ಮನುಷ್ಯನು ನಾಯಿಯಾದರೆ …. !

ಜನರಿಗೆ ವಿವಿಧ ವಿಷಯಗಳ ಹವ್ಯಾಸವಿರುತ್ತವೆ, ಆಸಕ್ತಿ ಇರುತ್ತದೆ. ಅದಕ್ಕಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಸುದ್ದಿಯು ಓದಲು ಸಿಕ್ಕಿತು. ಜಪಾನ್‌ನ ಒಬ್ಬ ವ್ಯಕ್ತಿಗೆ ನಾಯಿಯಾಗುವ ಇಚ್ಛೆಯಾಗಿತ್ತು. ಆದ್ದರಿಂದ ಅವನು ತನ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಸಿಕೊಳ್ಳಲು ಒಟ್ಟು ೧೮ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ತನಗಾಗಿ ಅಲ್ಲಿನ ಬಟ್ಟೆಗಳನ್ನು ಉತ್ಪಾದಿಸುವ ಪ್ರಸಿದ್ಧ ಕಂಪನಿಗೆ ನಾಯಿಯ ಬಟ್ಟೆಗಳನ್ನು ಹೊಲಿಯಲು ಹೇಳಿದನು ಮತ್ತು ಕಂಪನಿಯು ೪೦ ದಿನಗಳೊಳಗೆ ಅದನ್ನು ಸಿದ್ಧಪಡಿಸಿಯೂ ಕೊಟ್ಟಿತು ! ಆ ವ್ಯಕ್ತಿಯು ನಾಯಿಯಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆಯನ್ನು ೧ ವರ್ಷದವರೆಗೆ ನಡೆಸಿದನು ಮತ್ತು ಅವನು ಈಗ ರಸ್ತೆಯ ಮೇಲೆ ನಾಯಿಯಂತೆ ತಿರುಗಾಡುತ್ತಿದ್ದಾನೆ. ರಸ್ತೆಯ ಮೇಲೆ ನಡೆದಾಡುವಾಗ ಅವನು ನಾಲ್ಕು ಕಾಲುಗಳಿಂದ ನಡೆಯುವ ನಾಯಿಯಂತೆಯೇ ಕಾಣಿಸುತ್ತಾನೆ. ಇದರಿಂದಾಗಿ ಅವನನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಆ ವ್ಯಕ್ತಿಯು ಯೂಟ್ಯುಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿ ತನಗೆ ಪ್ರಾಣಿಗಳಂತೆ ಜೀವಿಸಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದನು ಮತ್ತು ಅದರಂತೆ ಮಾಡಿಯೂ ತೋರಿಸಿದನು. ಈ ಲೌಕಿಕ ಸಂಗತಿಯನ್ನು ಕೇಳಿ ಎಲ್ಲರೂ ತಲೆಯ ಮೇಲೆ ಕೈ ಇಡಬಹುದು ಮತ್ತು ಇದೆಂತಹ ಹವ್ಯಾಸ ಎಂದು ಅವಹೇಳನ ಮಾಡಬಹುದು ! ಆದರೆ ಈ ವಿಷಯವನ್ನು ಇಷ್ಟಕ್ಕೇ ಬಿಡುವಂತಿಲ್ಲ. (ಆಧಾರ : ಈಟಿಏಹ್ಚಿಬ್ಚಿಡಿ ಔಜಿಜೀಛೀಚಿಟ)

