ಅರಾಜಕತೆಯ ಅಂಚಿನಲ್ಲಿ ‘ಪಾಪಿ’ಸ್ತಾನ !

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಯಂತೆ ರಾಷ್ಟ್ರಪತಿ ಆರಿಫ್ ಅಲ್ವಿ ಇವರು ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿದರು !

ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕ ಕೊನೆಗೊಂಡಿದ್ದು ಆಗಸ್ಟ್ ೯ ರ ಮಧ್ಯರಾತ್ರಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಯಂತೆ ರಾಷ್ಟ್ರಪತಿ ಆರಿಫ್ ಅಲ್ ಇವರು ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿದರು. ಪಾಕಿಸ್ತಾನದ ೩೪೨ ಸದಸ್ಯರಿರುವ ಸಂಸತ್ತು ಯಾವಾಗಲೂ ರಾಜಕೀಯ ಅಸ್ಥಿರತೆಯನ್ನು ಕಂಡಿದೆ. ಮುಂಬರುವ ೯೦ ದಿನಗಳಲ್ಲಿ ಅಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ; ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ಶೆಹಬಾಜ್ ಇವರ ಕಾರ್ಯಕಾಲದಲ್ಲಿ ಕಳೆದ ೪ ತಿಂಗಳಿನಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನದ ರಾಜಕೀಯದಲ್ಲಿ ಯಾವಾಗಲೂ ಸೇನೆಯ ಪ್ರಾಬಲ್ಯವಿದೆ. ಪಾಕಿಸ್ತಾನದ ಸೇನೆಯು ಈ ಹಿಂದೆ ಹಲವು ಬಾರಿ ವಿವಿಧ ಕಾರಣಗಳನ್ನು ನೀಡಿ ಅಂದಿನ ಸರಕಾರಗಳನ್ನು ವಿಸರ್ಜಿಸಿದೆ. ಯಾವ ಪಕ್ಷವನ್ನು ಚುನಾಯಿಸಬೇಕೆಂಬುದನ್ನು ಹೆಚ್ಚಾಗಿ ಪಾಕಿಸ್ತಾನದ ಸೇನೆ ನಿರ್ಧರಿಸುತ್ತದೆ. ಆದ್ದರಿಂದ ಯಾವ ಸರಕಾರ ಬಂದರೂ ಅದು ಸೇನೆಯ ಕೈಗೊಂಬೆಯಾಗುವುದು ಖಂಡಿತ !

ಭಾರತದೊಂದಿಗೆ ಯಾವಾಗಲೂ ಶತ್ರುತ್ವ !

ಭಾರತ ಮತ್ತು ಪಾಕಿಸ್ತಾನ ಬೇರ್ಪಟ್ಟಾಗಿನಿಂದಲೂ ಪಾಕಿಸ್ತಾನವು ಯಾವಾಗಲೂ ಭಾರತದೊಂದಿಗೆ ಹಗೆತನದ ರೀತಿಯಲ್ಲಿ ವ್ಯವಹರಿಸಿದೆ. ಪಾಕಿಸ್ತಾನದಿಂದ ನಿರಂತರವಾಗಿ ಭಾರತದಲ್ಲಿ ಅಶಾಂತಿ ಸೃಷ್ಟಿಸಿ ಅಮಾಯಕ ನಾಗರಿಕರನ್ನು ಹತ್ಯೆ ಮಾಡುತ್ತಿದೆ. ೨೦೧೪ ರ ಮೊದಲು, ಭಾರತ ಯಾವಾಗಲೂ ಪಾಕಿಸ್ತಾನದೊಂದಿಗೆ ಮಾತುಕತೆ ಮತ್ತು ಸಾಮರಸ್ಯದ ಭಾಷೆಯನ್ನು ಬಳಸುತ್ತಿತ್ತು. ತದ್ವಿರುದ್ದ ಪಾಕಿಸ್ತಾನದ ಆಡಳಿತಗಾರರು ಮತ್ತು ಸೈನ್ಯವು ಯಾವಾಗಲೂ ಭಾರತವನ್ನು ಹೇಗೆ ನಿಂದಿಸಬಹುದು ? ಅದಕ್ಕಾಗಿಯೇ ಶ್ರಮಿಸುತ್ತಿದೆ. ಭಾರತದೊಂದಿಗೆ ಯಾವಾಗಲೂ ಶತ್ರುತ್ವವನ್ನು ಇಟ್ಟುಕೊಳ್ಳಲು ಪ್ರಯತ್ನಿಸುವ ಪಾಕಿಸ್ತಾನವು ಪ್ರಸ್ತುತ ಭಾರಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ, ಆದರೆ ಭಾರತವು ವಿಶ್ವದ ಅಗ್ರ ೫ ಆರ್ಥಿಕತೆಗಳಲ್ಲಿ ಒಂದಾಗಿದೆ.

