ಲವ್ ಜಿಹಾದ್ ವಿರೋಧಿ ಕಾನೂನಿನ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ಮೊದಲ ಶಿಕ್ಷೆ !

ಮಹಮ್ಮದ್ ಸಾಬೀರ್ ಖಾನ್ ಗೆ ೨೦ ವರ್ಷದ ಜೈಲು ಶಿಕ್ಷೆ ಹಾಗೂ ೫೬ ಸಾವಿರ ರೂಪಾಯಿ ದಂಡ !

ಇಂದೂರು (ಮಧ್ಯಪ್ರದೇಶ) – ರಾಜ್ಯದ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಯಾದ ನಂತರ ಮೊದಲ ಬಾರಿಗೆ ಒಬ್ಬ ಮುಸಲ್ಮಾನನಿಗೆ ಶಿಕ್ಷೆ ವಿಧಿಸಲಾಯಿತು. ಇಂದೋರಿನಲ್ಲಿರುವ ಮಹಮ್ಮದ್ ಸಾಬೀರ್ ಖಾನ್ ಎಂಬ ಲವ್ ಜಿಹಾದಿಗೆ ೨೦ ವರ್ಷದ ಜೈಲುವಾಸದ ಶಿಕ್ಷೆ ವಿಧಿಸಲಾಗಿದೆ. ಅದರಲ್ಲಿ 5 ವರ್ಷ ಕಠಿಣ ಶಿಕ್ಷೆ ಒಳಗೊಂಡಿದೆ ಹಾಗೂ ಅವನಿಗೆ ೫೬ ಸಾವಿರ ರೂಪಾಯಿಯ ದಂಡ ಕೂಡ ವಿಧಿಸಲಾಗಿದೆ. ‘ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಅಡಿಯಲ್ಲಿ ೨೦೨೧ ರ ಕಲಂ 3/5 ರ ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.

೧. ಪಬ್ಲಿಕ್ ಪ್ರಾಸ್ಯುಕ್ಯುಟರ್ ಸುಶೀಲಾ ರಾಠೋರ ಇವರು ಈ ಸಂದರ್ಭದಲ್ಲಿ ಪ್ರಸಾರ ಮಾಧ್ಯಮಗಳಿಗೆ, ೨೦ ವರ್ಷದ ಮಹಮ್ಮದನು ಓರ್ವ ಅಪ್ರಾಪ್ತ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು. ಚಾಕುನಿಂದ ಬೆದರಿಸಿ ಸಪ್ಟೆಂಬರ್ ೯, ೨೦೨೦ ರಂದು ಆಕೆಯ ಮೇಲೆ ಬಲಾತ್ಕಾರ ಮಾಡಿ ಆಕೆಯನ್ನು ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸಿದನು. ಈ ಕೃತ್ಯ ಸಮಾಜದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅವನಿಗೆ ಕಠಿಣ ಶಿಕ್ಷೆ ವಿಧಿಸಿದೆ.

೨. ಮಹಮ್ಮದನ್ನು ಸಂತ್ರಸ್ತೆಯ ಮೇಲೆ ಬಲಾತ್ಕಾರ ಮಾಡಿದ ನಂತರ ಕೆಲವು ದಿನಗಳ ನಂತರ ಅವನು ಆಕೆಯ ಮನೆಗೆ ಹೋದನು ಮತ್ತು ಆಕೆಯ ಮೇಲೆ ಮತ್ತೆ ಅತ್ಯಾಚಾರ ನಡೆಸಿದನು. ಆ ಸಮಯದಲ್ಲಿ ಅವನು ಆಕೆಯ ಅಶ್ಲೀಲ ಚಿತ್ರಗಳನ್ನು ಸೆರೆ ಹಿಡಿದು ಅದರ ವಿಡಿಯೋ ತಯಾರಿಸಿದನು. ನಂತರ ಅವನು ಹೇಳಿದಂತೆ ವರ್ತಿಸಲು ಆಕೆಗೆ ಅನಿವಾರ್ಯಗೊಳಿಸಿದನು. ಆಕೆ ಬಾಯಿ ಬಿಟ್ಟರೆ ವಿಡಿಯೋ ಪ್ರಸಾರಗೊಳಿಸುವ ಬೆದರಿಕೆ ನೀಡಿದನು. ಇದರಿಂದ ಆಕೆ ಮತ್ತು ಆಕೆಯ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವನು ಆಕೆಗೆ ಹೆದರಿಸಿದನು.

೩. ಕಾಲಾಂತರದಲ್ಲಿ ಅವನು ಆಕೆಗೆ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸಿದನು. ಕೆಲವು ದಿನದ ನಂತರ ಸಂತ್ರಸ್ತೇ ಆಕೆಯ ಮೇಲಿನ ಅತ್ಯಾಚಾರದ ಬಗ್ಗೆ ಮನೆಯವರಿಗೆ ತಿಳಿಸಿದ ನಂತರ ಪೊಲೀಸರಿಗೆ ದೂರು ನೀಡಲಾಯಿತು ಮತ್ತು ಮಹಮ್ಮದನಿಗೆ ಬಂಧಿಸಲಾಯಿತು.

ಸಂಪಾದಕೀಯ ನಿಲುವು

ದೇಶಾದ್ಯಂತ ಹಬ್ಬಿರುವ ಮತ್ತು ಹಿಂದುಗಳ ಸರ್ವನಾಶಕ್ಕೆ ಪ್ರಯತ್ನಿಸುವ ಲವ್ ಜಿಹಾದ್ ಬಗ್ಗೆ ಪ್ರಭಾವಿ ಲಗಾಮು ಹಾಕುವುದಕ್ಕೆ ೨೦ ವರ್ಷ ಶಿಕ್ಷೆಗಿಂತಲೂ ಗಲ್ಲಿಗೇರಿಸುವ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ, ಎಂದು ಹಿಂದುಗಳಿಗೆ ಅನಿಸುತ್ತದೆ !