ಪೃಥ್ವಿಯಲ್ಲಿರುವ ಮನುಷ್ಯನು ಒಂದು ಸಂಸ್ಕಾರಭರಿತ, ಮನಸ್ಸು, ಭಾವನೆ ಮತ್ತು ಬುದ್ಧಿಯಿರುವ ಪ್ರಾಣಿಯಾಗಿದ್ದಾನೆ. ಈ ಎಲ್ಲ ವೈಶಿಷ್ಟ್ಯಗಳನ್ನು ಉಪಯೋಗಿಸಿ ಮನುಷ್ಯನು ತನ್ನ ಜೀವನವನ್ನು ಇನ್ನಷ್ಟು ಉತ್ತ್ತುಂಗಕ್ಕೇರಿಸುವುದು ಅಪೇಕ್ಷಿತವಿದೆ; ಆದರೆ ಅವನು ಅದರ ವಿರುದ್ಧ ಮಾಡಲು ಪ್ರಾರಂಭಿಸಿದ್ದಾನೆ. ಜಪಾನಿನಲ್ಲಿ ಇನ್ನೂ ಕೆಲವು ವಿಕೃತಿಗಳನ್ನು ಜನರು ಮೆರೆಯುತ್ತಾರೆ. ಅದರಲ್ಲಿ ಕೆಲವು ಪುರುಷರಿಗೆ ಸ್ತ್ರೀ ಆಗುವ ಹವ್ಯಾಸ, ಕೆಲವು ಸ್ತ್ರೀಯರಿಗೆ ಪುರುಷರಾಗುವ ಹವ್ಯಾಸ, ಕೆಲವರಿಗೆ ದೆವ್ವವಾಗಬೇಕೆಂದು, ಇನ್ನು ಕೆಲವರಿಗೆ ವಿವಸ್ತ್ರರಾಗಿರಬೇಕೆಂದು ಅನಿಸುತ್ತದೆ, ಕೆಲವರಿಗೆ ಸಲಿಂಗವಿವಾಹ ಮಾಡಿಕೊಳ್ಳುವ ಹವ್ಯಾಸವಿರುತ್ತದೆ. ಏನಾದರೂ ಬೇರೆ ಮಾಡಿ ತೋರಿಸುವ ಹವ್ಯಾಸದಲ್ಲಿ ಅವನು ವಾಸ್ತವದಿಂದ ಮತ್ತು ನಿಸರ್ಗದಿಂದ ದೂರ ಹೋಗುತ್ತಿದ್ದಾನೆ.

ವ್ಯಕ್ತಿಸ್ವಾತಂತ್ರ್ಯದ ಅತಿರೇಕ, ಸ್ವಪ್ರಶಂಸೆ, ಅತಿಯಾದ ಮಹತ್ವಾಕಾಂಕ್ಷೆ ಮತ್ತು ಪರಾಕಾಷ್ಠೆಯ ಸ್ವಾರ್ಥ ಇವುಗಳಿಂದಾಗಿ ವ್ಯಕ್ತಿಯು ತನ್ನಲ್ಲಿಯೇ ಸಿಲುಕಿ ವಿಕೃತ ಮಾನಸಿಕತೆಗೆ ಒಳಗಾಗುತ್ತಿದ್ದಾನೆ. ಅದರ ನಂತರ ಆಗುವ ಭೀಕರ ಕೃತಿಯು ಕೇವಲ ಅವನಿಗಷ್ಟೇ ಅಲ್ಲ, ಸಾಮಾಜಿಕ ಆರೋಗ್ಯಕ್ಕೂ ಹಾನಿಕರ ವಾಗುತ್ತದೆ. ಇತರರೂ ಇಂತಹ ವಿಕೃತ ಹವ್ಯಾಸದಲ್ಲಿ ತೊಡಗಿ ಕೊಂಡರೆ ಜಗತ್ತು ಹುಚ್ಚರ ಸಂತೆಯಾಗುವುದು ನಿಶ್ಚಿತ !

‘ಮಾನವನ ಪೂರ್ವಜರು ಕೋತಿಗಳಾಗಿದ್ದರು’, ಎಂಬ ಡಾರ್ವಿನ್‌ನ ಉತ್ಕ್ರಾಂತಿವಾದದ ಕಲ್ಪನೆಯು ಅಯೋಗ್ಯವಾಗಿದೆ; ಆದರೆ ಅದು ವಿರೋಧಾಭಾಸವಾಗಿ, ಪ್ರಸ್ತುತ ಮಾನವನು ಕೋತಿಯಂತೆ ವರ್ತಿಸಿ ಮಾನವನು ಪುನಃ ಕೋತಿಯಾಗಿ ರೂಪಾಂತರವಾಗುತ್ತಿದ್ದಾನೋ ಏನೋ ? ಎಂಬ ಪರಿಸ್ಥಿತಿ ಉದ್ಭವಿಸಿದೆ. ಇದನ್ನು ತಡೆಯಲು ಮಾನವನಿಗೆ ಧರ್ಮ ಶಿಕ್ಷಣವನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ ! – ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ಪನವೇಲ.