ವಿದೇಶದಲ್ಲಿ ಹಿಂದುತ್ವದ ಜೈಕಾರ !

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಥಾವಾಚಕ ಮೊರಾರಿ ಬಾಪು ಅವರ ರಾಮಕಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ‘ಜೈ ಸಿಯಾರಾಮ್’ ಜಯಘೋಷದ ಮೂಲಕ ಭಾಷಣ ಆರಂಭಿಸಿದ ಅವರು, ‘ನಾನು ಇಲ್ಲಿಗೆ ಬ್ರಿಟನ್ ಪ್ರಧಾನಿಯಾಗಿ ಅಲ್ಲ, ಹಿಂದೂವಾಗಿ ಬಂದಿದ್ದೇನೆ. ನಾನು ಬ್ರಿಟಿಷನಾಗಿರುವುದರ ಜೊತೆಗೆ ಹಿಂದೂ ಆಗಿದ್ದಕ್ಕೂ ಹೆಮ್ಮೆಪಡುತ್ತೇನೆ. ನನ್ನ ಕುಟುಂಬದವರು ಹವನ, ಪೂಜೆ ಮತ್ತು ಆರತಿ ಮಾಡುತ್ತಾರೆ. ನಾನು ರಾಮಾಯಣ, ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾ ಓದುತ್ತೇನೆ. ನನ್ನ ಕಛೇರಿಯ ಮೇಜಿನ ಮೇಲೆ ಶ್ರೀ ಗಣೇಶನ ಚಿನ್ನದ ವಿಗ್ರಹವಿದೆ. ನಾನು ಯಾವುದೇ ಕೆಲಸ ಮಾಡುವ ಮೊದಲು ಶ್ರೀ ಗಣೇಶನು ನನಗೆ ಕೇಳಲು ಮತ್ತು ಯೋಚಿಸಲು ಕಲಿಸುತ್ತಾನೆ’, ಎಂದಿದ್ದಾರೆ. ‘ಭಾರತದ ಎಷ್ಟು ಹಿಂದೂ ಜನಪ್ರತಿನಿಧಿಗಳು ರಿಷಿ ಸುನಕ್ ಅವರಂತೆ ಇದನ್ನು ಬಹಿರಂಗವಾಗಿ ಹೇಳುತ್ತಾರೆ? ಎಷ್ಟು ಜನಪ್ರತಿನಿಧಿಗಳು ತಾವು ಹಿಂದೂ ಎಂದು ಹೆಮ್ಮೆಪಡುತ್ತಾರೆ? ಮತ್ತೊಂದೆಡೆ, ಇತರ ಧರ್ಮಗಳ ಜನಪ್ರತಿನಿಧಿಗಳು ತಮ್ಮ ಶ್ರದ್ಧೆಯ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ ಮತ್ತು ಅವರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅವರ ಧಾರ್ಮಿಕ ನಂಬಿಕೆಗಳಿಂದಾಗಿ ಅವರಿಗೆ ದೊರೆತ ಸ್ಥಾನ, ಪ್ರತಿಷ್ಠೆ ಎಂದೂ ಹೇಳುತ್ತಾರೆ.

