ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕ ಯಾಸಿನ್ ಮಲ್ಲಿಕ್ ನ ಪತ್ನಿ ಪಾಕಿಸ್ತಾನ ಸರಕಾರದ ಸಲಹಾಗಾರ್ತಿ !

ಇಸ್ಲಾಮಾಬಾದ್ (ಪಾಕಿಸ್ತಾನ) – ಕಾಶ್ಮೀರದ ಜಿಹಾದಿ ಭಯೋತ್ಪಾದಕ ಯಾಸಿನ್ ಮಲಿಕನ ಪತ್ನಿ ಮುಶಾಲಾ ಮಲಿಕಳನ್ನು ಪಾಕಿಸ್ತಾನದ ಉಸ್ತುವಾರಿ ಸರಕಾರದ ಪ್ರಧಾನಿ ಅನವರೂಲ್ ಹಕ್ ಕಕ್ಕರ್ ರವರು ಮಾನವ ಹಕ್ಕುಗಳ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ವಿಶೇಷ ಸಲಹೆಗಾರಳನ್ನಾಗಿ ನೇಮಕ ಮಾಡಿದ್ದಾರೆ. ಮುಶಾಲ ಮಲಿಕ ಪಾಕಿಸ್ತಾನದ ಪ್ರಜೆಯಾಗಿದ್ದಾಳೆ. ಯಾಸಿನ್ ಮಲಿಕ ಸಧ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾನೆ. 2009 ರಲ್ಲಿ ಇಬ್ಬರೂ ವಿವಾಹವಾದರು. ಇಬ್ಬರ ನಡುವೆ 20 ವರ್ಷಗಳ ವಯಸ್ಸಿನ ಅಂತರವಿದೆ. ಇಬ್ಬರಿಗೂ ಒಬ್ಬ ಮಗಳಿದ್ದಾಳೆ. ಮುಶಾಲ ಮಲಿಕ ಯಾವಾಗಲೂ ಭಾರತದ ವಿರುದ್ಧ ಹೇಳಿಕೆಯನ್ನು ನೀಡುತ್ತಾಳೆ. ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಷರೀಫ್ ಸರಕಾರ
ವಿಸರ್ಜನೆಯಾಗಿ ಉಸ್ತುವಾರಿ ಸರಕಾರ ರಚನೆಯಾಗಿದೆ.

ಸಂಪಾದಕೀಯ ನಿಲುವು

ಭಯೋತ್ಪಾದಕನ ಪತ್ನಿ ಪಾಕಿಸ್ತಾನದ ಸರಕಾರಕ್ಕೆ ಯಾವ ರೀತಿ ಸಲಹೆ ಕೊಡುವಳು, ಇದನ್ನು ಬೇರೆ ಹೇಳ ಬೇಕಾಗಿಲ್ಲ! ಮೂಲತಃ ಪಾಕಿಸ್ತಾನ ಒಂದು ಭಯೋತ್ಪಾದಕ ದೇಶ ಇರುವುದರಿಂದ ಅದರ ಸಲಹೆಗಾರರಿಗೂ ಅದೇ ವಿಚಾರದವರಿರುತ್ತಾರೆ !