ರಷ್ಯಾದೊಂದಿಗೆ ಅಪಾಯ !

ಈ ಹಿಂದೆ ರಷ್ಯಾ-ಉಕ್ರೇನ್ ಕದನದಲ್ಲಿ ‘ನಾವು ರಷ್ಯಾ ಜೊತೆಗಿದ್ದೇವೆ’, ಎಂದು ಪಾಕಿಸ್ತಾನ ಹೇಳಿತ್ತು. ಇದರೊಂದಿಗೆ ಇತ್ತೀಚೆಗಷ್ಟೇ ಉಕ್ರೇನ್‌ನ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ‘ಪಾಕಿಸ್ತಾನ ಸರಕಾರ ಉಕ್ರೇನ್‌ಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ಪೂರೈಸುವುದಿಲ್ಲ’ ಎಂದು ಹೇಳಿದ್ದರು. ಮತ್ತೊಂದೆಡೆ, ಉಕ್ರೇನ್‌ಗೆ ಮದ್ದುಗುಂಡುಗಳನ್ನು ಪೂರೈಸಲು ಪಾಕಿಸ್ತಾನವು ದೊಡ್ಡ ಯೋಜನೆಯನ್ನು ಯೋಜಿಸಿದೆ ಮತ್ತು ಪೋಲೆಂಡ್ ಮೂಲಕ ಉಕ್ರೇನ್‌ಗೆ ೧೫೦ ಕಂಟೈನರ್‌ಗಳನ್ನು ಕಳುಹಿಸಲಾಗುವುದು ಎಂದು ಹೇಳಿತು. ಆರ್ಥಿಕವಾಗಿ ತೊಂದರೆಗೀಡಾದ ಪಾಕಿಸ್ತಾನಕ್ಕೆ ‘ಇದರಿಂದ ಹಣ ಸಿಗಲಿದೆ’ ಎಂದು ಆಶಿಸಿದೆ; ಆದರೆ ಅದೇ ಸಮಯದಲ್ಲಿ ಅದು ರಷ್ಯಾದ ವಿರುದ್ಧ ನಿಲುವು ತೆಗೆದುಕೊಂಡಿತು ಎಂದು ಹೇಳಬೇಕಾಗಬಹುದು. ಕೆಲವೊಮ್ಮೆ ಪಾಕಿಸ್ತಾನವು ರಷ್ಯಾಕ್ಕೆ ಅಪಾಯವಾದರೇ, ಕೆಲವೊಮ್ಮೆ ಅಮೇರಿಕಾಗೆ ಅಪಾಯ ಮತ್ತು ಕೆಲವೊಮ್ಮೆ ಚೀನಾಗೆ ಅಪಾಯವಾಗಿತ್ತು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿಯೂ ಪಾಕಿಸ್ತಾನದ ವಿಶ್ವಾಸಾರ್ಹತೆ ಕಳೆದುಕೊಂಡಿದೆ.

ಇಮ್ರಾನ್ ಖಾನ್ ಸಂದಿಗ್ಧ ಪರಿಸ್ಥಿತಿಯನ್ನು ನಿರ್ಮಿಸುವ ಪ್ರಯತ್ನ !