ಭಗವಾನ್ ಶ್ರೀರಾಮನು ಪ್ರೇರಣಾಸ್ಥಾನ

ಸುನಕ್ ಅವರ ಪೂರ್ವಜರು ಭಾರತದಿಂದ ಆಫ್ರಿಕಾಕ್ಕೆ ವಲಸೆ ಬಂದರು. ಭಾರತದಿಂದ ದೂರ ಸರಿದ ನಂತರವೂ ಅವರು ತಮ್ಮ ಹಿಂದೂ ಮೌಲ್ಯಗಳನ್ನು ಮರೆಯಲಿಲ್ಲ. ‘ನಾನು ಬ್ರಿಟನ್‌ನಲ್ಲಿ ‘ಚಾನ್ಸ್.ಲರ್’ ಆದಾಗಿನಿಂದಲೂ ದೀಪಾವಳಿ ಮತ್ತಿತರ ಹಬ್ಬಗಳನ್ನು ಆಚರಿಸುತ್ತೇನೆ’ ಎಂದು ಋಷಿ ಸುನಕ ಹೇಳಿದರು. ಕಥಾವಾಚಕ ಮೊರಾರಿ ಬಾಪು ಇವರು ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ‘ನಮ್ಮ ಪೀಳಿಗೆಗೆ ಜ್ಞಾನ ನೀಡಲು ನೀವು ಪ್ರಯತ್ನಿಸುತ್ತಿದ್ದೀರಿ. ಈ ಹಿಂದೂ ಮೌಲ್ಯಗಳೇ ನನ್ನನ್ನು ಮತ್ತು ನನ್ನಂತಹ ಇತರರನ್ನು ಪೋಷಿಸುತ್ತವೆ. ಈಗ ಈ ಉಪಕಾರಗಳನ್ನು ಪೀಳಿಗೆಯ ಮೇಲೆ ತೀರಿಸುವುದು ನನ್ನ ಜವಾಬ್ದಾರಿಯಾಗಿದೆ. ನನಗೆ ಭಗವಾನ್ ಶ್ರೀರಾಮ ಸ್ಫೂರ್ತಿಯ ಮೂಲವಾಗಿದ್ದಾರೆ. ಜೀವನದಲ್ಲಿ ತೊಂದರೆಗಳನ್ನು ಮೆಟ್ಟಿನಿಲ್ಲಲು, ಮಾನವೀಯತೆಯಿಂದ ಆಡಳಿತ ನಡೆಸಲು, ನಿಸ್ವಾರ್ಥವಾಗಿ ಕೆಲಸ ಮಾಡಲು ಅವರು ಆದರ್ಶರಾಗಿದ್ದಾರೆ. ನಿಮ್ಮ ಗ್ರಂಥಗಳಲ್ಲಿ ನೀಡಿರುವಂತೆ ನಾನು ನೇತೃತ್ವವನ್ನು ವಹಿಸಲು ಪ್ರಯತ್ನಿಸುತ್ತಿದ್ದೇನೆ. ಹಿಂದೂ ಸಂಸ್ಕೃತಿ, ಸಭ್ಯತೆ ಮತ್ತು ಮೌಲ್ಯಗಳ ಬಗ್ಗೆ ನಮ್ಮಲ್ಲಿನ ಒಬ್ಬನೇ ಒಬ್ಬ ನಾಯಕನು ಹೀಗೆ ದಿಟ್ಟವಾಗಿ ಹೇಳಲು ಏಕೆ ಪ್ರಯತ್ನಿಸಲಿಲ್ಲ ? ಇದರ ಬಗ್ಗೆ ಚಿಂತನೆ ಮಾಡುವ ಆವಶ್ಯಕವಾಗಿದೆ.

