆಗಿತ್ತು. ಅದೇ ರೀತಿ ಚೀನಾದ ಸಂದರ್ಭದಲ್ಲಿ ಕೂಡ ಆಗಬಹುದೆಂದು ಎಂದು ಕೆಲವು ಜನರ ಹೇಳಿಕೆ ಆಗಿದೆ.

೧. ತಜ್ಞರ ಅಭಿಪ್ರಾಯ, ಕಳೆದ ಕೆಲವು ಸಮಯದಿಂದ ಚೀನಾದ ಕರೆನ್ಸಿ ಯುವಾನ್ ನ ಮೌಲ್ಯ ಕುಸಿದಿದೆ.

೨. ಬ್ರಿಟಿಷ ವಾರ್ತಾ ಪತ್ರಿಕೆ ‘ದೀ ಗಾರ್ಡಿಯನ್’ ನಲ್ಲಿ ಅರ್ಥ ವ್ಯವಸ್ಥೆಯ ಕುರಿತು ತಜ್ಞರಾಗಿರುವ ಲಾರಿ ಇಲಿಯಟ್ ಇವರು, ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಸಂರಚನಾತ್ಮಕ ಆರ್ಥಿಕ ಪರಿವರ್ತನೆ ಮಾಡುವುದರ ಅವಶ್ಯಕತೆ ತುಂಬಾ ಇದೆ. ಹಾಗೂ ಇಲ್ಲಿಯ ಕಠಿಣ ರಾಜಕೀಯ ಹಿಡಿತ ಕೂಡ ಸಡಿಲಗೊಳಿಸಬೇಕು. ಚೀನಾದ ರಾಷ್ಟ್ರಪತಿ ಶೀ ಜಿಂಪಿಂಗ್ ಇವರ ವ್ಯಕ್ತಿತ್ವ ಶಕ್ತಿಶಾಲಿ ಆಗಿದ್ದರು ಅವರು ಸ್ವತಂತ್ರ ಮತ್ತು ಪ್ರಜಾಪ್ರಭುತ್ವಕ್ಕೆ ಯಾವುದೇ ಸ್ಥಾನ ನೀಡಲು ಸಿದ್ದರಿಲ್ಲ. ಆದ್ದರಿಂದ ಇಂದಿಲ್ಲ ನಾಳೆ ಚೀನಾ ಸೋವಿಯತ್ ಯೂನಿಯನ್ ಮಾರ್ಗದಲ್ಲಿಯೇ ಸಾಗುತ್ತಿದೆ. ಇದು ಬಹಳ ಕಷ್ಟಕರವಾಗಿದೆ. ಚೀನಾದ ತುಲನೆಯಲ್ಲಿ ಸೋವಿಯತ್ ಯೂನಿಯನ್ ಅರ್ಥ ವ್ಯವಸ್ಥೆ ಬಹಳ ಚಿಕ್ಕದಾಗಿತ್ತು ಎಂದು ಹೇಳಿದರು.

೩. ಈ ಮಧ್ಯೆ ‘ಬಿಸಿಎ ರಿಸರ್ಚ್’ ನ ದವಲ ಜೋಷಿ ಇವರ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಅದರ ಪ್ರಕಾರ ಚೀನಾ ಕಳೆದ ೧೦ ವರ್ಷಗಳಲ್ಲಿ ಬಹಳಷ್ಟು ವೃದ್ಧಿ ಮಾಡಿದ್ದು ಜಗತ್ತಿನ ಒಟ್ಟು ಅರ್ಥ ವ್ಯವಸ್ಥೆಯ ಹೆಚ್ಚಳದಲ್ಲಿ ಚೀನಾದ ಶೇಕಡಾ ೪೧ ರಷ್ಟು ಕೊಡುಗೆ ಅದರದ್ದಾಗಿತ್ತು. ಇದು ಅಮೆರಿಕಾದ ಶೇಕಡ ೨೨ ರಷ್ಟು ಕೊಡಗೆ ಕಿಂತಲೂ ಹೆಚ್ಚು ಕಡಿಮೆ ಎರಡರಷ್ಟು ಇದೆ. ಸಂಪೂರ್ಣ ಯುರೋಪಿನ ಕೊಡಿಗೆ ಕೇವಲ ಶೇಕಡ ೯ ರಷ್ಟು ಇತ್ತು.

೪. ಇಲಿಯಟ್ ಇವರ ಅಭಿಪ್ರಾಯ ‘ಕೋವಿಡ್ ೧೯’ ಮಹಾಮಾರಿಯ ಅಂತರ್ಗತ ವಿಧಿಸಲಾದ ಸಂಚಾರ ನಿಷೇಧದಿಂದ ಚೀನಾದ ಅರ್ಥ ವ್ಯವಸ್ಥೆ ಕುಸಿದಿದೆ, ಎಂದು ಹೇಳಲಾಗುವುದಿಲ್ಲ. ಅರ್ಥ ವ್ಯವಸ್ಥೆಯಲ್ಲಿನ ಕುಸಿತ ಮೊದಲಿಂದಲೇ ಆರಂಭವಾಗಿತ್ತು.

೫. ‘ಪೀಟರ್ಸನ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಕನಾಮಿಕ್ಸ್’ನ ಅಧ್ಯಕ್ಷ ಏಡಮ್ ಪೋಸೆನ್ ಇವರು, ಚೀನಾ ಕಳೆದ ದಶಕದ ಮಧ್ಯದಿಂದಲೇ ‘ಬೃಹತ್ ಆರ್ಥಿಕ ಕೋವಿಡ್’ಗೆ ಬಲಿಯಾಗಿತ್ತು ಎಂದು ಹೇಳಿದರು.