ಒಂದು ಕಾಲದಲ್ಲಿ ಪಾಕಿಸ್ತಾನ ಸೇನೆಯ ಪ್ರೀತಿಗೆ ಪಾತ್ರರಾಗಿದ್ದ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಸೇನೆಯ ವಿರುದ್ಧ ವಾಗ್ದಾಳಿ ನಡೆಸಿದಾಗ ಅವಿಶ್ವಾಸ ನಿರ್ಣಯವನ್ನು ಎದುರಿಸಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಪಾಕಿಸ್ತಾನ ಸೇನೆಯ ವಿರುದ್ಧ ಇಮ್ರಾನ್ ಅವರ ನಿಲುವು ಇಷ್ಟು ಹಾಳಾಯಿತು ಎಂದರೆ, ಕಳೆದ ಕೆಲವು ತಿಂಗಳುಗಳಿಂದ ಹಲವಾರು ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗಿದೆ. ಇದೀಗ ಇಮ್ರಾನ್ ಖಾನ್ ‘ತೋಷಖಾನಾ’ ಪ್ರಕರಣದಲ್ಲಿ ೩ ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಕೂಡಲೇ ನ್ಯಾಯಾಲಯವು ೫ ವರ್ಷಗಳ ಕಾಲ ಅನರ್ಹಗೊಳಿಸಿತು. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಇಮ್ರಾನ್ ಸ್ಪರ್ಧಿಸದಂತೆ ಸೇನೆ ವ್ಯವಸ್ಥೆ ಮಾಡಿಟ್ಟಿದೆ.

ನಿರಂತರವಾಗಿ ಸಾಲ ಮತ್ತು ಕುಗ್ಗುತ್ತಿರುವ ಆರ್ಥಿಕತೆ !

ಕಟ್ಟರ ಧಾರ್ಮಿಕತೆ ಮತ್ತು ದ್ವೇಷದ ರಾಜಕೀಯದಿಂದಾಗಿ ಪಾಕಿಸ್ತಾನ ಎಂದಿಗೂ ಅಭಿವೃದ್ಧಿ ಹೊಂದಲಿಲ್ಲ. ಕಳೆದ ಅನೇಕ ವರ್ಷಗಳಿಂದ ಚೀನಾ ಮತ್ತು ಅಮೇರಿಕಾ ದೇಶಗಳು ಪಾಕಿಸ್ತಾನಕ್ಕೆ ನಿಯಮಿತವಾಗಿ ಸಾಲಗಳನ್ನು ನೀಡುತ್ತಿವೆ; ಆದರೆ ಪಾಕಿಸ್ತಾನ ಈ ಹಣವನ್ನು ಅಭಿವೃದ್ಧಿಗೆ ಖರ್ಚು ಮಾಡುವ ಬದಲು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿದೆ. ಪಾಕಿಸ್ತಾನದಲ್ಲಿ ಆಹಾರ ಧಾನ್ಯಗಳಿಂದ ಹಿಡಿದು ಎಲ್ಲದರ ಬೆಲೆ ಗಗನಕ್ಕೇರುತ್ತಿದೆ. ಗೋಧಿ, ಅಕ್ಕಿ, ಹಾಲು, ತರಕಾರಿ, ಇಂಧನ ಬೆಲೆ ಗಗನಕ್ಕೇರಿದ್ದು, ಅನೇಕರಿಗೆ ಒಂದು ಹೊತ್ತಿನ ಊಟವೂ ಸಿಗದಂತಾಗಿದೆ. ಸದ್ಯ ಈರುಳ್ಳಿ ಕೆಜಿಗೆ ೨೨೦ ರೂಪಾಯಿಗಳು, ನಿಂಬೆಗೆ ೧೬೦ ರೂಪಾಯಿಗಳು, ಟೊಮೆಟೊ ಕೆಜಿಗೆ ೫೦೦ ರೂಪಾಯಿಗಳು, ಪೆಟ್ರೋಲ್ ಲೀಟರ್‌ಗೆ ೨೭೩ ರೂಪಾಯಿಗಳು, ಹಾಲು ಲೀಟರ್‌ಗೆ ೨೧೦ ರೂಪಾಯಿಗಳು ಹೀಗೆ ದರ ಹೆಚ್ಚಾಗಿ ಹಣದುಬ್ಬರವು ಸಾಮಾನ್ಯಜನರ ಬೆನ್ನು ಮುರಿದಿದೆ.

