ಮಾಲದೀವನಲ್ಲಿ ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡುವ ೨೯ ಕಂಪನಿಗಳ ಮೇಲೆ ಅಮೇರಿಕಾದಿಂದ ನಿರ್ಬಂಧ !

ವಾಷಿಂಗ್ಟನ್ (ಅಮೆರಿಕ) – ಅಮೇರಿಕಾದ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಕಾಯ್ದಾದಂತಹ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಮಾಲದೀವನಲ್ಲಿ ಸಹಾಯ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರ ಅಡಿಯಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ಸಹಾಯ ಮಾಡುವ ೨೦ ವ್ಯಕ್ತಿಗಳು ಮತ್ತು ೨೯ ಕಂಪನಿಗಳ ಮೇಲೆ ನಿಷೇಧ ಹೇರಲಾಗಿದೆ.

ಅಮೇರಿಕಾದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯು ಮೀಲರ್ ಇವರು ಜುಲೈ ೩೧ ರಂದು, ಯಾವ ಜನರ ಮೇಲೆ ನಿಷೇಧ ಹೇರಲಾಗಿದೆಯೋ ಅವರು ಪತ್ರಕರ್ತರು ಮತ್ತು ಸ್ಥಳೀಯ ಸರಕಾರಿ ಅಧಿಕಾರಿಗಳು ಇವರ ಮೇಲೆ ದಾಳಿ ಮಾಡುವ ಯೋಜನೆ ರೂಪಿಸುತ್ತಿದ್ದರು. ಮಾಲದೀವನಲ್ಲಿ ಭಯೋತ್ಪಾದಕ ದಾಳಿ ಮಾಡುವುದಕ್ಕಾಗಿ ಆರ್ಥಿಕ ಮತ್ತು ಇತರ ಸಹಾಯ ಮಾಡುವವರ ವಿರುದ್ಧ ಅಮೆರಿಕ ಕ್ರಮ ಕೈಗೊಳ್ಳುತ್ತದೆ. ನಿಷೇಧಿತ ವ್ಯಕ್ತಿಗಳಲ್ಲಿ ಮಹಮ್ಮದ್ ಆಮೀನ್ ನ ಹೆಸರು ಕೂಡ ಒಳಗೊಂಡಿದ್ದು ಅವರ ಮೇಲೆ ಮುಸಲ್ಮಾನರಿಗೆ ‘ಇಸ್ಲಾಮಿಕ್ ಸ್ಟೇಟ್ ಖೂರಾಸಾನ’ದಲ್ಲಿ ಭರ್ತಿ ಮಾಡಿಸುವ ಆರೋಪವಿದೆ. ಅಮೇರಿಕಾವು ಅಮೀನಗೆ ೨೦೧೯ ರಿಂದ ಭಯೋತ್ಪಾದಿಕ ಎಂದು ಘೋಷಿಸಿತ್ತು. ಇಂದಿನ ಇರಾನ್, ಅಪಘಾನಿಸ್ತಾನ್, ತಜಕಿಸ್ಥಾನ್, ತುರ್ಕಮೇನಿಸ್ಥಾನ, ಉಜಬೇಕೀಸ್ಥಾನ ಮತ್ತು ಉತ್ತರ ಅಪಘಾನಿಸ್ತಾನ್ ಈ ದೇಶಗಳ ಭೂಭಾಗಕ್ಕೆ ‘ಖುರಾಸಾನ’ಎನ್ನಲಾಗುತ್ತದೆ.