ಭಾರತದಲ್ಲಿ ಹಿಂದೂಗಳು ಸುರಕ್ಷಿತ ಮತ್ತು ಶಾಂತಿಯುತ ಜೀವನ ನಡೆಸಲು ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದು ಆವಶ್ಯಕ !
ಆಗಸ್ಟ್ ೧೫ ರಂದು ದೇಶದ ೭೭ ನೇಯ ಸ್ವಾತಂತ್ರ್ಯ ದಿನದ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ದೇಶವಾಸಿಯರಿಗೆ ಪರಿವರ್ತನೆ ಮಾಡುವ ಆಶ್ವಾಸನೆ ನೀಡಿದರು. ಅವರು ಸಶಕ್ತ, ಭ್ರಷ್ಟಾಚಾರಮುಕ್ತ ಮತ್ತು ವಿಕಸಿತ ದೇಶದ ನಿರ್ಮಾಣದ ವಜ್ರನಿರ್ಧಾರ ವ್ಯಕ್ತಪಡಿಸಿದರು. “೨೦೪೭ ವರೆಗೆ ದೇಶವು “ವಿಕಸಿತ ರಾಷ್ಟ್ರ’ವೆಂಬ ಛಾಪು ಮೂಡಿಸಬೇಕಿದ್ದು ಅದಕ್ಕಾಗಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಈ ಮೂರು ಸೂತ್ರಗಳನ್ನು ಅವಲಂಬಿಸುವುದು ಆವಶ್ಯಕವಾಗಿದೆ. ಭ್ರಷ್ಟಾಚಾರ, ಕುಟುಂಬಶಾಹಿ ಮತ್ತು ಓಲೈಕೆ ಈ ಮೂರು ಕೆಟ್ಟ ಪ್ರವೃತ್ತಿಯಿಂದ ದೇಶದ ವಿಕಾಸ ಕುಂಠಿತವಾಗಿದೆ. ಭ್ರಷ್ಟಾಚಾರದ ಗೆದ್ದಲು ದೇಶದಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ಕೊರೆದುಬಿಟ್ಟಿದೆ. ನಿಮ್ಮ ಅಧಿಕಾರ ಕಸಿದುಕೊಂಡಿದೆ. ಈಗ ಭ್ರಷ್ಟಾಚಾರಮುಕ್ತಿಯ ಹೊಸ ಸ್ವಚ್ಛತೆಯ ಅಭಿಯಾನ ನಡೆಸಲಾಗುತ್ತಿದೆ. ನಾನು ಭ್ರಷ್ಟಾಚಾರ ನಿರ್ಮೂಲನೆಯ ವಚನ ನೀಡಿದ್ದೇನೆ. ಅದಕ್ಕಾಗಿ ನಾನು ಹೋರಾಡುತ್ತಿರುವೆನು”, ಎಂದು ಮೋದಿ ಅವರು ಹೇಳಿದರು.
ರಾಜಕಾರಣದ ಅಧ್ಯಾತ್ಮಿಕರಣ ಆವಶ್ಯಕ !
ನರೇಂದ್ರ ಮೋದಿ ಇವರು ದೇಶದ ವಿಕಾಸಕ್ಕಾಗಿ ಮೇಲಿನ ರೀತಿಯಲ್ಲಿನ ಮಾಡಿದ ಸಂಕಲ್ಪ ನಿಶ್ಚಿತವಾಗಿಯೂ ಶ್ಲಾಘನೀಯವಾಗಿದೆ. ಆದರೆ ಇಲ್ಲಿಯ ವರೆಗೆ ಯಾವೆಲ್ಲ ದೇಶಗಳು ವೈಜ್ಞಾನಿಕ ಮತ್ತು ಭೌತಿಕತೆಯ ಆಧಾರದಲ್ಲಿ ದೇಶದ ಪ್ರಗತಿ ಮಾಡಲು ಪ್ರಯತ್ನ ಮಾಡುತ್ತಿದ್ದವೋ ಅಂತಹ ಬಹಳಷ್ಟು ದೇಶಗಳಲ್ಲಿ ಭ್ರಷ್ಟಾಚಾರ, ಕುಟುಂಬಶಾಹಿ, ವರ್ಣಭೇದ ನೀತಿ ಇಂತಹ ವಿವಿಧ ಕಾರಣಗಳಿಂದ ದೇಶದ ನಿಜವಾದ ಅರ್ಥದಲ್ಲಿ ವಿಕಾಸ ಮಾಡಲು ಸಾಧ್ಯವಾಗಲಿಲ್ಲ. ಅನೇಕ ದೇಶಗಳಲ್ಲಿ ಭ್ರಷ್ಟಾಚಾರ ಮತ್ತು ಅಪರಾಧದ ವಿರುದ್ಧ ಕಠಿಣ ಕಾನೂನುಗಳಿದ್ದರೂ ಈ ಘಟನೆಗಳು ಕಡಿಮೆ ಆಗಲಿಲ್ಲ. ತದ್ವಿರುದ್ಧ ಅಪರಾಧ ಮತ್ತು ಭ್ರಷ್ಟಾಚಾರಗಳ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗುತ್ತಿದೆ. ವಿದೇಶದಲ್ಲಿ ಹಾಡುಹಗಲೇ ಶಾಲಾ ಮಕ್ಕಳು, ಮಾಲ್‌ಗಳಲ್ಲಿನ ಜನರು ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಗುಂಡಿನ ದಾಳಿ ಮತ್ತು ಚಾಕು ಇರಿತದ ದಾಳಿಗಳು ನಡೆಸಿ ಜನರನ್ನು ಮತ್ತು ಚಿಕ್ಕ ಮಕ್ಕಳ ಹತ್ಯೆ ಮಾಡುತ್ತಾರೆ. ಆದ್ದರಿಂದ ಇಂತಹ ವಿವಿಧ ಕಾರಣಗಳನ್ನು ಹುಡುಕಿದ್ದರೆ ಸಮಾಜದ ರಾಜಕಿಯಕರಣ ಮತ್ತು ಸಮಾಜಿಕರಣ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಆದರೆ ಸಮಾಜ ಮತ್ತು ರಾಜಕಾರಣದ ಆಧ್ಯಾತ್ಮಿಕರಣ ಆಗದೇ ಇರುವುದರಿಂದ ಸಮಾಜದ ನಿಜವಾದ ಪ್ರಗತಿ ಆಗಲಿಲ್ಲ, ಆದರೆ ಸಮಾಜ ದಿಶಾಹೀನವಾಗಿದೆ. ಭಾರತದ ಪ್ರಗತಿ ಆಗುವುದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದು ಆವಶ್ಯಕವಾಗಿದೆ. ಅಮೇರಿಕಾ, ಜಪಾನ್, ಚೀನಾ, ಆಸ್ಟ್ರೇಲಿಯಾ, ಫ್ರಾನ್ಸ್, ಸಿಂಗಾಪುರ್, ರಷ್ಯಾ ಇಂತಹ ಅನೇಕ ದೇಶಗಳಲ್ಲಿ ವಿಜ್ಞಾನವು ಭೌತಿಕ ಸುಖವನ್ನು ಒದಗಿಸಿದೆ. ಆದರೆ ನಿಜವಾದ ಮಾನಸಿಕ ಶಾಂತಿ, ಆನಂದ ಮತ್ತು ಆನಂದಿ ಸಮಾಜವನ್ನು ದೊರಕಿಸಿದೆಯೇ? ರೋಬೋಟ್ ಹಾಗೆ ವರ್ತಿಸುವ, ಅದೇ ರೀತಿ ವಿಜ್ಞಾನವು ಮೊಬೈಲ್, ಲ್ಯಾಪ್‌ಟಾಪ್, ಟಿ.ವಿ., ವೈಜ್ಞಾನಿಕ ಉಪಕರಣಗಳು, ಸಾಮಾಜಿಕ ಜಾಲತಾಣಗಳು ಇದರ ಮೂಲಕ ಮನುಷ್ಯನ ಯಂತ್ರಿಕರಣ ಮಾಡಿದೆ. ಇಂದು ಸಮಾಜದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರ, ಸಂಸ್ಕೃತಿಯ ಅವನತಿ, ದೇವತೆಗಳ ವಿಡಂಬನೆ, ದೇವಸ್ಥಾನಗಳ ವಿದ್ವಾಂಸ, ಹಿಂದೂಗಳ ಹತ್ಯೆ ಇಂತಹ ಅನೇಕ ಘಟನೆಗಳು ಘಟಿಸುತ್ತಿವೆ. ಆದ್ದರಿಂದ ಈ ವಿಕೃತಿಯ ಸರ್ವನಾಶ ಆಗದೆ ದೇಶದ ನಿಜವಾದ ಅರ್ಥದಲ್ಲಿ ಪ್ರಗತಿ ಮಾಡಲು ಸಾಧ್ಯವಿಲ್ಲ. ಈ ವಿಕೃತಿ ನಾಶ ಮಾಡುವುದಕ್ಕಾಗಿ ಸಮಾಜದಲ್ಲಿ ಧರ್ಮ ಮತ್ತು ಅಧ್ಯಾತ್ಮದ ಪ್ರಸಾರ ಮಾಡಬೇಕು. ಸಮಾಜದಲ್ಲಿನ ಪ್ರತಿಯೊಂದು ವಿಷಯಕ್ಕೆ ಅಧ್ಯಾತ್ಮವನ್ನು ಜೋಡಿಸಬೇಕು. ಸಂಸ್ಕೃತಿಯ ಸಂವರ್ಧನೆ ಮತ್ತು ಶಿಕ್ಷಣ, ಧರ್ಮಶಿಕ್ಷಣ, ಧರ್ಮಪ್ರಸಾರ, ಸಂತರ ಸತ್ಸಂಗ, ಗುರುಕುಲ ಶಿಕ್ಷಣ ವ್ಯವಸ್ಥೆ ನಿರ್ಮಿಸಿದ ನಂತರ ಸಮಾಜದಲ್ಲಿನ ಜನರಲ್ಲಿ ಸಾತ್ವಿಕತೆ ಹೆಚ್ಚಾಗಿ ಭ್ರಷ್ಟಾಚಾರ ಮತ್ತು ಅಪರಾಧದ ಪ್ರಮಾಣ ತನ್ನಿಂದ ತಾನೇ ನಾಶವಾಗಬಹುದು. ಆದರೆ ಈ ದೃಷ್ಟಿಯಿಂದ ಇಂದಿನ ಬಹುತೇಕ ರಾಜಕೀಯ ವ್ಯಕ್ತಿಗಳು ಯೋಚನೆ ಮಾಡುವುದಿಲ್ಲ, ಆದರೆ ಅವರು ಕೇವಲ ವಿಜ್ಞಾನದ ಆಧಾರದಲ್ಲಿ ಸಮಾಜದ ಪ್ರಗತಿಯ ಯೋಚನೆ ಮಾಡುವುದರಿಂದ ಸಮಾಜ ರಸಾತಳಕ್ಕೆ ಹೋಗಿದೆ. ಭ್ರಷ್ಟಾಚಾರ, ಲವ್ ಜಿಹಾದ್, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ರೂಪಿಸದೆ ಇರುವುದರಿಂದ ಸಮಾಜದಲ್ಲಿನ ಭ್ರಷ್ಟಾಚಾರ ಎಂದಿಗೂ ನಾಶವಾಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಮುಗಿಯಲಿಲ್ಲ, ಹಾಗಾದರೆ ರಾಷ್ಟ್ರದ ವಿಕಾಸ ಹೇಗೆ ಆಗುವುದು ?
ಹಿಂದುಗಳ ಅಸ್ತಿತ್ವದ ಪ್ರಶ್ನೆ !
ಕಳೆದ ಅನೇಕ ವರ್ಷಗಳಿಂದ ಪ್ರಭಾವಿ ಧರ್ಮಗುರುಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ದೀರ್ಘಕಾಲದಿಂದ ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿದ್ದಾರೆ; ಆದರೆ ವರ್ತಮಾನ ಕಾಲದಲ್ಲಿ ವಿಶೇಷವಾಗಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆದ ನಂತರ ಈ ಆಗ್ರಹ ಇನ್ನೂ ಹೆಚ್ಚಾಯಿತು. ಪುರಿಯ ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು, ಎಂದು ದೆಹಲಿಯಲ್ಲಿನ ತಾಲಕಟೋರ ಇಂಡೋರ್ ಸ್ಟೇಡಿಯಂನಲ್ಲಿ ಆಗ್ರಹಿಸಿದ್ದರು. ಭಾರತ ತನ್ನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿದರೆ ಇತರ ೧೫ ದೇಶಗಳು ಕೂಡ ಹಿಂದೂ ರಾಷ್ಟ್ರ ಎಂದು ಘೋಷಿಸುವುದು, ಎಂದು ಅವರು ಇಚ್ಛೆ ಕೂಡ ವ್ಯಕ್ತಪಡಿಸಿದ್ದರು. ಕೇಂದ್ರದಲ್ಲಿ ಎರಡನೆಯ ಬಾರಿ ಮೋದಿ ಸರಕಾರದ ಸ್ಥಾಪನೆಯ ನಂತರ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ದೃಷ್ಟಿಯಿಂದ ೩೭೦ ಕಲಂ ರದ್ದುಪಡಿಸಿದರು, ನಾಗರಿಕತ್ವ ಸುಧಾರಣ ಕಾನೂನು (ಸಿಎಎ), ಸರ್ವೋಚ್ಚ ನ್ಯಾಯಾಲಯದಿಂದ ರಾಮಮಂದಿರದ ಪರ ನೀಡಿರುವ ಐತಿಹಾಸಿಕ ತೀರ್ಪು ಮತ್ತು ಈಗ ರಾಮಮಂದಿರದ ಕಟ್ಟಡ ನಿರ್ಮಾಣ ಇಂತಹ ಎಲ್ಲಾ ಸಕಾರಾತ್ಮಕ ಘಟನೆಗಳು ಘಟಿಸಿದವು. ಸೆಕ್ಯುಲರ್ ಪಕ್ಷದ ಅಧಿಕಾರ ಇರುವ ರಾಜ್ಯದಲ್ಲಿ ಸಿಎಎ ಕಾನೂನು ಜಾರಿಗೊಳಿಸದೆ ಇರಲು ನಿರ್ಣಯ ತೆಗೆದುಕೊಳ್ಳುವುದು ಮತ್ತು ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಸಂತ್ರಸ್ತ ಹಿಂದೂಗಳಿಗೆ ನ್ಯಾಯ ಸಿಗದಿರುವುದು, ಇದು ಪ್ರಜಾಪ್ರಭುತ್ವದ ಪರಾಭವವಾಗಿದೆ, ಎಂದು ಹೇಳಬೇಕೇ ? ಮಣಿಪುರ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಇವುಗಳ ಸಹಿತ ಇತರ ರಾಜ್ಯಗಳಲ್ಲಿ ಮತಾಂಧತೆಯ ಹೆಚ್ಚಿರುವ ಉದ್ಧಟತನ, ಗಲಭೆಗಳು, ಹಿಂದೂ ನಾಯಕರ ಹತ್ಯೆ, ಹಿಂದುಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಮತಾಂತರ, ಲವ್ ಜಿಹಾದಿನ ಘಟನೆಗಳು ತಡೆಯುವುದಕ್ಕೆ ನರೇಂದ್ರ ಮೋದಿ ಇವರು ದಿಟ್ಟ ಪ್ರಯತ್ನ ಮತ್ತು ಕಾನೂನು ಜಾರಿಗೊಳಿಸುವುದು ಆವಶ್ಯಕವಾಗಿದೆ. ಇದು ಅಧಿಕಾರದಲ್ಲಿ ಇರುವಾಗ ಮಾಡುವುದು ಸಾಧ್ಯವಿದೆ. ೨೦೧೧ ರ ಜನಗಣತಿಯ ಪ್ರಕಾರ ೨೦೬೧ ರಲ್ಲಿ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಸ್ಥಿತಿ ಇದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಹಿಂದುಗಳಿಗೆ ಅವರ ನ್ಯಾಯ ಅಧಿಕಾರ ದೊರೆಯುವುದಕ್ಕಾಗಿ ಭಾರತಕ್ಕೆ ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಆವಶ್ಯಕವಾಗಿದೆ. ನರೇಂದ್ರ ಮೋದಿ ಧಾರ್ಮಿಕರಾಗಿದ್ದಾರೆ. ಅವರು ಅಧಿಕಾರದ ಮೂಲಕ ಸಂಪೂರ್ಣ ಸಮಾಜವನ್ನು ಧಾರ್ಮಿಕಗೊಳಿಸುವುದು, ಭಾರತದ ಹಿಂದೂಗಳಿಗೆ ಅಪೇಕ್ಷಿತವಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಪೂರ್ಣ ಶಕ್ತಿಯಿಂದ ಪ್ರಯತ್ನಿಸುವುದು ಇದೇ ಯೋಗ್ಯವಾದ ಸಮಯವಾಗಿದೆ. ಸಮಾಜದಲ್ಲಿ ಹಿಂದೂಗಳ ಸ್ಥಿತಿ ನೋಡಿದರೆ ಹಿಂದೂಗಳಿಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಕ್ಕಾಗಿ ತ್ಯಾಗ ಮಾಡಲಿಲ್ಲ, ಅಂದರೆ ಹಿಂದುತ್ವದ ಅಸ್ತಿತ್ವ ಸಂಕಷ್ಟಕ್ಕೆ ಸಿಲುಕುವುದು. ಹಿಂದೂಗಳು ಅಲ್ಪಸಂಖ್ಯಾತರಾಗುವರು. ನರೇಂದ್ರ ಮೋದಿ ಇವರು ಭಾಷಣದಲ್ಲಿ ಮಾಡಿರುವ ಎಲ್ಲಾ ವಿಷಯಗಳು ಪ್ರತ್ಯಕ್ಷದಲ್ಲಿ ಕೃತಿಯಲ್ಲಿ, ಆಚರಣೆಯಲ್ಲಿ ತರುವುದಿದ್ದರೆ, ಅವರು ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಭಾರತ ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಆವಶ್ಯಕವಾಗಿದೆ.