ಪಾಕಿಸ್ತಾನದ ರೂಪಾಯಿಯ ಮೌಲ್ಯವು ಎಷ್ಟು ಕುಸಿದಿದೆ ಎಂದರೆ ೧ ಡಾಲರ್ ಬೆಲೆ ೨೭೦ ಪಾಕಿಸ್ತಾನಿ ರೂಪಾಯಿಗಳು ಎಣಿಸಬೇಕಾಗುತ್ತಿದೆ. ಪ್ರಸ್ತುತ, ದೇಶವನ್ನು ನಡೆಸಲು ಪಾಕಿಸ್ತಾನದ ಬಳಿ ೧ ತಿಂಗಳಿಗೆ ಸಾಕಾಗುವಷ್ಟು ಹಣವನ್ನು ಮಾತ್ರ ಹೊಂದಿದೆ. ಅಂದರೆ ಪಾಕಿಸ್ತಾನದ ಸ್ನೇಹಿತ ಚೀನಾ ಎಂದಿನಂತೆ ನೆರವಿಗೆ ಬಂದಿದ್ದು, ಇತ್ತೀಚೆಗಷ್ಟೇ ಚೀನಾ ಪಾಕಿಸ್ತಾನಕ್ಕೆ ೨ ವರ್ಷಕ್ಕೆ ೨.೪ ಅಬ್ಜ ಡಾಲರ್ (೬೪೮ ಕೋಟಿ ರೂಪಾಯಿ) ಸಾಲ ನೀಡಿದೆ. ಆದ್ದರಿಂದ, ಪಾಕಿಸ್ತಾನವು ಚೀನಾ ಏನು ಹೇಳುತ್ತದೆಯೋ ಅದನ್ನು ಮಾಡುತ್ತದೆ ಮತ್ತು ಅಂದರೆ ಭಾರತಕ್ಕೆ ತೊಂದರೆ ನೀಡಲು ಏನು ಮಾಡಬಹುದೋ ಅದನ್ನೆಲ್ಲವನ್ನು ಚೀನಾ ಭವಿಷ್ಯದಲ್ಲಿ ಪಾಕಿಸ್ತಾನದಿಂದ ಮಾಡಿಸಿಕೊಳ್ಳಲಿದೆ.

ಭಾರತವು ಹೆಚ್ಚು ಜಾಗರೂಕರಾಗಿರಬೇಕು !

ಪಾಕಿಸ್ತಾನದ ಪರಿಸ್ಥಿತಿ ಯಾವಾಗ ಬೇಕಾದರೂ ಸೇನೆ ಆಕ್ರಮಿಸಿಕೊಳ್ಳಬಹುದು ಎಂಬಂತಾಗಿದೆ. ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಬಂದಾಗ ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗುತ್ತದೆ. ಮುಷರಫ್ ಅಧಿಕಾರಾವಧಿಯಲ್ಲಿ ಕಾರ್ಗಿಲ್ ಯುದ್ಧ ನಡೆದಿತ್ತು. ಇದರೊಂದಿಗೆ ಪಾಕಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ದಂಗೆಯಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಕಿಸ್ತಾನ ಛಿದ್ರವಾಗುವ ಸಂಭವವಿದ್ದು, ಈ ಎಲ್ಲ ಬೆಳವಣಿಗೆಗಳ ಬಗ್ಗೆ ಭಾರತ ಎಚ್ಚೆತ್ತುಕೊಳ್ಳುವುದು ಅಗತ್ಯವಿದೆ. ಈ ಸ್ಥಿತಿಯ ಲಾಭ ಪಡೆದು ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮುಕ್ತಗೊಳಿಸಬೇಕು. ಇದು ಸಂಭವಿಸಿದರೆ, ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕತೆಗೆ ಇದು ಅತ್ಯುತ್ತಮ ಉದಾಹರಣೆಯಾಗುವುದು !

ಪಾಕಿಸ್ತಾನದಲ್ಲಿನ ಗೊಂದಲದ ಲಾಭವನ್ನು ಪಡೆದುಕೊಂಡು ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮುಕ್ತಗೊಳಿಸಲು ಮುಂದಾಗಬೇಕು !