ಭಾರತೀಯರ ಪಾಶ್ಚಾತ್ತೀಕರಣ ಎಷ್ಟೊಂದು ಮಿತಿಮೀರಿದೆ ಎಂದರೆ ‘ಭಾರತ ಸ್ವತಂತ್ರವಾಯಿತು, ಎಂದು ಹೇಳುವುದೇ ತಪ್ಪಾಗುವುದು !

 

೧. ಭಾಷೆ

ಹಿಂದಿಯು ಭಾರತದ ರಾಷ್ಟ್ರಭಾಷೆಯಾಗಿದೆ. ಆದರೂ ವಿಧಾನಸಭೆಯಲ್ಲಿ, ಕೆಲವು ರಾಜ್ಯಗಳಲ್ಲಿ ವಿಧಾನಪರಿಷತ್ತು, ನ್ಯಾಯಾಲಯ, ಸಚಿವಾಲಯ ಮುಂತಾದೆಡೆಗಳಲ್ಲಿ ಹೆಚ್ಚಿನ ಕಾರ್ಯಕಲಾಪಗಳು ಆಂಗ್ಲ ಭಾಷೆಯಲ್ಲಾಗುತ್ತವೆ. ಹೆಚ್ಚಿನ ಭಾರತೀಯರು ಆಂಗ್ಲದಲ್ಲಿಯೇ ಸಹಿ ಮಾಡುತ್ತಾರೆ. ಹೆಸರಲ್ಲಿನ ಮೊದಲನೇ ಅಕ್ಷರಗಳನ್ನು ಆಂಗ್ಲದಲ್ಲಿಯೇ ಬರೆಯುತ್ತಾರೆ. ಯಾರಾದರೊಬ್ಬರನ್ನು ಸ್ವಾಗತಿಸುವಾಗ ಅಥವಾ ಆಮಂತ್ರಿಸು ವಾಗ ‘ಹಾಯ್, ‘ಹಲೋ ಬೀಳ್ಕೊಡುವಾಗ ‘ಬಾಯ್, ‘ಸಿ ಯೂ ಇಂತಹ ಶಬ್ದಪ್ರಯೋಗಗಳು ಪ್ರಚಲಿತವಾಗುತ್ತಿವೆ.

೨. ಶಿಕ್ಷಣ

ಆಂಗ್ಲ ಶಿಕ್ಷಣತಜ್ಞ ಮೆಕಾಲೆಯು ರೂಪಿಸಿದ ತಂತ್ರಕ್ಕನುಸಾರ ಭಾರತದ ಶಿಕ್ಷಣಪದ್ಧತಿ ನಡೆಯುತ್ತಿದೆ. ಅನೇಕ ಮಕ್ಕಳು ಆಂಗ್ಲ ಮಾಧ್ಯಮದಿಂದ ಶಿಕ್ಷಣ ಪಡೆಯುತ್ತಾರೆ ಮತ್ತು ಶಾಲೆಯ ಸಮವಸ್ತ್ರ ಸಹ (ಉದಾ. ಟೈ, ಬೂಟು) ಮತ್ತು ಆಚರಣೆಯೂ ಪಾಶ್ಚಾತ್ಯರಂತೆಯೇ ಇರುತ್ತದೆ.

೩. ಆಹಾರ

ವಿದೇಶಗಳಲ್ಲಿ ಪ್ರಚಲಿತವಿರುವ ಪಿಝ್ಝಾ, ಬರ್ಗರ, ಚಾಕಲೆಟ, ಐಸ್ಕ್ರೀಮ ಮುಂತಾದ ಪದಾರ್ಥಗಳು ಭಾರತೀಯರ ದೈನಂದಿನ ಆಹಾರದಲ್ಲಿರುತ್ತವೆ. ಕೈಯಿಂದ ಊಟ ಮಾಡದೇ ಚಮಚ, ಮುಳ್ಳಿನಚಮಚ ಇವುಗಳಿಂದ ಊಟ ಮಾಡುವುದು ಭಾರತೀಯರಲ್ಲಿ ಪ್ರತಿಷ್ಠೆಯ ಲಕ್ಷಣವೆಂದು ಪರಿಗಣಿಸಲ್ಪಡುತ್ತಿದೆ.

೪. ದೈನಂದಿನ ಆಚರಣೆ

ಎದುರಿಗೆ ಬಂದ ವ್ಯಕ್ತಿಗೆ ಕೈ ಜೋಡಿಸಿ ನಮಸ್ಕರಿಸುವುದು, ಕಿರಿಯರು ಹಿರಿಯರಿಗೆ ಬಗ್ಗಿ ನಮಸ್ಕರಿಸುವುದು, ಮುಸ್ಸಂಜೆಯ ಸಮಯದಲ್ಲಿ ಸ್ತೋತ್ರಪಠಣ ಮಾಡುವುದು ಈ ಪದ್ಧತಿಯು ಕ್ರಮೇಣ ಕಣ್ಮರೆಯಾಗಿ ಆ ಜಾಗದಲ್ಲಿ ಶೆಕಹ್ಯಾಂಡ ಮಾಡು ವುದು, ಮುಸ್ಸಂಜೆಯ ಸಮಯದಲ್ಲಿ ದೂರಚಿತ್ರವಾಹಿನಿಯನ್ನು ವೀಕ್ಷಿಸುವಂತಹ ದಿನಚರಿ ರೂಢಿಯಾಗಿದೆ.

೫. ಉಡುಪು

ಹೆಚ್ಚಿನ ಭಾರತೀಯರು ಸ್ತ್ರೀ-ಪುರುಷರು ಪಾಶ್ಚಾತ್ಯರಂತೆ ಸ್ಕರ್ಟ, ಶರ್ಟ-ಪ್ಯಾಂಟ, ಸೂಟು-ಬೂಟು ಇಂತಹ ಉಡುಪು ಗಳನ್ನು ಧರಿಸುತ್ತಾರೆ.

೬. ಉತ್ಸವಗಳು

ವ್ಯಾಲೆಂಟೈನ ಡೆ, ಮದರ-ಫಾದರ‍್ಸ ಡೆ, ರೋಸ ಡೆ, ನ್ಯೂ ಇಯರ ಇವು ಒಂದು ಕಾಲದಲ್ಲಿ ಪಾಶ್ಚ್ಚಾತ್ಯ ದೇಶಗಳಲ್ಲಿ ಆಚರಿಸಲಾಗುತ್ತಿರುವ ಉತ್ಸವಗಳನ್ನು ಈಗ ಭಾರತದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ. ದೈನಂದಿನ ಜೀವನದಲ್ಲಿ ಭಾರತೀಯರು ಸರ್ವತೋಮುಖ ವಾಗಿ ಪಾಶ್ಚಾತ್ಯರ ಅಂಧಾನುಕರಣ ಮಾಡುತ್ತಿರುವಾಗ ‘ದೇಶ ಸ್ವತಂತ್ರವಾಗಿದೆ, ಎಂದು ಹೇಳುವುದಾದರೂ ಹೇಗೆ ?

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩೦.೧೨.೨೦೧೪)