ಜಾತ್ಯತೀತ ಭಾರತೀಯರು

ವೈವಿಧ್ಯತೆ, ಬಹುಭಾಷೆಗಳು, ಕಲೆಗಳು, ಪ್ರಾಂತ್ಯಗಳು, ಸಂಸ್ಕೃತಿಗಳಿಂದ ಕೂಡಿದ ಅಖಂಡ ಭಾರತದ ಮೇಲೆ ಬ್ರಿಟನ್ ಆಳ್ವಿಕೆ ನಡೆಸಿತು. ಆ ಸಮಯದಲ್ಲಿ ಬ್ರಿಟಿಷರು ರಾಜ್ಯವನ್ನು ವಿಸ್ತರಿಸಲು ಮತ್ತು ರಾಜ್ಯವನ್ನು ಉಳಿಸಿಕೊಳ್ಳಲು ಹಿಂದೂ ಸಂಸ್ಕೃತಿ ಮತ್ತು ಗುರುಕುಲ ಶಿಕ್ಷಣ ಪದ್ಧತಿಯನ್ನು ದೊಡ್ಡ ಅಡಚಣೆಯಾಗಿ ಅಂದುಕೊಂಡರು. ಆ ಕಾರಣದಿಂದ, ಬ್ರಿಟಿಷರು ನಿಯೋಜಿತವಾಗಿ ಹಿಂದೂ ಸಂಸ್ಲೃತಿಯ ಜ್ಞಾನ ನೀಡುವ ಈ ಗುರುಕುಲಗಳನ್ನು ಭಾರತದಿಂದ ಹಂತಹಂತವಾಗಿ ಮುಚ್ಚಿದರು ಮತ್ತು ಭಾರತೀಯರ ಸಂಸ್ಕೃತಿಯ ಕೊಂಡಿಯನ್ನೇ ಕತ್ತರಿಸಿದರು. ಹಿಂದೂ ನಾಗರಿಕತೆ ಮತ್ತು ಮೌಲ್ಯಗಳನ್ನು ಮರೆತಿದ್ದ ಭಾರತೀಯರು ಬ್ರಿಟಿಷರಿಗೆ ಅಪೇಕ್ಷೆಯಂತೆ ಅನುಸರಿಸಿದರು ಮತ್ತು ಸಾಂಸ್ಕೃತಿಕವಾಗಿ ಸೈದ್ಧಾಂತಿಕ ಮತಾಂತರದಿಂದ ‘ಜಾತ್ಯತೀತ’ ಎಂಬ ಬಿರುದನ್ನು ಹೆಮ್ಮೆಯಿಂದ ಅನ್ವಯಿಸಿಕೊಂಡರು. ಇಂದು ಭಾರತದಲ್ಲಿ ಲಕ್ಷಾಂತರ ಸಾಮಾನ್ಯ ಹಿಂದೂಗಳು ತಮ್ಮ ಧರ್ಮದ ಪ್ರಕಾರ ನಡೆದುಕೊಳ್ಳುತ್ತಾರೆ, ಹಬ್ಬಗಳನ್ನು ಆಚರಿಸುತ್ತಾರೆ; ಆದರೆ ಧರ್ಮಕ್ಕೆ ರಾಜಾಶ್ರಯವಿಲ್ಲ. ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರೂ ಅವರು ‘ನಾನು ಆಕಸ್ಮಿಕವಾಗಿ ಹಿಂದೂ ಆಗಿದ್ದೇನೆ’ ಎಂದು ಹೇಳಿದ್ದರು. ಅವರು ಮತ್ತು ನಂತರದ ಕಾಂಗ್ರೆಸ್ ಆಡಳಿತಗಾರರು ಮೊಘಲರಂತೆ ಹಿಂದೂ ಬಹುಸಂಖ್ಯಾತ ಭಾರತವನ್ನು ಆಳಿದ್ದಾರೆ. ಇದು ಹಿಂದೂಗಳ ಅವನತಿಯಿಂದ ನೋಡಬಹುದಾಗಿದೆ. ‘ಹಿಂದೂ’ ಎಂಬ ಪದವನ್ನು ಸಾರ್ವಜನಿಕವಾಗಿ ಹೇಳುವುದು ಅಪರಾಧ ಎಂಬ ವಾತಾವರಣವನ್ನು ಕಾಂಗ್ರೆಸ್ ಭಾರತದಲ್ಲಿ ಸೃಷ್ಟಿಸಿದೆ. ಅದರ ಪ್ರಭಾವ ಅನೇಕ ನಾಯಕರು, ಆಡಳಿತ ಅಧಿಕಾರಿಗಳ ಮೇಲೆ ಈಗಲೂ ಇದೆ. ಭಾರತದಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಅಧಿಕಾರಕ್ಕೆ ಬಂದಿತು. ಆಗ ಒಂದು ದಿನಪತ್ರಿಕೆಯಲ್ಲಿ, ೮೦೦ ವರ್ಷಗಳ ನಂತರ ಹಿಂದೂ ಶಾಸಕರೊಬ್ಬರು ಅಧಿಕಾರಕ್ಕೆ ಬಂದರು ಎಂದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮಂತ್ರಿಯೊಬ್ಬರು ಭಾಷಣದಲ್ಲಿ ಹೇಳಿದರೆಂಬ ವರದಿ ಬಂದಿತ್ತು. ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ಸಂಬಂಧಪಟ್ಟ ಸಚಿವರು, ‘ನಾನು ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಯಾರಾದರೂ ನನ್ನ ಮೇಲೆ ಈ ರೀತಿ ಆರೋಪ ಮಾಡಿದರೆ ನಾನು ಕೆಲಸ ಮಾಡಲು ಸಾಧ್ಯವಿಲ್ಲ,” ಎಂದು ಹೇಳಿದರು. ಆದರೆ ಅವರಿಗೆ ಮನವರಿಕೆ ಮಾಡಿಕೊಡಲು ಇಂತಹ ತೀವ್ರ ನಿಲುವು ತೆಗೆದುಕೊಳ್ಳುವ ಅಗತ್ಯವಿತ್ತೇ ? ಬಹುಸಂಖ್ಯಾತ ಹಿಂದೂಗಳು ತಮ್ಮ ದೇಶದಲ್ಲಿ ಹಿಂದೂ ಧರ್ಮದ ಬಗ್ಗೆ ಹೆಮ್ಮೆಪಡುವ ಮತ್ತು ಅದನ್ನು ಗೌರವಿಸುವ ಆಡಳಿತಗಾರನನ್ನು ಹೊಂದಲು ಸಂತೋಷಪಡುತ್ತಾರೆ; ಆದರೆ ಇಲ್ಲಿನ ವಿಪರ್ಯಾಸವೆಂದರೆ ಬಹುತೇಕ ರಾಜಕಾರಣಿಗಳು ಸಾರ್ವಜನಿಕವಾಗಿ ಹಿಂದೂಗಳೆಂದು ಗುರುತಿಸಿಕೊಳ್ಳಲು ಸಿದ್ಧರಿಲ್ಲ. ‘ಜಾತ್ಯತೀತರು’ ಎಂದು ಕರೆದುಕೊಳ್ಳುವ, ಹಿಂದೂಗಳೆಂದೇ ನಾಚಿಕೆಪಡುವ, ಹಿಂದೂ ಧರ್ಮವನ್ನು ಟೀಕಿಸುವ, ಹಿಂದೂಗಳನ್ನು ‘ಹಿಂದುಳಿದ’ ಎನ್ನುವ ಬಹುತೇಕ ಹಿಂದೂಪ್ರತಿನಿಧಿಗಳು ಧಾರ್ಮಿಕ ಆಚರಣೆ, ಹಬ್ಬ ಹರಿದಿನ, ಉಪವಾಸ ಆಚರಿಸುವುದು ಅಷ್ಟೇ ಸತ್ಯವಾಗಿದೆ. ಈ ಜನಪ್ರತಿನಿಧಿಗಳಿಗೆ ಸಂತರ ಆಶೀರ್ವಾದ, ಹಿಂದೂಗಳ ಮತ, ಹಿಂದೂಗಳ ಬೆಂಬಲ ಬೇಕು; ಆದರೆ ಅವರು ಹಿಂದೂಗಳು ಎಂದು ಕರೆಯಲು ಬಯಸುವುದಿಲ್ಲ ಅಥವಾ ಅವರ ಮುಂದೆ ಯಾರೂ ಹಿಂದುತ್ವದ ಬಗ್ಗೆ ಹೆಮ್ಮೆಪಡುವುದು ಬೇಕಾಗಿರುವುದಿಲ್ಲ. ಯಾರಾದರೂ ಹಿಂದುತ್ವದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ, ಇದೇ ಜನರು ಅವರನ್ನು ‘ಮತಾಂಧರು’ ಎಂದು ಅಪಹಾಸ್ಯ ಮಾಡುತ್ತಾರೆ. ಈ ಜನರು ವಿದೇಶಕ್ಕೆ ಹೋದಾಗ, ಭಾರತ ಮತ್ತು ಸ್ವತಃ ‘ಸೆಕ್ಯುಲರ್’ ಎಂದು ಹೇಳಲು ಹೆಮ್ಮೆಪಡುತ್ತಾರೆ. ಹಿಂದೂ ಧರ್ಮವನ್ನು ಎಲ್ಲರೂ ತಮಾಷೆ ಮಾಡುತ್ತಾರೆ, ಅಪಹಾಸ್ಯ ಮಾಡುತ್ತಾರೆ ಮತ್ತು ಗೇಲಿ ಮಾಡುತ್ತಾರೆ. ಜಾಹೀರಾತುಗಳು, ಟಿವಿ ಧಾರಾವಾಹಿಗಳು, ಚಲನಚಿತ್ರಗಳು, ಸಾಹಿತ್ಯ, ಕವಿತೆ, ವಿಚಾರ ಸಂಕಿರಣಗಳ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಲಾಗುತ್ತದೆ ಮತ್ತು ಮುಖ್ಯ ವಿಷಯವೆಂದರೆ ’ಈ ಅಪಮಾನ ನಿಲ್ಲಿಸಬೇಕು’ ಎಂದು ಕೆಲವೇ ಹಿಂದೂಗಳನ್ನು ಹೊರತುಪಡಿಸಿ, ಇತರರಿಗೆ ಏನೂ ಅನಿಸುವುದಿಲ್ಲ. ‘ಹಿಂದೂ ಧರ್ಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ಧರ್ಮವು ಸಮಾಜ ಮತ್ತು ರಾಷ್ಟ್ರವನ್ನು ವ್ಯಾಪಿಸಿದೆ’ ಎಂದು ಯಾರೂ ಜ್ಞಾನ ಕೊಡಬೇಕು ಎಂದು ಆವಶ್ಯಕತೆ ಇಲ್ಲ. ಋಷಿ ಸುನಕ್ ಇವರು, ಪ್ರಧಾನಮಂತ್ರಿಯ ಕೆಲಸ ಕಠಿಣ ಕೆಲಸವಾಗಿದೆ. ಅನೇಕ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ, ಧರ್ಮ, ಧರ್ಮಗ್ರಂಥಗಳು ನಿಮಗೆ ಶಕ್ತಿ, ಧೈರ್ಯ, ಸ್ಫೂರ್ತಿ ನೀಡುತ್ತವೆ. ಬ್ರಿಟನ್ ಪ್ರಧಾನಿಗೆ ಹಿಂದೂ ಧರ್ಮದ ಮಹತ್ವ ಮನವರಿಕೆಯಾದಾಗ ಜಾತ್ಯತೀತ ಭಾರತೀಯರಿಗೆ ಮನವರಿಕೆಯಾಗುವುದು ಯಾವಾಗ ? ಭಾರತದಲ್ಲಿನ ಹಿಂದೂ ಜನಪ್ರತಿನಿಧಿಗಳು ಮತ್ತು ಸಾಮಾನ್ಯ ಹಿಂದೂಗಳು ತಮ್ಮ ಧರ್ಮದ ಅಭಿಮಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ, ಅದುವೇ ಸುದಿನ !

ಬ್ರಿಟನ್ ಪ್ರಧಾನಿ ಅರಿತುಕೊಂಡ ಹಿಂದೂ ಧರ್ಮದ ಮಹತ್ವವನ್ನು ಭಾರತೀಯ ರಾಜಕಾರಣಿಗಳು ಮತ್ತು ಹಿಂದೂಗಳು ಯಾವಾಗ ಅರಿತುಕೊಳ್ಳುತ್ತಾರೆ ?